ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಹೊಂದಿರುವ ಆಕಾಶವಾಣಿ ಭದ್ರಾವತಿ FM 103.5 MW 675 KHz ನಲ್ಲಿ ಜುಲೈ 17 2023 ಸೋಮವಾರದಿಂದ ಹೊಸ ಕಾರ್ಯಕ್ರಮ ಸರಣಿಯು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ಪ್ರಸಾರವಾಗಲಿದೆ.
“ಯು.ಎ.ಹೆಚ್.ಎಸ್ ನೇಗಿಲ ಮಿಡಿತ” ವಿಶೇಷ ಕಾರ್ಯಕ್ರಮ ಸರಣಿ 17.07.2023 ರಿಂದ 15.07.2024ವರೆಗೆ ಪ್ರತೀ ದಿನ ಬೆಳಿಗ್ಗೆ 6.40ಕ್ಕೆ ಮೂಡಿಬರಲಿದೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿ-ಮೀನು ಸಾಕಾಣಿಕೆ, ಮುಂತಾದ ಕೃಷಿ
ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ ಹಾಗು ಇನ್ನಿತರ ಕೇಂದ್ರಗಳ ವಿಜ್ಞಾನಿಗಳು, ತಜ್ಞರು ಮತ್ತು
ಸಂಶೋಧಕರುಗಳು ಸಮಗ್ರ ಬೆಳೆ ಪದ್ಧತಿ, ಆಧುನಿಕ ಕೃಷಿ ತಂತ್ರಜ್ಞಾನ, ರೋಗ ನಿರ್ವಹಣೆ, ತಳಿ ನಿರ್ವಹಣೆ, ಕೀಟಬಾಧೆ ನಿರ್ವಹಣೆ, ಮೌಲ್ಯವರ್ಧನೆ, ಮಾರುಕಟ್ಟೆ ಹಾಗು ಇನ್ನಿತರ ಮಾಹಿತಿಗಳನ್ನು ನೀಡುವ ವಿಶೇಷ ಸರಣಿ
‘ಯು.ಎ.ಹೆಚ್.ಎಸ್. ನೇಗಿಲ ಮಿಡಿತ’, ದಿನಾಂಕ 17.07.2023 ರ ಸೋಮವಾರದಿಂದ, ಪ್ರತಿದಿನ ಬೆಳಿಗ್ಗೆ 6.40ಕ್ಕೆ, ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಮೂಡಿಬರಲಿದೆ. ಭದ್ರಾವತಿ ಆಕಾಶವಾಣಿ ಸಿದ್ದಪಡಿಸಿದ ಈ ಕಾರ್ಯಕ್ರಮ ಆಕಾಶವಾಣಿ ಚಿತ್ರದುರ್ಗ, ಮಡಿಕೇರಿ ಹಾಗೂ ಮಂಗಳೂರು ಕೇಂದ್ರಗಳಿಂದಲೂ ಪ್ರಸಾರವಾಗಲಿದೆ. ರೈತಬಾಂಧವರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ಈ ಕಾರ್ಯಕ್ರಮವನ್ನು ಪ್ರಸಾರ ಸಮಯದಲ್ಲಿ News On Air App ನಲ್ಲೂ ಕೇಳಬಹುದು. ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ: 9481572600 ಮುಖಾಂತರ ಹಂಚಿಕೊಳ್ಳಬಹುದು ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರು ಕೋರಿಕೊಂಡಿದ್ದಾರೆ.