ಶಿವಮೊಗ್ಗ, ಫೆಬ್ರವರಿ 23, ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮಾ.03 ರಂದು ಮೇವು ಬೆಳೆಗಳ ಕುರಿತಾಗಿ ರೈತರಿಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾಗಿರುವ ಮಲೆನಾಡು ಗಿಡ್ಡ ತಳಿ ಹೊಂದಿರುವ ಸಣ್ಣ ಹಿಡುವಳಿದಾರರಿಗೆ ಹುಲ್ಲುಗಾವಲು ನಿರ್ವಹಣೆ ಯೋಜನೆಯಡಿಯಲ್ಲಿ, ತರಬೇತಿಯನ್ನು ಪ್ರಾಣಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ ಶಿವಮೊಗ್ಗ ಇಲ್ಲಿ ಆಯೋಜಿಸಲಾಗುವುದು.
ತರಬೇತಿಯು ಹಸಿರು ಮೇವಿನ ಬೆಳೆಗಳ ಬೇಸಾಯ ಕ್ರಮಗಳು, ಮೇವು ಬೀಜಗಳ ಸಂಸ್ಕರಣೆ ಹಾಗೂ ಮೇವಿನ ತಳಿಗಳ ಪಸರಣೆ-ಪ್ರಾಯೋಗಿಕ ತರಬೇತಿ, ಹುಲ್ಲುಗಾವಲು ನಿರ್ವಹಣೆಯ ಅಗತ್ಯತೆಯ ಕುರಿತಾದ ವಿವಿಧ ವಿಷಯಗಳು ಒಳಗೊಂಡಿರುತ್ತದೆ.
ಆಸಕ್ತ ರೈತರು/ರೈತ ಮಹಿಳೆಯರು ದೂರವಾಣಿ ಸಂಖ್ಯೆ : 9916198909, 8310384135 ಗೆ ಎಸ್ಎಮ್ಎಸ್/ವಾಟ್ಸಾಪ್ ಅಥವಾ ನೇರವಾಗಿ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು ಪ್ರಾಣಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ಸಂಯೋಜಕರಾದ ಡಾ.ಆರ್. ಜಯಶ್ರೀ ತಿಳಿಸಿದ್ದಾರೆ.