ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮ ಪಂಚಾಯಿತಿಯಲ್ಲಿ ಇಂದು 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಪಚ್ಚತಾ ಹಿ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗ್ರಾಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಜಾಗೃತಿ ಜಾಥಾ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸರಿತಾ ಟಿ.ಟಿ., ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರಾದ ಗಣೇಶ್ ಆರ್ ನಾಯ್ಕ್, ಅಧ್ಯಕ್ಷರಾದ ನಂಬಳ ಮುರುಳಿ, ಉಪಾಧ್ಯಕ್ಷರಾದ ವಿಜಯ, ಸದಸ್ಯರಾದ ಪುಟ್ಟಣ್ಣ, ಶಾರದ, ವಿಜಯ ಬಾಸ್ಕರ್ ಸಿದ್ದಾರ್ಥ್, ರಾಜೀವಿ, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ನೆಹರೂ ಯುವ ಕೇಂದ್ರದ ಪದಾಧಿಕಾರಿಗಳ, ಮೊದಲಾದವರು ಉಪಸ್ಥಿತರಿದ್ದರು.