ಶಿವಮೊಗ್ಗ, ಮಾರ್ಚ್ 04, : ಸ್ಪರ್ಶ್ಗೆ ವರ್ಗಾಯಿಸಲ್ಪಟಿರುವ ಮಿಲಿಟರಿ ಪಿಂಚಣಿ/ಮಿಲಿಟರಿ ವಿಧವಾ ಪಿಂಚಣಿದಾರರು ಪ್ರತಿ ವರ್ಷದಂತೆ ನವೆಂಬರ್ ತಿಂಗಳು ಜೀವಂತ ಪ್ರಮಾಣ ಪತ್ರವನ್ನು ಬ್ಯಾಂಕ್ ಅಥವಾ ಆನ್ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದ್ದರೂ, ಈವರಗೆ ಹಲವಾರು ಪಿಂಚಣಿದಾರರು ಸಲ್ಲಿಸಿಲ್ಲವಾದ್ದರಿಂದ ಪಿಂಚಣಿಯನ್ನು ನಿಲ್ಲಿಸಲಾಗುವುದು. ಆದ್ದರಿಂದ ಕೂಡಲೇ ಜೀವಂತ ಪ್ರಮಾಣ ಪತ್ರ ಸಲ್ಲಿಸುವಂತೆ ಅಂತಿಮವಾಗಿ ಸೂಚಿಸಲಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆದ್ದರಿಂದ ಈವರೆಗೆ ಜೀವಂತ ಪ್ರಮಾಣ ಪತ್ರ ಸಲ್ಲಿಸ ಮಿಲಿಟರಿ ಪಿಂಚಣಿದಾರರು ಕೂಡಲೇ ಬ್ಯಾಂಕ್ ಅಥವಾ ಆನ್ಲೈನ್ನಲ್ಲಿ ಜೀವಂತ ಪ್ರಮಾಣವನ್ನು ಸಲ್ಲಿಸಿ ಪಿಂಚಣಿಯನ್ನು ಮುಂದುವರೆಸಿಕೊಳ್ಳುವಂತೆ ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.