ಮಾವಿನ ಗಿಡಗಳು ಹೂ ಬಿಡಲು ಪ್ರಾರಂಭಿಸಿದ್ದು, ಉತ್ತಮ ಮಾವು ಫಸಲಿಗೆ ಬೆಳೆಯ ವಿವಿಧ ಹಂತಗಳಲ್ಲಿ ಸೂಕ್ತ ನಿರ್ವಹಣೆ ಮುಖ್ಯ ಅದರಲ್ಲಿಯೂ ಸದ್ಯಕ್ಕೆ ಹೂವಾಡುವ ಹಂತದಲ್ಲಿ ಅಧಿಕವಾಗಿ ಹಾಗೂ ಪ್ರಮುಖವಾಗಿ ಹಾನಿ ಮಾಡುತ್ತಿರುವ ಕೀಟವೆಂದರೆ ಮಾವಿನ ಜಿಗಿಹುಳು. ಚಳಿಗಾಲದಲ್ಲಿ ಫೆಬ್ರವರಿ ತಿಂಗಳಿನಿಂದ ಹೂವಿನ ಮೊಗ್ಗು ಮತ್ತು ಹೂ ಗೊಂಚಲುಗಳ ಮೇಲೆ ಕುಳಿತು ರಸಹೀರುವುದಕ್ಕೆ ಪ್ರಾರಂಭಿಸುತ್ತವೆ ಮಾರ್ಚ ಮೊದಲನೆಯ ವಾರದಲ್ಲಿ ಈ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ ನಂತರ ಹೂ ಗೊಂಚಲುಗಳಲ್ಲಿ ಹಾಗೂ ಮೃದುವಾದ ಎಲೆಗಳ ಮೇಲೆ ಬಾದೆಯನ್ನುಂಟು ಮಾಡುತ್ತವೆ. ಹೂವಾಡುವ ಮತ್ತು ಕಾಯಿಯ ಹಂತದಲ್ಲಿ ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಹೂ ಕಾಯಿ ಉದುರುವ ಸಾಧ್ಯತೆ ಇದ್ದು ಇದರ ಹತೋಟಿಗೆ ಮ್ಯಾಂಗೋ ಸ್ಪೇಷಲ್ 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಡಾ|| ವಾಸುದೇವ ನಾಯಕ, ತೋಟಗಾರಿಕಾ ವಿಜ್ಞಾನಿಗಳು, ಕೆವಿಕೆ ಕಲಬುರಗಿ ತಿಳಿಸಿದರು.
ತಜ್ಞರ ಅಭಿಪ್ರಾಯ:
• ಬೂದಿರೋಗವು ಗಾಳಿಯಿಂದ ಹರಡುವ ರೋಗವಾಗಿದ್ದು ಆರಂಭದ ಹಂತದಲ್ಲಿ ರೋಗ ನಿರ್ವಹಣೆ ಅತ್ಯಗತ್ಯ. ಇದರಿಂದ ಮುಂದೆ ಆಗುವ ಬೆಳೆ ಹಾನಿಯನ್ನು ತಪ್ಪಿಸಬಹುದು –ಜಹೀರ ಅಹಮ್ಮದ, ಸಸ್ಯರೋಗ ವಿಜ್ಞಾನಿಗಳು, ಕೆವಿಕೆ ಕಲಬುರಗಿ.
ಜಿಗಿ ಹುಳು ಹಾಗೂ ಬೂದಿರೋಗದ ನಿರ್ವಹಣೆ:
ತೋಟವನ್ನು ಸ್ವಚ್ಛವಾಗಿಡಿ, ತೋಟಕ್ಕೆ ಪದೇಪದೇ ನೀರುಣಿಸುದಾಗಲೀ ಅಥವಾ ಸಾರಜನಕಯುಕ್ತ ಗೊಬ್ಬರ ನೀಡುವುದಾಗಲಿ ಮಾಡಬಾರದು. ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೇ ಗಿಡಗಳಿಗೆ 2 ಮಿ.ಲೀ ಮೇಲಾಥಿಯಾನ್ 50 ಇಸಿ ಅಥವಾ 0.5 ಮಿ.ಲೀ. ಇಮಿಡಾಕ್ಲೊಪ್ರಿಡ್ 17.8 ಎಸ್.ಎಲ್. ಅಥವಾ 0.3 ಗ್ರಾಂ. ಅಸಿಟಾಮೆಪ್ರಿಡ್ 25 ಡಬ್ಲುಡಿಜಿÀ ಜೊತೆಗೆ ಶಿಲೀಂದ್ರನಾಶಕವಾದ ನೀರಿನಲ್ಲಿ ಕರUವ ಗಂಧಕ 2 ಗ್ರಾಂ. ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಿರಿ. ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 20 ದಿನಗಳ ನಂತರ ಮತ್ತೊಮ್ಮೆ ಕೈಗೊಳ್ಳಿ. ಜಿಗಿ ಹುಳುದಿಂದಾಗಿ ಅಂಟು ದ್ರವ ಉತ್ಪಾದನೆಯಾಗಿ ಇಡೀ ಹೂ ಗೊಂಚಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸೂಕ್ತ ಸನ್ನಿವೇಶದಲ್ಲಿ ಔಷಧಿಯನ್ನು ಸಿಂಪಡಿಸಬೇಕು ಎಂದು ಡಾ|| ರಾಜು ತೆಗ್ಗೆಳ್ಳಿ, ಕೀಟ ತಜ್ಞರು ಹಾಗೂ ಹಿರಿಯ ವಿಜ್ಞಾನಿಗಳು, ಕೆವಿಕೆ- ಕಲಬುರಗಿ ತಿಳಿಸಿದರು .
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ : Dr Raju G Teggelli
Senior Scientist and Head
Krishi Vigyan Kendra (KVK), Kalaburagi-I,
Cell-9480696315
email-kvkglb.in@gmail.com
Web:kvkgulbarga.com