ಸೈಕಲ್ ಚಾಲನೆಯಿಂದ ದೇಹದ ಸ್ನಾಯುಗಳು ಬಲಗೊಂಡು ಶಕ್ತಿ ತುಂಬುತ್ತದೆ, ಇದರಿಂದ ಅನಾರೋಗ್ಯದಿಂದ ದೂರ ಇರಬಹುದು ಎಂದು “ವಿಶ್ವಸೈಕಲ್ ದಿನಾಚರಣೆ” ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ ಜಾತ ಉದ್ಘಟಿಸಿದ ಕ್ಲಬ್ ನ ಅಧ್ಯಕ್ಷ ಶ್ರೀಕಾಂತ್ ಮಾತನಾಡುತ್ತಿದ್ದರು.
ಕಳೆದ ಎಂಟು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದ್ದ, ಸರ್ಕಾರದ ಹಲವಾರು ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ಸೈಕಲ್ ಕ್ಲಬ್ ಸದಸ್ಯರು ಮಾಡುತ್ತಿದ್ದಾರೆ ಎಂದರು.
ಪರಿಸರ ಸ್ನೇಹಿಯಾದ ಸೈಕಲ್, ಇಂಧನ ಉಳಿಸುತ್ತದೆ, ಹೊಗೆ ಸೂಸುವುದಿಲ್ಲ, ಶಬ್ದಮಾಲಿನ್ಯ ಇರುವುದಿಲ್ಲ ಹಾಗೂ ದೇಹಕ್ಕೆ ಶಕ್ತಿ ತುಂಬಿ ಸದೃಡ ಜೀವನ ನಡೆಸಲು ಸಹಕಾರಿ ಎಂದು ಯೂತ್ ಹಾಸ್ಟೆಲ್ಸ್ ಛೇರ್ಮನ್ ಎಸ್.ಎಸ್.ವಾಗೇಶ್ ನುಡುದರು.
ತರುಣೋದಯ ಘಟಕದ ಕಾರ್ಯದರ್ಶಿ ಸ್ವಾಗತಿಸಿದರು, ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್ ವಂದಿಸಿದರು ಹರೀಶ್ ಪಾಟಿಲ್ ನಿರೂಪಿಸಿದರು, ಡಿಎಸ್ ಡಿಒ ಸುರೇಶ್, ಚಂದ್ರಕೇಸರಿ, ಮಿಥುನ್, ವಿಜಯೇಂದ್ರ, ರವಿ ನಲವತ್ತು ಜನ ಸದಸ್ಯರು ಜಾತದಲ್ಲಿ ಪಾಲ್ಗೊಂಡು ನಗರದ ಗಾಂಧಿ ಉದ್ಯಾನವನ ದಿಂದ ಪ್ರಾರಂಭಗೊಂಡು ವಿಶ್ವೇಶ್ವರಾಯ ರಸ್ತೆ ಬಾಲರಾಜ್ ಅರಸ್ ರಸ್ತೆ, ನೆಹರು ರಸ್ತೆ, ಬಿಹೆಚ್ ರಸ್ತೆ ಬಸ್ ನಿಲ್ದಾಣದ ಮೂಲಕ ಸಾಗರ್ ರಸ್ತೆ ರಿಂಗ್ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನವನ ಸೇರಿತು.