ಜ್ಞಾನದೀಪ ಶಾಲೆಯು ಪೋಷಕರಿಗೂ ಚಟುವಟಿಕೆಗಳಲ್ಲಿ ಭಾಗವಹಿಸುವ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು ಅಭಿನಂದನಾ ಕಾರ್ಯ. ಈ ಕಾರ್ಯ ಸಂಸ್ಕøತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಡುತ್ತಾ ಇಂದು ಶಿಕ್ಷಣ ಇಲ್ಲದ ವ್ಯಕ್ತಿ ಭೂಮಿಯ ಮೇಲೆ ಎಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶ ಸ್ವಾತಂತ್ರ್ಯ ಪಡೆದ ನಂತರದ ಕಾಲದಿಂದ ಇಂದಿನವರೆಗೆ ಸಾಕಷ್ಟು ಶೈಕ್ಷಣಿಕ ಪ್ರಗತಿಯನ್ನು ಕಂಡಿದೆ. ಇದಕ್ಕೆ ಸರ್ಕಾರದೊಂದಿಗೆ ಅನೇಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳೂ ಕೈ ಜೋಡಿಸಿವೆ. ಜಾವಳ್ಳಿಯ ಜ್ಞಾನದೀಪ ವಿದ್ಯಾ ಸಂಸ್ಥೆಯು ಯಶಸ್ವಿಯಾಗಿ 25 ವರ್ಷಗಳ ಸಾರ್ಥಕ ಸೇವೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಈ ಸೇವೆ ಮುಂದುವರೆಯಲಿ ಎಂದು ಆಶಿಸುತ್ತಾ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಸಂಬಂಧಗಳು, ಮೌಲ್ಯಗಳ ಕೊರತೆ ಕಂಡು ಬರುತ್ತಿದೆ. ಹಿಂದೆ ಮನೆಯಲ್ಲಿಯೇ ಮಗು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಲಿಯುತ್ತಿತ್ತು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಮಗುವಿನ ಆಸಕ್ತಿಯನ್ನು ಗಮನಿಸದೆ ಮಗುವನ್ನು ಮಾಹಿತಿ ಮತ್ತು ಜ್ಞಾನಕ್ಕೆ ಸೀಮಿತಗೊಳಿಸಲು ಪೋಷಕರು ಪ್ರಯತ್ನಪಡುತ್ತಿದ್ದಾರೆ. ದೇಶದ ಪ್ರಗತಿಗೆ ಶಿಕ್ಷಣ ಮುಖ್ಯ ನಿಜ. ಈ ಶಿಕ್ಷಣದೊಂದಿಗೆ ಮೌಲ್ಯ ಶಿಕ್ಷಣವು ಬೆರೆತರೆ ಪರಿಪೂರ್ಣತೆಯನ್ನು ಮಕ್ಕಳು ಪಡೆದು ದೇಶದ ಉತ್ತಮ ಪೌರರಾಗಲು ಮಕ್ಕಳ ಪೋಷಕರಾದ ನಾವೆಲ್ಲರೂ ಶ್ರಮಿಸಬೇಕು.” ಎಂದು ಪೋಷಕರಿಗೆ. ತಹಶೀಲ್ದಾರರಾದ ಶ್ರೀ ಪಿ.ಎಸ್. ಎರ್ರಿಸ್ವಾಮಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್‍ನ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ ಎಮ್ ಹೆಗ್ಡೆಯವರು ವಹಿಸಿ, ಮಾತನಾಡುತ್ತಾ “ ಮಕ್ಕಳಿಗೆ ಕೇವಲ ಅಂಕಗಳು ಮುಖ್ಯವಲ್ಲ. ವಿದ್ಯಾರ್ಥಿಗಳು ಅನೇಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂದು ನಮ್ಮ ಶಾಲೆಯಲ್ಲಿ ವ್ಯಾಸಂಗಮಾಡುತ್ತಿರುವ ಮಕ್ಕಳ ಪೋಷಕರಿಗೆ, ಮಹಾ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೇದಿಕೆಯನ್ನು ಕಲ್ಪಿಸಲಾಗಿದೆ. ಅನೇಕರು ಆಸಕ್ತಿಯಿಂದ ಭಾಗವಹಿಸುವುದನ್ನು ನೋಡಿದರೆ ನಮಗೆ ಸಂತೋಷವಾಗುತ್ತಿದೆ.” ಎಂದು ಹೇಳಿದರು.
ಸಮಾರೋಪದ ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಲವಾನೆ ಪ್ರಕಾಶ್ ಮಾತನಾಡುತ್ತಾ, ಶಿಕ್ಷಕರ ಪರಿಶ್ರಮವೇ ಜ್ಞಾನದೀಪ ಶಾಲೆಯ ಬೆಳವಣಿಗೆಗೆ ಕಾರಣ ಹಾಗೂ ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಬಗ್ಗೆ ತಿಳಿಯುತ್ತಿರಬೇಕು. ನಮ್ಮ ಜ್ಞಾನದೀಪ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯಗಳು ನಮಗೆ ಪ್ರೋತ್ಸಾಹದಾಯಕವಾಗಿವೆ. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಂತಹ ಶಿಕ್ಷಣವನ್ನು ನಮ್ಮ ಸಂಸ್ಥೆ ನೀಡುತ್ತಿದೆ, ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಎಮ್.ಜಿ. ನಾಗಭೂಷಣ್, ಖಜಾಂಚಿಗಳಾದ ಡಾ. ಕೆ ಆರ್ ಶ್ರೀಧರ್ ಮತ್ತು ಟ್ರಸ್ಟಿಗಳಾದ ಶ್ರೀ ಹೆಚ್.ಇ. ತಾಜುದ್ದೀನ್ ಹಾಗೂ ಅರಬಿಂದೋ ಪಿ.ಯು. ಕಾಲೇಜ್‍ನ ಪ್ರಾಂಶುಪಾಲರಾದ ಡಾ. ಕೆ. ನಾಗರಾಜ್ ಅವರು ಉಪಸ್ಥಿತರಿದ್ದರು.


ಶಾಲೆಯು ಪೋಷಕರಿಗಾಗಿ ರಂಗೋಲಿ, ಕಾಗದದಿಂದ ಪುಷ್ಪಗುಚ್ಛ ತಯಾರಿಸುವುದು, ಭಾವಗೀತೆ, ಶಿಶುಗೀತೆ/ಲಾಲಿಹಾಡು, ಕ್ಯಾಲೋರಿ ಕ್ಯೂಜಿನ್, ಮನರಂಜನಾ ಆಟಗಳು, ಕ್ರೀಕೆಟ್, ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಇತ್ಯಾದಿ.., ಚಟುವಟಿಕೆಗಳನ್ನು ಹಾಗೂ ಹಿರಿಯ ಪೋಷಕರಿಗಾಗಿ ವಿಶೇಷ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೋಷಕರಿಂದ 21 ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾ ಅವರು ಪ್ರಾರ್ಥಿಸಿದರು. ಶಾಲೆಯ ಹಿರಿಯ ಪ್ರಾಂಶುಪಾಲರಾದ ಡಾ. ರಿಜಿ ಜೋಸೆಫ್ ಸ್ವಾಗತಿಸಿದರು. ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೃಷ್ಣಪ್ರಸಾದ್‍ರವರು ವಂದಿಸಿದರು. ಶಾಲೆಯ ಶಿಕ್ಷಕರಾದ ಡಾ. ಪ್ರಕಾಶ್ ಬಣಕಾರ್ ಹಾಗೂ ಶ್ರೀಮತಿ ರುಮಾನಾ ನಿರೂಪಿಸಿದರು.

error: Content is protected !!