ಕೃಷಿ ಪ್ರಧಾನವಾದ ಭಾರತದೇಶದಲ್ಲಿ ಇತ್ತೀಚಿನ ದಿನÀಗಳಲ್ಲಿ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ವಿಶ್ವಮಟ್ಟದಗುಣಮಟ್ಟ ಹೊಂದಿರುವ ತಳಿಗಳ ಲಭ್ಯತೆ, ಉತ್ತಮ ನಿರ್ವಹಣಾ ವಿಧಾನಗಳು ಮತ್ತು ಮಾರಾಟ ಸೌಕರ್ಯದಿಂದಾಗಿ ಈ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ.
• ನಮ್ಮದೇಶವು ಮೊಟ್ಟ್ತೆಉತ್ಪಾದನೆಯಲ್ಲಿ 3ನೇ ಸ್ಥಾನ ಮತ್ತು ಕೋಳಿ ಮಾಂಸದಉತ್ಪಾದನೆಯಲ್ಲಿ 5ನೇ ಸ್ಥಾನ ಪಡೆದಿದೆ. ಉತ್ತಮಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸಉತ್ಪಾದಿಸಲಾಗುತ್ತಿದೆ.
• ಕರ್ನಾಟಕರಾಜ್ಯದಲ್ಲಿನ ನೈಸರ್ಗಿಕ ಸಂಪತ್ತು, ಮಾನವನ ಶಕ್ತಿ, ಅತ್ಯುತ್ತಮಗುಣಮಟ್ಟದಆಹಾರ, ಉತ್ತಮ ಕೋಳಿ ಮರಿಗಳ ಉತ್ಪಾದನೆ, ಔಷಧಿ ಹಾಗೂ ತಾಂತ್ರಿಕ ಪರಿಣಿತರ ಲಭ್ಯತೆಯಿಂದಾಗಿ ಕೋಳಿ ಸಾಕಣೆಯಲ್ಲಿಗಣನೀಯ ಸಾಧನೆಕಂಡು ಬರುತ್ತಿದೆ. ನಮ್ಮರಾಜ್ಯವು ಮಾಂಸ ಮತ್ತುಮೊಟ್ಟೆಉತ್ಪಾದನೆಯಲ್ಲಿ 5 ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ ಜಿಲ್ಲೆಗಳು ಮಾಂಸದ ಕೋಳಿ ಸಾಕಾಣಿಕೆಗೆ ಮತ್ತು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕೊಪ್ಪಳ ಇವು ಮೊಟ್ಟ್ತೆ ಕೋಳಿ ಸಾಕಾಣಿಕೆಗೆ ಪ್ರಸಿದ್ಧಿಯಾಗಿವೆ.
• ಭಾರತೀಯ ವೈದ್ಯಕೀಯಅನುಸಂಧಾನದ ಪ್ರಕಾರ ವಾರ್ಷಿಕವಾಗಿ ಪ್ರತಿಯೊಬ್ಬರು 180 ಮೊಟ್ಟೆಗಳನ್ನು ಹಾಗೂ 11ಕೆ.ಜಿ. ಮಾಂಸವನ್ನು ಸೇವಿಸಬೇಕು.ಆದರೆ ಸದ್ಯ ಲಭ್ಯವಿರುವುದು ಕೇವಲ 69ಮೊಟ್ಟೆಗಳು ಮತ್ತು3.2 ಕೆ.ಜಿ. ಮಾಂಸ ಮಾತ್ರ. ಆರೋಗ್ಯದೃಷ್ಟಿಯಿಂದ ಬೇರೆಯಾವುದೇ ಮಾಂಸಕ್ಕಿಂತ ಕೋಳಿ ಮಾಂಸಉತ್ತಮವಾದದ್ದು.
• ಈ ಕೃಷಿ ಪೂರಕಉದ್ದಿಮೆಯನ್ನು ಸಾಕಲ್ಪಡುವ ಕೋಳಿಗಳ ಉತ್ಪಾದನಾ ಸಾಮಥ್ರ್ಯದ (ಮೊಟ್ಟೆ, ಮಾಂಸ, ವಿವಿದ್ದೋದ್ದೇಶ) ಮೇಲೆ ಈ ಕೆಳಕಂಡಂತೆ ವಿಭಾಗಿಸಬಹುದು.

  1. ಮಾಂಸದ ಕೋಳಿ ಸಾಕಾಣಿಕೆ (ಬ್ರಾಯ್ಲರ್)
  2. ಮೊಟ್ಟೆಕೋಳಿ ಸಾಕಾಣಿಕೆ (ಲೇಯರ್ಸ್)
  3. ಸುಧಾರಿತ ಹಿತ್ತಲ ಕೋಳಿ ಸಾಕಾಣಿಕೆ (ಗಿರಿರಾಜ/ಸ್ವರ್ಣಧಾರ)
    ಭಾರತದಲ್ಲಿ ಕೋಳಿಸಾಕಾಣಿಕೆಯು ಕೈಗಾರಿಕೆಯಂತೆಉದ್ಯಮವಾಗಿ ಬೆಳೆದಿದ್ದು ಜಾಗತಿಕವಾಗಿ ಹೆಸರು ಮಾಡುತ್ತಿದೆ.ಆದರೆ ಕಳವಳಕಾರಿ ಸಂಗತಿಯೆಂದರೆ ಕೋಳಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಹಲವಾರುರೀತಿಯ ಕಾಯಿಲೆಗಳು ರೈತರಿಗೆ ಸಾಕಷ್ಟು ನಷ್ಟವನ್ನುಂಟುಮಾಡುತ್ತಿವೆ. ಅಪಾರ ಪ್ರಮಾಣದಲ್ಲಿ ಸಾವು, ತಗ್ಗುವ ಶರೀರದತೂಕ, ಮೊಟ್ಟೆ ಮತ್ತು ಮಾಂಸದಗುಣಮಟ್ಟ ಮತ್ತುಉತ್ಪಾದನೆಆರ್ಥಿಕವಾಗಿ ಹೊರೆಯಾಗುತ್ತಿವೆ. ಕೆಲವೊಂದು ರೋಗಗಳಿಗೆ ಚಿಕಿತ್ಸೆ ಲಭ್ಯವಿದ್ದುಗುಣಪಡಿಸಬಹುದಾಗಿದ್ದರೆ ಮತ್ತೆ ಕೆಲವು ರೋಗಗಳನ್ನು ವಾಸಿಮಾಡುವುದು ಸಾಧ್ಯವಾಗುವುದಿಲ್ಲ. ಕಾಲಕಾಲಕ್ಕೆ ಲಸಿಕೆ,ಜೈವಿಕ ಸಂರಕ್ಷಣೆ, ಕೋಳಿಫಾರಂಗಳಲ್ಲಿ ಮುಕ್ತ ಜನ ಮತ್ತು ವಾಹನಸಂಚಾರಕ್ಕೆತಡೆಗೋಡುಒಡ್ಡುವುದು, ಕಾಲೊರೆಸು ಬಳಸುವುದು, ಸೋಂಕು ನಿವಾರಕಗಳನ್ನು ಬಳಸುವುದು ರೋಗ ಬಾರದಂತೆತಡೆಯುವ ಮುಂಜಾಗ್ರತಾ ಕ್ರಮಗಳು. ಇವುಗಳನ್ನು ಸರಿಯಾಗಿಅರಿತುರೈತರು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕಾಗಿದೆ.
    ಕೋಳಿಗಳಲ್ಲಿ ಕಂಡುಬರುವಎಲ್ಲಾ ರೋಗಗಳನ್ನು ಈ ಕಿರುಲೇಖನದಲ್ಲಿ ಪರಿಚಯಿಸಿಕೊಡಲು ಸಾಧ್ಯವಾಗದಿದ್ದರೂ ಕೆಲವು ಅತಿ ಮುಖ್ಯ ರೋಗಗಳ ಕಾರಕಗಳು, ರೋಗ ಚಿಹ್ನೆಗಳು ಮತ್ತು ಲಕ್ಷಣಗಳು, ಹರಡುವಿಕೆಯ ವಿಧಾನ, ರೋಗ ನಿಯಂತ್ರಣ, ಚಿಕಿತ್ಸೆಯ ಸಲಹೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಅಳವಡಿಸಿಕೊಳ್ಳಬೇಕಾದ ಲಸಿಕಾ ಕಾರ್ಯಕ್ರಮ ಮತ್ತು ನೀಡಬೇಕಾದ ವಯಸ್ಸಿನ ವಿವರಗಳನ್ನು ಪಟ್ಟಿಮಾಡಲಾಗಿದೆ.ವೈದ್ಯಶಾಸ್ತ್ರದಲ್ಲಿ ಹೇಳುವ ‘ರೋಗಬಂದಮೇಲೆ ಚಿಕಿತ್ಸೆನೀಡುವುದಕ್ಕಿಂತರೋಗಬಾರದಂತೆತಡೆಯುವುದು ಒಳ್ಳೆಯದು’ ಎಂಬಮಾತಿನಂತೆರೋಗತಡೆಯುವುದರಲ್ಲಿ ಯಶಸ್ವಿ ಕೋಳಿಸಾಕಾಣಿಕೆದಾರರಬುದ್ಧಿವಂತಿಕೆಅಡಗಿದೆ.

ಕೋಳಿಗಳಲ್ಲಿ ಕಂಡುಬರುವ ಕಾಯಿಲೆಗಳನ್ನು ರೋಗದ ಮೂಲದಆಧಾರದ ಮೇಲೆ ಕೆಳಕಂಡಂತೆ ವರ್ಗೀಕರಿಸಬಹುದು.

  1. ಬ್ಯಾಕ್ಟೀರಿಯಾಗಳಿಂದ ಬರುವ ಸೋಂಕು ರೋಗಗಳು. 2.ವೈರಾಣುಗಳಿಂದ ಬರುವ ಸೋಂಕು ರೋಗಗಳು.
  2. ಶಿಲೀಂಧ್ರಮೂಲ ರೋಗಗಳು ಮತ್ತು ಶಿಲೀಂಧ್ರಜನ್ಯ ವಿಷಾಣುಗಳ ರೋಗಗಳು.
  3. ಏಕಾಣುಜೀವಿ ಮತ್ತು ಪರಾವಲಂಬಿ ಜೀವಿಗಳಿಂದ ಕಂಡುಬರುವ ರೋಗಗಳು
  4. ಬ್ಯಾಕ್ಟೀರಿಯಾಗಳಿಂದ ಬರುವ ಸೋಂಕು ರೋಗಗಳು:
    ಈ ಕಾಯಿಲೆಗಳು ವೈರಾಣುಮೂಲ ಕಾಯಿಲೆಗಳಿಗೆ ಹೋಲಿಸಿದರೆ ಕಡಿಮೆತೀವ್ರತೆಯಿಂದಕೂಡಿರುತ್ತವೆ. ಪ್ರತಿಜೈವಿಕ (ಆಂಟಿಬಯೋಟಿಕ್ಸ್)ಗಳನ್ನು ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳುವುದರಿಂದ ಇವುಗಳನ್ನು ಹತೋಟಿಯಲ್ಲಿಡುವುದು ಸುಲಭ. ಇವುಗಳ ಜೊತೆಗೆ ನೈರ್ಮಲ್ಯಕಾಪಾಡಲು ಬಳಸುವ ಸೋಂಕುನಿವಾರಕ (ಫೀನಾಲ್, ಬ್ಲೀಚಿಂಗ್ ಪೌಡರ್, ಲೈಸಾಲ್‍ಇತ್ಯಾದಿ)ಗಳಿಗೆ ಬ್ಯಾಕ್ಟೀರಿಯಾಗಳಲ್ಲಿ ಹೆಚ್ಚು ಮೃದುತ್ವ ಹೊಂದಿರುವುದುರಿಂದರೋಗವನ್ನು ಬೇಗ ನಿಯಂತ್ರಣಕ್ಕೆತರಬಹುದು. ಬ್ಯಾಕ್ಟೀರಿಯಾಗಳಿಂದ ಕಂಡುಬರುವ ರೋಗಗಳನ್ನು ಪಟ್ಟಿ-1ರಲ್ಲಿ ನಮೂದಿಸಲಾಗಿದೆ.
  5. ವೈರಾಣುಗಳಿಂದ ಬರುವ ಸೋಂಕು ರೋಗಗಳು:
    ಪ್ರತಿಜೈವಿಕಗಳು ಪೂರಕವಾಗಿ ಸಹಾಯಕವಾಗುತ್ತವೆಯೋ ವಿನಃ ವೈರಾಣುವಿನ ವಿರುದ್ಧ ನೇರವಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ವೈರಾಣು ಕಾಯಿಲೆಗಳನ್ನು ಹತೋಟಿಗೆತರುವುದು ಮತ್ತುಚಿಕಿತ್ಸೆ ನೀಡುವುದುಕಷ್ಟಕರ.ಆದ್ದರಿಂದ ಈ ಕಾಯಿಲೆಗಳನ್ನು ತಡೆಯಲು ಲಸಿಕೆ ಹಾಕುವುದೊಂದೆಇರುವ ಮಾರ್ಗ.ವೈರಾಣು ರೋಗಗಳ ವಿವರಗಳನ್ನು ಪಟ್ಟಿ-2ರಲ್ಲಿ ನೀಡಲಾಗಿದೆ.
  6. ಶಿಲೀಂಧ್ರಮೂಲ ರೋಗಗಳು ಮತ್ತು ಶಿಲೀಂಧ್ರಜನ್ಯ ವಿಷಾಣುಗಳ ರೋಗಗಳು:
    ಹೆಚ್ಚು ಆದ್ರ್ರತೆಯಿಂದಕೂಡಿರುವಆಹಾರ ಮಿಶ್ರಣದಲ್ಲಿ ಬೆಳೆಯುವ ಆಸ್ಪೆರಿಜಿಲ್ಲೋಸಿಸ್ ಶಿಲೀಂಧ್ರಗಳಿಂದ ಕೋಳಿಮರಿಗಳಲ್ಲಿ ಶ್ವಾಸಕೋಶದಉರಿಯೂತ (ಬ್ರೂಡರ್ಸ್ ನುಮೊನಿಯಾ) ಉಂಟಾಗುತ್ತದೆ. ಶಿಲೀಂಧ್ರಗಳು ಉತ್ಪತ್ತಿಮಾಡುವಅಫ್ಲಟಾಕ್ಸಿನ್, ಅಕೆರೋಟಾಕ್ಸಿನ್, ಸಿಟ್ರಿನಿನ್ ನಂತಹ ವಿಷವಸ್ತುಗಳು ಯಕೃತ್, ಕರುಳು ಮತ್ತು ಮೂತ್ರಪಿಂಡಗಳ ಮೇಲೆ ವ್ಯತಿರಿಕ್ತ ಪರಿಣಾಮಉಂಟುಮಾಡುತ್ತವೆ. ಕೆಲವು ಸಂದರ್ಭದಲ್ಲಿ ಈ ಪರಿಣಾಮಗಳಿಂದ ಕ್ಯಾನ್ಸರ್ ಗೆಡ್ಡೆಗಳಾಗಿ ಸಹಾ ಪರಿವರ್ತನೆಯಾಗಬಹುದು.ಈ ಸಮಸ್ಯೆಗಳನ್ನು ತಡೆಯಲುಆಹಾರದಲ್ಲಿಆದ್ರ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅಗತ್ಯ.ಜೊತೆಗೆಆಹಾರ ಮಿಶ್ರಣದಲ್ಲಿ ಶಿಲೀಂಧ್ರನಾಶಕಗಳನ್ನು ವಿಷಬಂಧಕಗಳನ್ನು ಪಶು ಶಾಸ್ತ್ರಜ್ಞರ ಸಲಹೆಯ ಮೇರೆಗೆ ಬಳಸಬೇಕು.
  7. ಏಕಾಣುಜೀವಿ ಮತ್ತು ಪರಾವಲಂಬಿ ಜೀವಿಗಳಿಂದ ಕಂಡುಬರುವ ರೋಗಗಳು:
    ಪರಾವಲಂಬಿ ಜೀವಿಗಳಿಂದ (ಒಳ ಮತ್ತು ಹೊರ) ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆಕಡಿಮೆಯಿದ್ದರೂ ಸಹಾ ಉತ್ಪಾದನೆಯಲ್ಲಿಗಣನೀಯವಾದ ಕುಸಿತ ಉಂಟಾಗುತ್ತದೆ.ಏಕಾಣುಜೀವಿಗಳು ಸಾಮಾನ್ಯವಾಗಿ ಕರುಳಿನ ಉರಿಯೂತವನ್ನುಂಟು ಮಾಡುತ್ತವೆ. ಮುಖ್ಯವಾದ ಕಾಯಿಲೆಗಳನ್ನು ಪಟ್ಟಿ-3ರಲ್ಲಿ ನಮೂದಿಸಲಾಗಿದೆ.

ರೋಗಗಳನ್ನು ತಡೆಗಟ್ಟುವ ಸಾಮಾನ್ಯ ಮುಂಜಾಗ್ರತಾ ಕ್ರಮಗಳು:
• ಆರೋಗ್ಯಕರ ಮತ್ತುಉತ್ತಮರೋಗನಿರೋಧಕ ಶಕ್ತಿಯುಳ್ಳ ಕೋಳಿಗಳನ್ನು ಆರಿಸಿಕೊಳ್ಳುವುದು.
• ಮರಿಗಳನ್ನು ಖರೀದಿಸುವಾಗ ಲಸಿಕೆ ಮತ್ತು ನೈರ್ಮಲ್ಯತೆಯನ್ನುಕಾಪಾಡುವ ಹ್ಯಾಚರಿಗಳಿಗೆ ಆದ್ಯತೆ ನೀಡುವುದು.
• ಕಾಲಕಾಲಕ್ಕೆ ಲಸಿಕೆ (ಪಟ್ಟಿ4 ಮತ್ತು5) ಮತ್ತುಜೈವಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
• ಸತ್ತೆಯ ಮೇಲೆ ನೀರುಚೆಲ್ಲದಂತೆಆಹಾರ ಮಿಶ್ರಣದಲ್ಲಿ ಹೆಚ್ಚು ಆದ್ರ್ರತೆಆಗದಂತೆ ನೋಡಿಕೊಳ್ಳಬೇಕು.
• ಬ್ರಾಯ್ಲರ್ ಕೋಳಿಗಳಲ್ಲಿ ಬ್ಯಾಚ್ ವಿಧಾನದಲ್ಲಿ (ಆಲ್‍ಇನ್‍ಆಲ್‍ಔಟ್) ಸಾಕುವುದು. ಕೋಳಿಗಳನ್ನು ಸ್ವೀಕರಿಸುವ ಮುನ್ನ ಫಾರಂನ ನೆಲ, ಗೋಡೆ ಮತ್ತು ಸಲಕರಣೆಗಳನ್ನು ಸೋಂಕು ನಿವಾರಣೆಗೆ ಒಳಪಡಿಸುವುದು.
• ಶುದ್ಧ ನೀರು ಮತ್ತುಆಹಾರ (ಸಮತೋಲಿತಆಹಾರ) ವನ್ನು ನೀಡುವುದು.ಸಂದರ್ಶಕರನ್ನು ಫಾರಂಗಳಿಗೆ ಅನುಮತಿಯಿಲ್ಲದೆ ಹೋಗಲು ಬಿಡಬಾರದು.
• ಸತ್ತ ಕೋಳಿಗಳನ್ನು ತಕ್ಷಣವೇ ಬೇರ್ಪಡಿಸಿ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸುವುದು ಮತ್ತು ಸಲಹೆ ಪಡೆಯುವುದು. ಫಾರಂಅನ್ನು ಪ್ರವೇಶಿಸುವಾಗ ಸೋಂಕುದ್ರಾವಣದಿಂದಕೂಡಿದಕಾಲೊರೆಸನ್ನು ಬಳಸುವುದು.
• ಮರಿಗಳನ್ನು ಮತ್ತು ದೊಡ್ಡಕೋಳಿಗಳನ್ನು ಬೇರೆ ಬೇರೆ ಸಾಕುವುದು.

ಪ್ರಗತಿಪರರೈತರುಕೋಳಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅತ್ಯವಶ್ಯಕ.ರೋಗ ಬಂದ ಮೇಲೆ ವ್ಯಥೆ ಪಡುವ ಬದಲು ಅವುಗಳು ಬರದಂತೆತಡೆಗೋಡೆಯನ್ನು ಸಿದ್ಧಪಡಿಸಿ ಹೆಚ್ಚಿನ ಲಾಭಗಳಿಸಲಿ ಎಂಬುದು ನಮ್ಮ ಆಶಯ.

ಡಾ.ಅಶೋಕ.ಎಂ.
ವಿಜ್ಞಾನಿ (ಪಶು ವಿಜ್ಞಾನ)
ಕೃಷಿ ವಿಜ್ಞಾನ ಕೇಂದ್ರ. ಶಿವಮೊಗ್ಗ.

error: Content is protected !!