ಶಿವಮೊಗ್ಗ, ಮಾರ್ಚ್ 06 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಾರ್ಚ್-07 ರಂದು ಸಂಜೆ 6.00ಕ್ಕೆ ಕೋಣಂದೂರಿನ ಮಕ್ಕಿಬೈಲು ಜೋಗುಳ ರಂಗಮಂದಿರದಲ್ಲಿ ‘ಸುಗ್ಗಿ-ಹುಗ್ಗಿ ಜಾನಪದ ಉತ್ಸವ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ತೀರ್ಥಹಳ್ಳಿ ವಿಧಾನಸಭೆ ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಕೋಣಂದೂರು ಗ್ರಾ.ಪಂ ಅಧ್ಯಕ್ಷೆ ವಿಶಾಲ ಪ್ರಫುಲ್ಲಚಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಅಪೂರ್ವಶರದಿ ಪೂರ್ಣೇಶ್, ತಾ.ಪಂ ಸದಸ್ಯ ಟಿ. ಮಂಜುನಾಥ್, ತಾ.ಪಂ ಸದಸ್ಯ ಕುಕ್ಕೆ ಪ್ರಶಾಂತ್, ಜಿಲ್ಲಾ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ಗ್ರಾ.ಪಂ ಉಪಾಧ್ಯಕ್ಷೆ ಗಾಯತ್ರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುನಂದಮ್ಮ, ಪಾರ್ವತಮ್ಮ, ಕೆ.ಎಂ.ಮೋಹನ್, ಫಾಮಿದಭಾನು, ಸತಿಶ್ ಶೆಟ್ಟಿ, ಎಂ.ಟಿ.ಸುಹಾಸ್, ಲಕ್ಷ್ಮಿ, ಕೆ.ಕೆ.ಚೇತನ್, ಹೆಚ್.ಪಿ. ಚೂಡಾಮಣಿ, ಕಂಪದಗದ್ದೆ ಸುರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಉಪಸ್ಥಿತರಿರುವರು.
ಸಂಜೆ 5.00ಕ್ಕೆ ಕಲಾತಂಡಗಳ ಮೆರೆವಣಿಗೆ ಗ್ರಾಮ ಪಂಚಾಯತ್ ಆವರಣದಿಂದ ಪ್ರಾರಂಭವಾಗುವುದು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಉಡುಪಿ ಮಾನಸಿ ಸುಧೀರ್ ರಾವ್ ಮತ್ತು ತಂಡದವರಿಂದ ಜಾನಪದ ನೃತ್ಯ, ಸಾಗರ ಹೆಚ್.ಕೆ. ಬೂದ್ಯಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ, ಹೊಸನಗರ ಬಸವರಾಜ ಪಿ.ಆಲಗೇರಿ ಮುಂಡ್ರಿ ಮತ್ತು ತಂಡದವರಿಂದ ಚಂಡೆವಾದನ, ಭದ್ರಾವತಿ ನಾಗರಾಜ ವಿ. ಬಸಲೀಕಟ್ಟೆ ಮತ್ತು ತಂಡದವರಿಂದ ವೀರಗಾಸೆ, ಭದ್ರಾವತಿ ರಘುನಾಯ್ಕ್ ಮತ್ತು ತಂಡದವರಿಂದ ಲಂಬಾಣಿ ನೃತ್ಯ, ಪಿರಿಯಾಪಟ್ಟಣ ಜಗದೀಶ್ ಮತ್ತು ತಂಡದವರಿಂದ ಕಂಸಾಳೆ, ಚನ್ನಗಿರಿ ರಾಕೇಶ್ ಕುಮಾರ್ ಸಿ. ಎನ್ ಮತ್ತು ತಂಡದವರಿಂದ ಕೋಲಾಟ, ತೀರ್ಥಹಳ್ಳಿ ಸತೀಶ್ ಆಡಿನಸರ, ತುಂಗಾತೀರ್ಥ ಟ್ರಸ್ಟ್‍ರವರಿಂದ ಜಾನಪದ ಗೀತೆ, ರಾಮನಗರ ರಮೇಶ್ ಮತ್ತು ತಂಡದವರಿಂದ ಪೂಜಾ ಕುಣಿತ, ಅಂಬಾರಗೊಪ್ಪ ಚಂದ್ರಪ್ಪ ಮತ್ತು ತಂಡದವರಿಂದ ಡೊಳ್ಳುಕುಣಿತ, ಎಮ್ಮೆಹಟ್ಟಿ ರೇಣುಕಾಪ್ರಸಾದ್ ಮತ್ತು ತಂಡದವರಿಂದ ಗೊಂಬೆ ಬಳಗ, ಶಿವಮೊಗ್ಗ ಮಹೇಶ್ ಮತ್ತು ತಂಡದವರಿಂದ ತಮಟೆ ವಾದನ, ಹಳಿಯಾಳ(ಉತ್ತರ ಕರ್ನಾಟಕ)ಶೋಭನಾ ಕಾಂಬ್ರೇಕರ್ ಮತ್ತು ತಂಡದವರಿಂದ ಡಮಾಮಿ ನೃತ್ಯ, ಅಜ್ಜಂಪುರ ಕರಿಯಪ್ಪ ಮತ್ತು ತಂಡದವರಿಂದ ಚಿಟ್ಟಿಮೇಳ, ಶಿವಪುರ ಭಾರತಿ ಗೋಪಾಲ ಮತ್ತು ತಂಡದವರಿಂದ ಸ್ಯಾಕ್ಸೋಫೋನ್, ಬ್ರಹ್ಮಾವರ ಪ್ರ್ರಶಾಂತ್ ಬಿರ್ತಿ ಮತ್ತು ತಂಡದವರಿಂದ ಕಂಗೀಲು ನೃತ್ಯ ಕಲಾತಂಡಗಳು ಭಾಗವಹಿಸಲಿವೆ.

error: Content is protected !!