ಮಂಗಳೂರು, : ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿ ಕುನ್ಹಾ ತಾಕೊಡೆಯವರ ನೇತೃ ತ್ವದಲ್ಲಿ ಡಾ ಸುರೇಶ ನೆಗಳಗುಳಿ ಸಂಚಾಲಕರಾಗಿ ,ಸಂದೇಶ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳೂರು ನಂತೂರು ಸಮೀಪದ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಅಂತಾರಾಜ್ಯ ಮಟ್ಟದ ಮಾತೃಭಾಷಾ ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಾದ್ಯಂತ 50 ಕವಿಗಳು ತಮ್ಮ ಮಾತೃಭಾಷೆಯಲ್ಲಿ ಕವನಗಳನ್ನು ವಾಚಿಸಿದರು.
ರೇಮಂಡ್ ಡಿಕುನಾ ತಾಕೊಡೆ ಅವರು ಬರೆದ ಕೃತಿ “ಪತಿ ಪತ್ನಿ ಸುತಾಲಯ”ವನ್ನು ಖರೀದಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಪಿಆರ್ ಓ ಹಾಗೂ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ರೋಯ್ ಕ್ಯಾಸ್ತಲೀನೋ ಅವರು, ಸಾಹಿತ್ಯದ ಪ್ರೋತ್ಸಾಹವು ಕೃತಿಗಳನ್ನು ಖರೀದಿ ಮಾಡಿ ಮಾಡಲು ಸೂಚ್ಯವಾಗಿ ಹೇಳುವ ಈ ಉದ್ಘಾಟನೆ ಸರಿಯಾದ ಕ್ರಮವಾಗಿದೆ ಹಾಗೂ ದುಂದು ವೆಚ್ಚಕ್ಕೆ ಹೋಗದೆ ಸರಳ ಸುಂದರ ಸಾಂಸ್ಕೃತಿಕ ಸಮಾರಂಭದ ಈ ಕಾರ್ಯಕ್ರಮ ಹಲವಾರು ಸಾಹಿತಿಗಳಿಗೆ ವೇದಿಕೆ ಒದಗಿಸಿದ್ದು ಸ್ತುತ್ಯವಾಗಿದೆ ಎಂದರು. ಅಭಿಮೊ ಟೆಕ್ನಾಲಜಿ ಸಂಸ್ಥಾಪಕ ಮತ್ತು ಕರ್ನಾಟಕ ಕೊಂಕಣಿ ಎಕಾಡೆಮಿ ಸದಸ್ಯ ಉಳ್ಳಾಲದ ನವೀನ್ ನಾಯಕ್ ರವರು ಈ ರೀತಿಯ ಕನ್ನಡ ಬೆಳೆಸುವ ಕಾರ್ಯಕ್ರಮಕ್ಕೆ ಸದಾ ನೆರವು ನೀಡುವುದು ಪ್ರತಿಯೊಬ್ಬರ ಕೆಲಸ ಎಂದು ಸಹಕಾರ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಶೈಕ್ಷಣಿಕ ಸಾಧಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರಾಣಿ ಪುಷ್ಪಲತಾ ದೇವಿಯವರಿಗೆ ಅವರ ಸಾಧನೆಗಳನ್ನು ಗುರುತಿಸಿ ‘ಕಲಾ ಕುಸುಮ’ ಎಂಬ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಅವರು ಮಾತನಾಡುತ್ತ ತನಗೆ ಸನ್ಮಾನ ಪಡೆವ ಆಸೆ ಆಸಕ್ತಿ ಯಾವುದೂ ಇಲ್ಲ. ಅರ್ಹರಿಗೆ ಸನ್ಮಾನ ನೀಡುವುದಷ್ಟೇ ಗೊತ್ತು.ಆದರೂ ಆತ್ಮೀಯರ ಒಲ್ಲೆ ಎನ್ನಲು ಮನಸ್ಸು ಬರದೆ ಸ್ವೀಕರಿಸಿದ ಈ ಗೌರವಸ್ಮರಣೀಯ ಎಂದರು
ಸಾಮಾಜಿಕ ಕಾರ್ಯಕರ್ತ ಗಾಯಕ ಗಂಗಾಧರ ಗಾಂಧಿಯವರು ತಾವು ಇನ್ನೂರಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಪ್ರಶಸ್ತಿಯು ಅರ್ಹತೆಗೆ ಸಂದ ಗೌರವವಾಗಿರ ಬೇಕು.ಜ್ಞಾನಿಯಾದವನು ಹೇಗೆ ತಾನು ಇನ್ನೂ ಅಪೂರ್ಣ ಎಂದು ಭಾವಿಸುತ್ತಾನೆಯೋ ಹಾಗೆ ರಾಣಿಯವರ ಮನಸ್ಥಿತಿ ಅಷ್ಟೆ.ಅವರಿಗೆ ಕೊಡುವ ಪ್ರಶಸ್ತಿ ಯು ಅತಿ ಮೌಲ್ಯಾಧಾರಿತವೇ ಆಗಿದೆ. ಪ್ರಸ್ತುತ ಕಾಲದಲ್ಲಿ ಪ್ರಶಸ್ತಿಗಳ ಮಾರಾಟವೇ ನಡೆಯುತ್ತಿದ್ದು ಅದಕ್ಕೆ ಮುಗಿಬೀಳುವವರನ್ನು ನೋಡುವಾಗ ಅಸಹ್ಯ ಎನಿಸುತ್ತದೆ. ಇದಾದರೆ ಹಾಗಲ್ಲ. ಅರಿವಿಗೂ ಬರದೆ ಸಂದ ಗೌರವ ಎಂದರು. ರೇಮಂಡ್ ಡಿಕುನ್ಹಾ ತಾಕೊಡೆಯವರು ಆಗಾಗ ಸಾಹಿತ್ಯ ಗೋಷ್ಠಿ ನಡೆಸುವ ಉದ್ದೇಶ, ಹೊಸಬರಿಗೆ ಪ್ರೇರಣೆ ಮತ್ತು ಸಾಹಿತ್ಯ ಚಲಾವಣೆಗಾಗಿ ಡಾ ಸುರೇಶ ನೆಗಳಗುಳಿ ಯವರೊಡನೆ ಜಂಟಿಯಾಗಿ ಸಮಾರಂಭ ಸನ್ನಾಹ ಅಭ್ಯಾಸವಾಗಿ ಬಿಟ್ಟಿದೆ. ಇದು ಮುಂದುವರಿಯಲಿದೆ ಎಂದರು.
ಕಥಾ ಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ಮಾತನಾಡುತ್ತಾ ಸಾಹಿತ್ಯ ಸಮ್ಮೇಳನದ ಅಗತ್ಯ ಮತ್ತು ತನ್ನ ಉತ್ಸಾಹ ಇವುಗಳ ಸಾರಾಂಶ ತಿಳಿಸಿದರು.
ಈ ಕವಿಗೋಷ್ಠಿ- ಅಧ್ಯಕ್ಷತೆ ವಹಿಸಿರುವ ಸುಶೀಲಾ ಭಟ್ ಪಾತನಡ್ಕ, ಇವರು ನೆಗಳಗುಳಿ ತವರಿನವರು ಈಗ ಕೇರಳದಲ್ಲಿ ಇದ್ದರೂ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.ಬಾ ಕಾ ಹು ಎಂಬ ಬಾಳೆ ಕಾಯಿಯ ಹುಡಿಯಂದ ಶ್ಯಾವಿಗೆಸಂಡಿಗೆ ಮಾಡುವ ಅವಿಷ್ಕಾರವನ್ನು ಹತ್ತುವರ್ಷದ ಹಿಂದೆಯೇ ಮಾಡಿದ್ದರಲ್ಲದೆ ತತ್ಸಂಬಂಧೀ ಪುಸ್ತಕ,ಹಲವೆಡೆ ಕಾರ್ಯಾಗಾರ,ರೇಡಿಯೋ ಸಂದರ್ಶನ ಸಹಿತ ಮಾಡಿದವರು. ಆದರೆ ಸರಕಾರ ಮಾತ್ರ ಅಷ್ಡಾಗಿ ಗುರುತಿಸಲಿಲ್ಲ. ಮಾವು ಮತ್ತು ಅದರ ವ್ಯಂಜನಗಳ ಬಗೆಗೂ ಪುಸ್ತಕ ಬರೆದಿರುವರು.ಎಳವೆಯಲ್ಲಿಯೇ ನವಭಾರತ ಪತ್ರಿಕೆಯವರಿಂದ “ನಗೆಬಂಧು” ಎಂಬ ಕಾವ್ಯ ನಾಮ ಪಡೆದವರು.ಈ. ಇಳಿ ಹರೆಯದಲ್ಲಿ ಇನ್ನೂ ಸಾಹಿತ್ಯ ಚಟುವಟಿಕೆ ಮುಂದುವರಿಸುತ್ತಾ ಇರುವುದು ಅವರ ಧೀ ಶಕ್ತಿಗೆ ನಿದರ್ಶನ ಎಂದು ಡಾ ಸುರೇಶ ನೆಗಳಗುಳಿ ಯವರು ವಿಶ್ಲೇಷಿಸಿದರು.
ಕವಿಗೋಷ್ಠಿಯ ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ ಸುಶೀಲಾ ಎಸ್ ಎನ್ ಭಟ್ ರವರು, ಮಹಿಳಾ ಸ್ವಾತಂತ್ಯ, ಮಹಿಳಾ ಶೋಷಣೆ ಇತ್ಯಾದಿಗಳು ಹೆಚ್ಚಾಗದಿರಲು ಸಾಹಿತ್ಯದಲ್ಲಿ ಆ ಕುರಿತಾದ ಬರಹಗಳು ಬರ ಬೇಕು. ಮಹಿಳೆ ಅಬಲೆ ಅನ್ನುವ ಮಾತು ಅಸಂಗತ.ಮಹಿಳೆ ಇಲ್ಲದೆ ಮನೆ ಬೆಳಗದು ಹಾಗೆಯೇ ಮಾತೃ ಭಾಷೆ ಕೂಡ ,ಮಾತೆಯಂತೆ,ಮಹಿಳೆಯಂತೆ ಜೀವನ ಬೆಳಗಲು ಪೂರಕ.ಹಾಗಾಗಿಯೇ ಮಾತೃ ಭಾಷೆಯ ಮೌಲ್ಯ ಅರಿತು ಬಾಳುವ ಕಿವಿ ಮಾತು ಹೇಳಿ ಹವ್ಯಕ ಹಾಗೂ ಕನ್ನಡ ಭಾಷೆಯ ಸ್ವರಚಿತ ಕವನ ವಾಚಿಸಿದರು. ಕವಿಗಳ ಕವನಗಳನ್ನು ಮನಸಾರೆ ಕೊಂಡಾಡಿದರು.
ಅನಂತರ ನಡೆದ ಕವಿಗೋಷ್ಠಿಯಲ್ಲಿ ಡಾ ಸುರೇಶ ನೆಗಳಗುಳಿ, ರೇಮಂಡ್ ಡಿ ಕುನ್ಹ ತಾಕೊಡೆ, ಶಿವರಾಜ್ ದೇವರಗುಡಿ, ಅರ್ಚನಾ ಕುಂಪಲ, ಫೆಲ್ಸಿ ಲೋಬೋ, ಗುಣಾಜೆ ರಾಮಚಂದ್ರ ಭಟ್, ಉಮೇಶ ಕಾರಂತ, ಮಾರ್ಸೆಲ್ ಡಿಸೋಜ, ಜೂಲಿಯೆಟ್ ಫೆರ್ನಾಂಡಿಸ್, ಶಿವಪ್ರಸಾದ ಕೊಕ್ಕಡ, ವಾಣಿಲೋಕಯ್ಯ, ಹಿತೇಶ್ ಕುಮಾರ್ ಎ, ವೆಂಕಟೇಶ ಗಟ್ಟಿ, ವಿಂಧ್ಯ ಎಸ್ ರೈ, ರಶ್ಮಿ ಸನಿಲ್, ಸುಹಾನಾ ಸಯ್ಯದ್, ರವಿ ಕುಮಾರ್ ನಾಗರ ಹಳ್ಳಿ, ಪ್ರೇಮ್ ಮೊರಾಸ್, ಉಮೇಶ್ ಶಿರಿಯಾ, ಎಸ್ ಕೆ ಕುಂಪಲ, ಜಯರಾಮ ಪಡ್ರೆ, ಜಯಾನಂದ ಪೆರಾಜೆ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಜಯಾನಂದ ಪೆರಾಜೆ, ಗೀತಾ ಲಕ್ಷ್ಮೀಶ, ರೇಖಾ ಸುದೇಶ ರಾವ್, ಬದ್ರುದ್ದೀನ್ ಕೂಳೂರು, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್, ಮಲ್ಲೇಶ್ ಜಿ ಹಾಸನ, ಸುನೀತಾ ಪಿ.ವಿ., ಸುಮಂಗಲಾ ದಿನೇಶ ಶೆಟ್ಟಿ, ಮನ್ಸೂರ್ ಮುಲ್ಕಿ, ಡಾ ವಾಣಿಶ್ರೀ ಕಾಸರಗೋಡು, ಗುರುರಾಜ ಎಂ ಆರ್, ಪ್ರಕಾಶ ಪಡಿಯಾರ್ ಮರವಂತೆಯವರು ಅವರವರ ಮಾತೃಭಾಷೆಯ ಕವನಗಳನ್ನು ವಾಚಿಸಿದರು
ವಾಚಿಸಿದ ಎಲ್ಲಾ ಕವಿಗಳಿಗೆ ಪುಸ್ತಕ ಮತ್ತು ಅಭಿನಂದನಾ ಪತ್ರವನ್ನು ಮುಖ್ಯ ಉಪಸ್ಥಿತಿ ಹೊಂದಿದ್ದ ಅಭಾಸಾಪ ರಾಜ್ಯ ಕಾರ್ಯದರ್ಶಿ ಸಂಚಾಲಕ ರಘುನಂದನ್ ಭಟ್ ಮತ್ತು ದ ಕ ಜಿಲ್ಲಾದ್ಯಕ್ಷ ಪ್ರೊ. ಮಾಧವ ಇವರು ಅರ್ಹರಿಗೆ ಹಸ್ತಾಂತರಿಸಿದರು
ನತಾಲಿಯ ಡಿಕುನಾ ವಂದಿಸಿದರು ರಿಯಾನಾ ಡಿ ಕುನ್ಹಾ ನಿರೂಪಣೆ ಮಾಡಿದರು.