ಶಿವಮೊಗ್ಗ, ಫೆಬ್ರವರಿ 06 : ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯವು ಗ್ರಾಮೀಣ ಪ್ರದೇಶದ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಫೆಬ್ರವರಿ 12ರಂದು ವಿದ್ಯಾಲಯದಲ್ಲಿ ಮಲೆನಾಡುಗಿಡ್ಡ ತಳಿ ಸಾಕಾಣಿಕೆ ಹಾಗೂ ಉತ್ಪನ್ನಗಳ ಮೌಲ್ಯವರ್ಧನೆ ಎಂಬ ವಿಷಯದ ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ತರಬೇತಿ ಅವಧಿಯಲ್ಲಿ ಮಲೆನಾಡುಗಿಡ್ಡ ಗೋ ತಳಿಗಳ ಪರಿಚಯ, ಗೊಬ್ಬರದ ಮಹತ್ವ ಹಾಗೂ ಉಪಯೋಗಗಳು, ಹಾಲಿನ ಉತ್ಪನ್ನಗಳು, ಪ್ರಾಮುಖ್ಯತೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿತೆಯನ್ನು ಏರ್ಪಡಿಸಲಾಗುವುದು. 30ಜನರಿಗೆ ಮಾತ್ರ ತರಬೇತಿಗೆ ಅವಕಾಶವಿದ್ದು, ಆಸಕ್ತರು ತಮ್ಮ ಹೆಸರನ್ನು ಫೆಬ್ರವರಿ 11ರೊಳಗಾಗಿ ಡಾ|| ಆರ್.ಜಯಶ್ರೀ, ಸಹ ಪ್ರಾಧ್ಯಾಪಕರು, ಮಲೆನಾಡುಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬ ನಗರ, ಶಿವಮೊಗ್ಗ ಇವರಲ್ಲಿ ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಮೊ.7899587556, 9448627916ನ್ನು ಸಂಪರ್ಕಿಸಬಹುದಾಗಿದೆ.