ಶಿವಮೊಗ್ಗ ಸೆಪ್ಟೆಂಬರ್ 23: ಪಶುವೈದ್ಯಕೀಯ ಮಹಾವಿದ್ಯಾಲಯವು ದಿ: 27/09/2022 ರಂದು ವಿನೋಬನಗರದ ಮಹಾವಿದ್ಯಾಲಯದ ಆವರಣದಲ್ಲಿ ಗ್ರಾಮೀಣ ಪ್ರದೇಶದ ರೈತರು/ರೈತ ಮಹಿಳೆಯರು/ನಿರುದ್ಯೋಗ ಯುವಕ ಯುವತಿಯರಿಗೆ, ಗೋಶಾಲಾ ನಿರ್ವಾಹಕರು ಇನ್ನಿತರ ಸಾರ್ವಜನಿಕರಿಗಾಗಿ ಮಲೆನಾಡುಗಿಡ್ಡ ತಳಿ ಸಾಕಾಣಿಕಾ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ “ಮಲೆನಾಡು ಗಿಡ್ಡ ತಳಿ ಸಾಕಾಣಕೆ; ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಹಸಿರು ಮೇವು ಉತ್ಪಾದನೆ” ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ತರಬೇತಿಯಲ್ಲಿ ಮಲೆನಾಡು ಗಿಡ್ಡ ಗೋ ತಳಿಯ ಸಾಕಾಣಿಕೆಯಲ್ಲಿ ಅಳವಡಿಸಬೇಕಾದ ವೈಜ್ಞಾನಿಕ ಕ್ರಮಗಳು, ದೇಶಿ ಗೋ-ತಳಿಗಳ ಪರಿಚಯ, ಹಸಿರು ಮೇವು ಉತ್ಪಾದನೆ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತಿಯುಳ್ಳವರು ದಿ: 26/01/2022 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 7899587556/ 9916918909/ 8310384135 ಗಳನ್ನು ಸಂಪರ್ಕಿಸುವುದು.

error: Content is protected !!