ತೀರ್ಥಹಳ್ಳಿಯಿಂದ ಸಾಗರ ಮಾರ್ಗವಾಗಿ 66 ನೇ ಮೈಲಿ ಗಲ್ಲಿನ ಹತ್ತಿರ ಹೋಗುವಾಗ ಸಿಗುವ ಊರು ಕೋಟೆಗದ್ದೆ ಗ್ರಾಮ, ತೀರ್ಥಹಳ್ಳಿ ತಾಲ್ಲೂಕಿನ ಸುಮಾರು 63 ಆಸಕ್ತ ಕೃಷಿಕರು ಕಳೆದ 10 ವರುಷಗಳ ಹಿಂದೆ “ತೀರ್ಥಹಳ್ಳಿ ತಾಲ್ಲೂಕು ವೆನಿಲ್ಲಾ ಬೆಳೆಗಾರರ ಸಂಘ”ವನ್ನು ಹುಟ್ಟು ಹಾಕಿದ್ದು, ಈ ಸಂಘ ಕೃಷಿಕರಿಂದ ಕೃಷಿಕರಿಗಾಗಿ ಕೃಷಿಕರು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಕೊಡುವಂತಹ ಉದ್ದೇಶ ಈ ಸಂಸ್ತೆಯಾದ್ದಾಗಿದೆ.
ಹಸಿವನ್ನು ನೀಗಿಸುವ ಹಲಸು ಸಂಸ್ಕರಣೆಯ ನಂತರ ಮೌಲ್ಯವರ್ಧನೆ
ಹಲಸು ಹಣ್ಣುಗಳ ಮಹಾರಾಜ ಆದರೆ ನಿಜವಾಗಿ ಗಾತ್ರ ವಿನ್ಯಾಸ, ಮರ, ರುಚಿ, ಅಡುಗೆ, ಹೀಗೆ ಒಂದಲ್ಲಾ ಒಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ ಇತ್ತೀಚಿನ ವರ್ಷಗಳಲ್ಲಿ ಹಲಸಿಗೆ ಹಾಗು ಅದರ ಮೌಲ್ಯವರ್ಧನೆಗೆ ಉತ್ಪನ್ನಗಳಿಗೆ ತುಂಬಾ ಬೇಡಿಕೆ ಇದೆ. ಹಸಿವಿನಿಂದ ತತ್ತರಿಸುತ್ತಿರುವ ಹಲಸು ಬಡವರ ಬಾದಾಮಿ. ಹಲಸಿನ ಕಾಯಿ ತೊಳೆಯ ಖಾದ್ಯ ಉಪಹಾರಕ್ಕಾದರೆ ಮದ್ಯಾಹ್ನದ ಊಟಕ್ಕೂ ಸೈ, ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿವ ಜೀವಗಳು ಎಷ್ಟೋ ಇವೆ.
“ತೀರ್ಥಹಳ್ಳಿ ತಾಲ್ಲೂಕು ವೆನಿಲ್ಲಾ ಬೆಳೆಗಾರರ ಸಂಘ”ಹಲಸಿನ ಕಯಿ ಹಣ್ಣುಗಳು ಸಿಗುವ ಕಾಲವಾದ ಮೇನಿಂದ ಆಗಸ್ಟ್ ವರೆಗೆ ಹಲಸಿನ ಹಪ್ಪಳವನ್ನು ತಯಾರು ಮಾಡಲು ಮುಂದಾಗಿದೆ.
ಮೇ ತಿಂಗಳಿನಿಂದ ಆಗಸ್ಟ್ ವರೆಗೆ ಹಲಸಿನ ಹಣ್ಣುಳ ಕಾಲ ಇರುತ್ತದೆ.. ಮಲೆನಾಡಿನ ರೈತರ ತಾಕುಗಳಲ್ಲಿ ಹಾಗು ಕಾಡಿನಲ್ಲಿ ಸಿಗುವ ಹಲಸಿನ ಕಾಯಿ ಹಣ್ಣುಗಳನ್ನು ಈ ಸಂಸ್ತೆ ಖರೀದಿ ಮಾಡುತ್ತದೆ, ನಂತರ ಹಲಸಿನ ಮೌಲ್ಯವರ್ಧನೆ ಮಾಡಲು ಮುಂದಾಗಿದೆ. ಸದ್ಯಕ್ಕೆ ಹಲಸಿನ ಹಪ್ಪಳವನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಲಸಿನ ಇನ್ನೂ ಹಲವಾರು ಉತ್ಪನ್ನಗಳನ್ನು ತಯಾರು ಮಾಡಲು ನಿರ್ಧರಿಸಿದೆ. ಈಗ “ತೀರ್ಥಹಳ್ಳಿ ತಾಲ್ಲೂಕು ವೆನಿಲ್ಲಾ ಬೆಳೆಗಾರರ ಸಂಘ” ಕಳೆದ 6 ವರುಷಗಳಿಂದ ಸಂಸ್ಕರಣೆ ಹಾಗು ಮೌಲ್ಯ ವರ್ಧನೆ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಈಗ ಸುಮಾರು ಹಲಸಿನ ಕಾಯಿ ಹಾಗು ಹಣ್ಣುಗಳು ಬರುವ ಕಾಲದಲ್ಲಿ [ಮೇನಿಂದ ಆಗಸ್ಟ್ ವರೆಗೆ] 2ಲಕ್ಷಕ್ಕೂ ಹೆಚ್ಚು ಹಲಸಿನ ಹಪ್ಪಳವನ್ನು ಮಾಡಲಾಗುತ್ತದೆ. ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆ ಬರುತಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಪೂರೈಸುವ ಕೆಲಸವನ್ನು ಈ ಸಂಘ ಮಾಡುವ ಪ್ರಯತ್ನವನ್ನು ಮಾಡುವ ವಿಚಾರವನ್ನು ಮಾಡುತ್ತಲಿದೆ ಎನ್ನುತ್ತಾರೆ ಸಂಘದ ಸದಸ್ಯ ವ್ಯವಸ್ತಾಪಕ ಸತ್ಯನಾರಾಯಣ.
ಸಂಪರ್ಕಕ್ಕೆ : ಸತ್ಯನಾರಾಯಣ ಕೋಟೆಗದ್ದೆ. 94489 44043
ವರದಿ: ಜೆ.ಲೋಕೇಶ್

error: Content is protected !!