ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಇಂದು ಶಿವಮೊಗ್ಗದಲ್ಲಿನ ಎನ್ ಯು
ಆಸ್ಪತ್ರೆಯಲ್ಲಿ ಅತ್ಯಾಧುನಿಕವಾದ ವರ್ಸಿಯಸ್ ರೋಬೋಟಿಕ್ ಆಪರೇಷನ್ ಸಿಸ್ಟಮ್ ಅನ್ನು
ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜೆನ್ ನೆಕ್ಸ್ ರೋಬೋಟಿಕ್ ಸರ್ಜರಿಯೂ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಗೂ ವರದಾನವಾಗಿದೆ. ಈ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಅನ್ನು ಕಡಿಮೆ ಗಾಯದ ಶಸ್ತ್ರಚಿಕಿತ್ಸೆ ಮಾಡಲು
ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚಿನ ರೋಗಿಗಳು ಉತ್ತಮ ಗುಣಮಟ್ಟದ ಚಿಕಿತ್ಸೆ
ಪಡೆಯಬಹುದಾಗಿದೆ. ಈ ವರ್ಸಿಯಸ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಮಲೆನಾಡು ಭಾಗದ ಜನರಿಗೆ ವೈದ್ಯಕೀಯ ಅದ್ಭುತ ವರದಾನವಾಗಲಿದೆ.ಭಾರತದಲ್ಲಿ ಎನ್ ಯು ಆಸ್ಪತ್ರೆಯು ನೆಫ್ರಾಲಜಿ ಮತ್ತು ಯುರಾಲಜಿ ಸರ್ಜರಿಗಳಿಗಾಗಿ 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಸಿಎಮ್‌ಆರ್ ವರ್ಸಿಯಸ್ ರೋಬೋಟ್ ಅನ್ನು ಸ್ಥಾಪಿಸಿದ ಮೊದಲ ಸೂಪರ್ ಸ್ಪೆಷಾಲಿಟಿ
ಆಸ್ಪತ್ರೆಯಾಗಿದೆ. ಇದು ಬೆಂಗಳೂರು ಮತ್ತು ಮಂಗಳೂರಿನ ನಂತರ ಕರ್ನಾಟಕದಲ್ಲಿ ಮೂರನೇ ಸೌಲಭ್ಯವಾಗಿದೆ ಎಂದರು
ಆಸ್ಪತ್ರೆಯ ಎಂ ಡಿ. ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, 2020ರಲ್ಲಿ ಮಾಚೇನಹಳ್ಳಿಯಲ್ಲಿ ನಾವು ಈ ಆಸ್ಪತ್ರೆಯನ್ನು ಸ್ಥಾಪಿಸಿದೆವು. ಎನ್ ಯು ಆಸ್ಪತ್ರೆ ಭಾರತದಲ್ಲಿಯೆ ಮುನ್ನಡೆ ಸಾಧಿಸಿದ ಆಸ್ಪತ್ರೆಯಾಗಿದೆ. ನೆಫ್ರೋ-ಯೂರಾಲಜಿಯಲ್ಲಿ ಮುನ್ನಡೆ ಸಾಧಿಸಿದ ಕೀರ್ತಿ ನಮಗೂ ಸಲ್ಲುತ್ತದೆ. ಇಗ ನಾವು ಪ್ರಾರಂಭಿಸಿರುವ ರೋಬೋಟಿಕ್ ಆಪರೇಷನ್ ಸಿಸ್ಟಮ್ ರಾಜ್ಯದಲ್ಲಿಯೆ ಮೂರನೆಯದು. ಭಾರತದಲ್ಲಿ ಕೇವಲ 110 ಇಂತಹ ಚಿಕಿತ್ಸಾ ಯಂತ್ರಗಳಿವೆ. ಜಗತ್ತಿನಲ್ಲಿ 16 ಸಾವಿರ ರೋಬೋಟಿಕ್ ಸಿಸ್ಟಮ್ ಇವೆ. ಇದಕ್ಕೆ ಹೋಲಿಸಿದರೆ ಶಿವಮೊಗ್ಗಕ್ಕೆ ಬಂದಿರುವುದು ಅತ್ಯಂತ ಸಂಭ್ರಮದ ವಿಷಯವೆ. ರೋಬೋಟಿಕ್ ಆಪರೇಷನ್ ಎಂದರೆ ಯಂತ್ರವೇ ಸ್ವತಃ ಮಾಡುವುದಿಲ್ಲ. ವೈದ್ಯರ ನಿರ್ದೇಶನದಂತೆ ರೋಬೋಟ್ ಕಾರ್ಯನಿರ್ವಹಿಸುತ್ತದೆ. ರೋಬೋಟಿಕ್ ಶಸ್ತç ಚಿಕಿತ್ಸೆಯಿಂದ ರೋಗಿಗಳಿಗೆ ಕಡಿಮೆ ನೋವು, ಸಣ್ಣಗಾಯ ಮತ್ತು ಶೀಘ್ರ ಚೇತರಿಕೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆಸ್ಪತ್ರೆಯ ವೈದ್ಯರುಗಳಾದ ಪ್ರವೀಣ್, ಕಾವ್ಯ, ಕೃಷ್ಣಪ್ರಸಾದ್, ಕಾರ್ತಿಕ್, ಪ್ರದೀಪ್, PRO ಶ್ರುತಿ ರಾವ್ ಇದ್ದರು.