“ಮನ್ವಂತರ ಮಹಿಳಾ ಮಂಡಳಿ ಮಂಥನಕ್ಕೆ ಪ್ರಾಧಾನ್ಯ, ಸಂಭ್ರಮಕ್ಕೆ ಸೋಪಾನ, ಅಂತರಂಗದ ಅಭಿವ್ಯಕ್ತಿತನ, ಕೌಶಲ್ಯಯುಕ್ತ ಬದುಕಿಗೆ ಪ್ರೇರಣ” ವಾಗುತ್ತದೆ …ಶ್ರೀರಂಜಿನಿ ದತ್ತಾತ್ರಿ, ಅಧ್ಯಕ್ಷರು, ಮನ್ವಂತರ ಮಹಿಳಾ ಮಂಡಳಿ.
ಸಮಾಜ ಜೀವನದ ಗುರಿಯೇ ಸಾಂಘಿಕ ಜೀವನ. ಪರಸ್ಪರ ಸಹಾಯ, ಸಹಕಾರದಿಂದ ಬದುಕುವುದೇ ಜೀವನದ ಗುರಿ. ಸಮಾಜದ ಸಂಬಂಧಗಳನ್ನು ಜೇಡರಬಲೆಗೆ, ಜೇನುಗೂಡಿಗೆ ಹೋಲಿಸುತ್ತಾರೆ. ಈ ಗೂಡುಗಳ ನಾಯಕಿ, ನಿರ್ವಾಹಕಿ ಆ ಗೂಡಿನ ಹಣ್ಣು ಜೇಡ, ಹೆಣ್ಣು ಜೇನು ಆಗಿರುತ್ತದೆ. ಹಾಗೇ ಸಮಾಜದ ಸಾಂಘಿಕ ಜೀವನದ ನಿರ್ವಾಹಕಿ ಮಹಿಳೆಯೇ ಆಗಿರುತ್ತಾಳೆ. ತನಗೆ ಅರಿವಿಲ್ಲದೆಯೇ ಕುಟುಂಬ – ಸಮಾಜ- ವೈಕ್ತಿಗಳ ನಡುವೆ ಸಂಬಂಧದ ಮಾಲೆ ಹೆಣೆಯುತ್ತಾ ಸ್ವಸ್ತ ಸಮಾಜವನ್ನು ಸಾದರಪಡಿಸುತ್ತಾ ಸಾಗುತ್ತಾಳೆ ಮಹಿಳೆ.
ಯಾವುದೇ ದೇಶದಲ್ಲಿ ಸಮನ್ವಯತೆ-ಸಂತುಲನತೆ-ಸಂಭ್ರಮದ ನೆಲೆ ಗಟ್ಟಿಯಾಗಿದೆ ಎಂದರೆ ಅದಕ್ಕೆ ಮಹಿಳೆಯೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಹುದು. ಕುಟುಂಬವನ್ನು ನಿರ್ವಹಿಸುವ ಮಹಿಳೆ ಮೊದಲು ಕುಟುಂಬದ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸಿ, ಪರಸ್ಪರರಲ್ಲಿ ಪ್ರೀತಿ, ಸ್ನೇಹ, ಮಮತೆ ಹಂಚಿ, ಉಣಬಡಿಸಿ, ಅವರಲ್ಲಿಯೂ ಈ ಎಲ್ಲ ಗುಣಗಳನ್ನು ಬೆಳೆಸುತ್ತಾಳೆ. ಕುಟುಂಬದ ಸದಸ್ಯರೆಲ್ಲರೂ ಈ ಎಲ್ಲವನ್ನು ಸಮಾಜಕ್ಕೂ ಉಣಬಡಿಸಬೇಕೆಂದು ಕಲಿಸುತ್ತಾಳೆ. ಕುಟುಂಬದಲ್ಲಿ ಸದ್ದುಗದ್ದಲವಿಲ್ಲದೆ ಸಂಘಟನೆಯ ಶಕ್ತಿ ನಿರ್ವಹಿಸಿದ ಮಹಿಳೆಗೆ ಸಮಾಜಿಕವಾಗಿ ಸಂಘಟನೆಯನ್ನು ಗಟ್ಟಿಗೊಳಿಸುವುದು ಕಷ್ಟವೇನಲ್ಲ. ಅಂತೆಯೇ ಮುಂದಿನ ದಿನಗಳಲ್ಲಿ “ಮನ್ವಂತರ ಮಹಿಳಾ ಮಂಡಳಿ ಮಂಥನಕ್ಕೆ ಪ್ರಾಧಾನ್ಯ, ಸಂಭ್ರಮಕ್ಕೆ ಸೋಪಾನ, ಅಂತರಂಗದ ಅಭಿವ್ಯಕ್ತಿತನ, ಕೌಶಲ್ಯಯುಕ್ತ ಬದುಕಿಗೆ ಪ್ರೇರಣ” ವಾಗುತ್ತದೆ ಎಂದು ನೂತನವಾಗಿ ಆರಂಭವಾದ ಮನ್ವಂತರ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ. ಶ್ರೀರಂಜಿನಿ ದತ್ತಾತ್ರಿ ತಮ್ಮ ಆಶಯ ಭಾಷಣದಲ್ಲಿ ನುಡಿದರು.
ಮನ್ವಂತರದ ಅರ್ಥವೇ ಹೊಸತು. ಹೊಸದನ್ನು ಅರಿತು, ಪಸರಿಸುವುದು ಮನ್ವಂತರದ ಮನದಾಶೆಯಾಗಿದೆ. ಹಲವು ವರ್ಷಗಳ ನಮ್ಮ ಆಶಯ ಮನ್ವಂತರದ ಮೂಲಕ ಅನಾವರಣಗೊಂಡಿದೆ. ಅನೇಕ ವಿಪ್ಲವಗಳು, ಬದಲಾವಣೆಯ ಹಾದಿಯಲ್ಲಿ ನಡೆದ ಮಹಿಳೆ ತನ್ನ ಬದುಕನ್ನು ತಾನು ಅರಳಿಸಿಕೊಂಡು, ಇತರರ ಬದುಕನ್ನು ಹಸನು ಮಾಡುವ ದಿಶೆಯಲ್ಲಿ ಮುನ್ನಡೆದಿದ್ದಾಳೆ. ಸೃಜನಶೀಲತೆ, ಕೌಶಲ್ಯ, ಚಾಕಚಕ್ಯತೆಯ ಹಾದಿಯಲ್ಲಿ ಮುನ್ನಡೆದಿರುವ ಮಹಿಳೆ ಹೊಸ ಮನ್ವಂತರವನ್ನು ಸೃಷ್ಠಿಸಿದ್ದಾಳೆ ಕೂಡ. ತನ್ನ ಬದುಕಿನ ಪ್ರಮುಖ ಘಟ್ಟಗಳಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೆಚ್ಚಿನ ಮಹಿಳೆಯರು ಪಡೆದಿದ್ದಾರೆ. ಇದು ಮತ್ತಷ್ಟು ಕಾರ್ಯರೂಪಕ್ಕೆ ಬರಬೇಕು. ನಾವು ಗಳಿಸಿದ ಭೌದ್ಧಿಕ ಸಂಪತ್ತು ನಮ್ಮ ಕೌಟುಂಬಿಕ ಜೀವನದ ನೆಮ್ಮದಿಯೊಂದಿಗೆ ಸಾಮಾಜಿಕ ಸವಾಸ್ಥ್ಯ ಕಾಪಾಡುವ ದಿಸೆಯಲ್ಲಿ ಮತ್ತಷ್ಟು ತೀವ್ರವಾಗಬೇಕು. ಹೆಣ್ಣು ಎಂದೂ ಚೈತನ್ಯದ ಚಿಲುಮೆಯೇ. ಕುಟುಂಬ ಮತ್ತು ಸಮಾಜವನ್ನು ಆರೋಗ್ಯವಾಗಿ ಇಡುವಲ್ಲಿ ಅವಳ ದೇಣಿಗೆ ಅಗಾಧ. ಸದ್ವಿಚಾರ, ಸಾಧನೆ, ಅಭಿವೃದ್ಧಿಯ ಕನಸು, ಗುರಿ ಇವುಗಳನ್ನು ಕುಟುಂಬದೊಳಗಿನ ಸದಸ್ಯರಿಗೆ ಕಟ್ಟಿಕೊಡುವವಳು ಮಹಿಳೆಯೇ. ಹಲವು ಕುಟುಂಬದ ಹಲವು ಸಮರ್ಥ ಮಹಿಳೆಯರು ಒಂದೇ ಸೂರಿನಡಿ ಸೇರಿದಾಗ ಮಹಿಳೆಯ ಶಕ್ತಿ, ಸಂಘಟನೆಯ ಶಕ್ತಿ ಹೆಚ್ಚುವುದಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸ್ನೇಹ-ಸಾಮರಸ್ಯ-ಸಂಬಂಧ-ಸದೃಢತೆಯೆಂಬ ಧ್ಯೇಯದೊಂದಿಗೆ ಮನ್ವಂತರವನ್ನು ಮುನ್ನಡೆಯೋಣ ಎಂದು ಶ್ರೀರಂಜಿನಿ ದತ್ತಾತ್ರಿ ನುಡಿದರು.
ದಿ: 26.4.2022ರಂದು ಸಂಜೀವಿನಿ ಸಭಾಂಗಣದಲ್ಲಿ ನಡೆದ ಮನ್ವಂತರ ಮಹಿಳಾ ಮಂಡಳ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀಮತಿ. ವೀರಮ್ಮ ಅಧ್ಯಕ್ಷರು ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ (ನಿ.,) ಶಿವಮೊಗ್ಗ ಇವರು ಇದೀಗ ಮಹಿಳೆಯರ ದೃಷ್ಠಿಕೋನ ಬದಲಾಗಿದೆ, ಚಿಂತನೆಯ ಹರಿವು ಹೆಚ್ಚಾಗಿದೆ, ಅಭಿವ್ಯಕ್ತಿಯ ನೆಲೆಯಲ್ಲಿ ಮುನ್ನಡೆದಿದೆ. ಪ್ರತಿಯೊಂದು ಮಹಿಳಾ ಸಂಘಟನೆಗೂ ಅದರದ್ದೇ ಆದ ಸಿದ್ದಾಂತದ ಚೌಕಟ್ಟಿನೊಳಗೆ ತಮ್ಮ ಸಂಸ್ಥೆಯನ್ನು ಆರಂಭಿಸಿಕೊಂಡು ಮುನ್ನಡೆಯುತ್ತವೆ. ಸ್ನೇಹವಿಲ್ಲದೆ ಸಮಾಹಜವಿಲ್ಲ ಸಮಾಜವಿಲ್ಲದೆ ಸ್ನೇಹವಿಲ್ಲ. ಸ್ನೇಹ-ಸೇವೆ ಎಲ್ಲವನ್ನು ಮೀರಿ ನಿಲ್ಲುವಂತದ್ದು. ನಿಮೆಲ್ಲರ ಮನೋಬಲದ ಸಾರಥ್ಯ ಮನ್ವಂತರಕ್ಕೆ ಇರಲಿ. ಸೇವೆ – ಸ್ನೇಹದ ಜೊತೆಗೆ ಆರ್ಥಿಕ ಬಲವನ್ನು ಪಡೆಯಲು ಸಹಕಾರ ತತ್ವದತ್ತಲೂ ನಿಮ್ಮ ಗಮನ ಹರಿಯಲಿ. ಸೇವೆ, ಶಿಕ್ಷಣ, ಸಂಸ್ಕøತಿ, ಸಂಸ್ಕಾರ ಎಂಬ ಚೌಕಟ್ಟಿನಲ್ಲಿ ನಿಮ್ಮ ಸಂಘಟನೆ ಆರಂಭವಾಗಿದೆ. ಈ ಗುಂಪಿನ ಅಧ್ಯಕ್ಷೆಯಾಗಿ ಶ್ರೀರಂಜಿನಿ ದತ್ತಾತ್ರಿ ಎಲ್ಲರೊಂದಿಗೆ ಬೆರೆತು ಈ ಮನ್ವಂತರ ಮಹಿಳಾ ಮಂಡಲವನ್ನು ಮುನ್ನಡೆಸಬಲ್ಲರು ಎಲ್ಲರಿಗೂ ಶುವಾಗಲಿ ಎಂದು ಶುಭ ನುಡಿದರು.
ಗೌರವ ಅಧ್ಯಕ್ಷರಾದ ಶ್ರೀಮತಿ. ಜಯಾ ಸುರೇಶ್‍ರವರು ಪ್ರಸ್ತುತ ದಿನಗಳಲ್ಲಿ ಮಹಿಳೆ ಒಂದಲ್ಲ ಒಂದು ಸಂಘಟನೆಯಲ್ಲಿ ತೊಡಗಿಕೊಂಡೇ ಇರುತ್ತಾಳೆ. ಸಂಘಟನೆಗಳ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಸಾಗುತ್ತಾಳೆ. ಆ ಮೂಲಕ ಅರ್ಥಪೂರ್ಣ ಬದಲಾವಣೆ ನೀಡುತ್ತಾಳೆ. ಬಹಳ ದಿನಗಳಿಂದ ಯೋಜಿಸಿದ್ದ ಮನ್ವತರ ಮಹಿಳಾ ಸಂಘಟನೆಯೂ ಅರ್ಥಪೂರ್ಣ ಕಾರ್ಯಗಳ ಮೂಲಕ ಮುನ್ನಡೆಯೋಣ ಈ ಸಂಘಟನೆಯ ಮೂಲಕ ನಡೆಸುವ ಯಾವುದೇ ಕಾರ್ಯಗಳಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದರು.
ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷರಾಗಿ ಶ್ರೀರಂಜಿನಿ ದತ್ತಾತ್ರಿ, ಗೌ.ಅಧ್ಯಕ್ಷರಾಗಿ ಜಯಾ ಸುರೇಶ್, ಕಾರ್ಯದರ್ಶಿಯಾಗಿ ಸುಲೋಚನಾ ಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಲತಾ ಸೋಮಶೇಖರ್, ಉಪಾಧ್ಯಕ್ಷರಾಗಿ ನೇತ್ರಾವತಿ ಮಂಜುನಾಥ್, ಖಜಾಂಚಿಯಾಗಿ ಉಷಾ ಸುದರ್ಶನ್ ನೇಮಿಸಲ್ಪಟ್ಟರು. ನಿರ್ಧೇಶಕರಾಗಿ ಬೃಂದಾ ಶಾನ್ ಭಾಗ್, ಅರ್ಚನಾ, ಇಂದುಹೆಗ್ಡೆ, ವಿದ್ಯಾ ಅಣ್ಣಪ್ಪ, ಗಂಗಾಂಭಿಕ, ಶ್ವೇತಾಸಂಪತ್ ರವರು ಆಯ್ಕೆಯಾದರು. ಸದಸ್ಯರಾಗಿ ಮೀರಾಕಾಮತ್, ಸವಿತಾ ವೆಂಕಟೇಶ್, ಅನ್ನಪೂರ್ಣ, ರತ್ನಮಲ್ಲಪ್ಪ, ಅಶ್ವಿನಿ, ಸಾವಿತ್ರಿಶಿವಸ್ವಾಮಿ, ವಿನಯಾ ಇಂದಿರೇಶ್, ಸ್ವಪ್ನ ಸುರೇಶ್, ವಿಜಯಾ ಹಾಲಸ್ವಾಮಿ, ವಿಜಯಾಶಿವು, ಅಶ್ವಿನಿ ಜಾದವ್, ಕುಸುಮ ಎಣ್ಣೇರ್, ಜ್ಯೋತಿವಾಸುದೇವ್, ಸೀತಾದೇವಿ, ಶ್ರೀಮತಿರವಿ, ಇಂದಿರಾನಾಗರಾಜ್, ಸುಧಾ, ಗಾಯತ್ರಿ,, ಹೆಗ್ಡೆ, ನಾಗರತ್ನನಾರಾಯಣ್, ಪುಷ್ಪ ಶಿವಣ್ಣ, ಲತಾ, ವಿನಯ, ವೀಣಾ ಮಂಜುನಾಥ್, ಶಶಿಕಲಾ, ಸಂಧ್ಯಾ ವಿನಯ್, ಸುವರ್ಣ, ಸುಜಾತ, ಆಶಾ, ಅಕ್ಷಯ, ಕವಿತಾ ವೆಂಕಟೇಶ್, ಹೀಗೆ 50ಕ್ಕೂ ಹೆಚ್ಚು ಮಹಿಳೆಯರು ಮನ್ವಂತರ ಮಹಿಳಾ ಮಂಡಳದ ಸದಸ್ಯರಾದರು. ಆರಂಭದಲ್ಲಿ ಗಣಪತಿ ಕುರಿತ ಪ್ರಾರ್ಥನಾ ಗೀತೆಯನ್ನು ಮನ್ವಂತರದ ಗುಂಪಿನ ಮಹಿಳೆಯರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಕಾರ್ಯದರ್ಶಿ ಸುಲೋಚನಾ ಮೂರ್ತಿ ನೆರವೇರಿಸಿದರು. ಲತಾ ಸೋಮಶೇಖರ್ ಸರ್ವರನ್ನು ಸ್ವಾಗತಿಸಿದರು. ಮಾಡಿದರು. ಆಶಯ ಭಾಷಣ ಶ್ರೀರಂಜಿನಿ ದತ್ತಾತ್ರಿಯವರು, ಉದ್ಘಾಟನಾ ಭಾಷಣ ವೀರಮ್ಮನವರು, ಅಧ್ಯಕ್ಷ ಭಾಷಣ ಜಯಾ ಸುರೇಶ್ ನೆರವೇರಿಸಿದರು. ವಂದನಾರ್ಪಣೆ ಉಷಾ ಸುದರ್ಧನ ನೆರವೇರಿಸಿದರು. ಪರಸ್ಪರ ಪರಿಚಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸುಮಾರು 50 ಜನ ಮಹಿಳೆಯರು ಸಂಘಟಿತರಾಗಿ ಮನ್ವಂತರ ಮಹಿಳಾ ಮಂಡಳಿಗೆ ಹೊಸ ಬಾಷ್ಯವನ್ನು ಬರೆದರು.