ಶಿವಮೊಗ್ಗ, ಸೆ.24 : ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಮತಗಟ್ಟೆ ಅಧಿಕಾರಿಗಳು ಸೆಪ್ಟಂಬರ್ 30ರ ಒಳಗಾಗಿ ಮನೆ ಮನೆ ಭೇಟಿ ಪೂರ್ಣಗೊಳಿಸಬೇಕು. ವಿಭಾಗ/ವ್ಯಾಪ್ತಿ ಪುನರ್ವಿಂಗಡನೆ ಅ.15ರವರೆಗೆ, ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಣೆ ಅಕ್ಟೋಬರ್ 15, ಆಕ್ಷೇಪಣೆ ಸಲ್ಲಿಕೆ ಅ.15ರಿಂದ ನವೆಂಬರ್ 30ರವರೆಗೆ, ವಿಶೇಷ ಆಂದೋಲನ ನ.2, 3, 9 ಮತ್ತು 10ರಂದು, ಆಕ್ಷೇಪಣೆಗಳ ವಿಲೇವಾರಿ ಡಿಸೆಂಬರ್ 15, ಭಾವಚಿತ್ರವಿರುವ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಜನವರಿ 1ರಿಂದ 15ರ ಒಳಗೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯಕ್ಕೆ ಸಂಬಂಧಿಸಿದಂತೆ ದೂರು, ಸಲಹೆಗಳನ್ನು ಅಥವಾ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿ ಕಚೇರಿ ಟೋಲ್ ಫ್ರೀ ಸಂಖ್ಯೆ 1950, ಜಿಲ್ಲಾಧಿಕಾರಿ ಮೊಬೈಲ್ ಸಂಖ್ಯೆ 9481492999 ಎಂದು ಅವರು ಹೇಳಿದ್ದಾರೆ.
ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತದಾರರ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಶಿವಮೊಗ್ಗ ತಾಲೂಕು 08182-220173, ಶಿವಮೊಗ್ಗ ನಗರ ವ್ಯಾಪ್ತಿ 08182-268510, ಭದ್ರಾವತಿ 08282-263466, ತೀರ್ಥಹಳ್ಳಿ 08181-228239, ಶಿಕಾರಿಪುರ 08187-222239, ಸೊರಬ 08184-272241, ಸಾಗರ 08183-226074, ಹೊಸನಗರ 08185-221125 ಸಂಪರ್ಕಿಸಬಹುದಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ತಿದ್ದುಪಡಿ, ವರ್ಗಾವಣೆ, ತೆಗೆದು ಹಾಕಲು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.