
ಪವಿತ್ರವಾದ ಮತದಾನವನ್ನು ಯಾರು ಕಳೆದು ಕೊಳ್ಳಬಾರದು. ನಮ್ಮ ಮನೆ ಕಾರ್ಯಕ್ರಮಕ್ಕೆ ಹೇಗೆ ತಪ್ಪದೆ ಭಾಗವಹಿಸುತ್ತೇವೊ ಹಾಗೆಯೆ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮ ಮತವನ್ನು ಚಲಾಯಿಸಿ, ಸದೃಡ ಗೊಳಿಸಬೇಕಾಗಿ, ಎಂಟೂ ರೋಟರಿ ಕ್ಲಬ್ ಗಳ ಪರವಾಗಿ ಅಸಿಸ್ಟೆಂಟ್ ಗೌರ್ನರ್ ರೊ.ಸುನಿತಾಶ್ರೀಧರ್ ಕೋರಿದರು.
ಮಾಜಿ ಜಿಲ್ಲಾ ರಾಜ್ಯಪಾಲರದ ರೊ.ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಮತದಾನ ವಾಗುತ್ತಿದೆ. ಆದರೆ, ನಗರ ಪ್ರದೇಶದ ಮತದಾರರು ಜಾಗೃತರಾಗಿ ತಪ್ಪದೆ ತಮ್ಮ ಇರುವಿಕೆಯನ್ನು ಗುರ್ತಿಸುವ ಮತದಾನದಲ್ಲಿ ಭಾಗಿಗಳಾಗಿ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಒ. ಸ್ನೇಹಲ್ ಸುಧಾಕರ್ ಲೋಕಂಡೆ ಕಾರ್ಯಕ್ರಮ ಉದ್ಘಾಟಿಸಿ, ಜನಜಾಗೃತಿ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಸಂಸ್ಥೆ ರೋಟರಿಯ ಎಲ್ಲಾ ಎಂಟು ಕ್ಲಬ್ ಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿರುವುದಾಗಿ ತಿಳಿಸಿದರು.
ನೋಡಲ್ ಅಧಿಕಾರಿ ಶ್ರೀಕಾಂತ್, ಸ್ವೀಫ್ ನ ಸಿಬ್ಬಂದಿ ಸಹಕರಿಸಿದರು. ಮಾಜಿ ಅಸಿಸ್ಟೆಂಟ್ ಗೌರ್ನರ್ ಜಿ.ವಿಜಯಕುಮಾರ್, ರೊ.ಆನಂದಮೂರ್ತಿ, ರೊ.ಸುರೇಶ್, ರೊ.ಮಂಜುಳ, ರೊ.ಚಂದ್ರು, ರೊ.ಭಟ್, ವಾಗೇಶ್, ಎಂಟು ಕ್ಲಬ್ಬಿನ ಸದಸ್ಯರು ಶಿವಪ್ಪನಾಯಕ ವೃತ್ತದಿಂದ, ಗೋಪಿ ವೃತ್ತದವರೆಗೆ ಜಾತಾದಲ್ಲಿ ಭಗವಹಿಸಿ ನಾಗರಿಕರಿಗೆ ಆಮೇಶಕ್ಕೆ ಬಲಿಯಾಗದೆ ಸ್ವತಂತ್ರವಾಗಿ ಮತದಾನ ಮಾಡುವಂತೆ ಜನಜಾಗೃತಿ ಕಾರ್ಯ ನೆರವೇರಿಸಿದರು. ರೊ.ಶ್ರೀಧರ್ ಸ್ವಾಗತಿಸಿ ರೊ.ಕೆ.ಪಿ.ಶೆಟ್ಟಿ ವಂದಿಸಿದರು.