ಸೇನಾ ದಿನಾಚರಣೆಯ ಅಂಗವಾಗಿ ಹುತಾತ್ಮ ಯೋದರಿಗೆ ಗೌರವ ನಮನ ದೇಶಾದ್ಯಂತ ಬುಧವಾರ 72ನೇಭೂ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಜನರಲ್.ಕೆ.ಎಂ.ಕಾರ್ಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜ.ಸರ್ ಎಫ್ ಆರ್ ಆರ್ ಬುಚರ್ ಅವರಿಂದ 1949ರಲ್ಲಿ ಸೇನಾ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡು ಸ್ವಾತಂತ್ರ್ಯೋತ್ತರದಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣೆಗಾಗಿ ಭಾರತೀಯ ಸೇನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭದಲ್ಲಿ ಸೈನಿಕರ ಕಲ್ಯಾಣ ಮತ್ತು ಪುರ್ವಸತಿ ಇಲಾಖೆಯ ಉಪನಿರ್ದೇಶಕ ಎನ್. ಚಂದ್ರಪ್ಪ ಎಲ್ಲಾ ನಿವೃತ್ತ ಸೇನಾ ಯೋಧರು, ಮತ್ತು ಕುಟುಂಬದವರಿಗೆ 72ನೇ ಸೇನಾ ದಿನದ ಅಂಗವಾಗಿ ಅಭಿನಂದನೆ ಸಲ್ಲಿಸಿದರು.ಭಾರತೀಯ ಸೇನೆ ದೇಶದ ಭದ್ರತಾ ಸವಾಲುಗಳಿಗೆ ಯಾವುದೇ ಯುದ್ಧ, ಸಂಘರ್ಷಗಳಲ್ಲಿ , ಗಡಿ ರಕ್ಷಣೆ ವಿಚಾರದಲ್ಲಿ, ಉಗ್ರರನ್ನು ಸದೆಬಡಿಯುವ ವಿಚಾರದಲ್ಲಾಗಲಿ ಉತ್ತರ ನೀಡಿ ಅತ್ಯುನ್ನತ ಮಟ್ಟದ ಪ್ರಾವೀಣ್ಯತೆಯನ್ನು ತೋರಿಸುತ್ತಿದ್ದಾರೆ ಭಾರತೀಯ ಸೇನೆಯ ಸವಿನೆನಪಿಗಾಗಿ ಜಿಲ್ಲಾಡಳಿತ ಶಿವಮೊಗ್ಗದಲ್ಲಿ ಸೈನಿಕ್ ಪಾರ್ಕ್ ನಿರ್ಮಿಸಿದ್ದು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಸ್ಮರಿಸಿದರು. ಕರ್ನಲ್ ಡಾಕ್ಟರ್ ರಘುನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಭೂಸೇನಾ ದಿನಾಚರಣೆಯ ಬಗ್ಗೆ ಶ್ರೀಕಾಂತ್ ಪ್ರಾಸ್ತಾವಿಕ ನುಡಿ ನುಡಿದರು ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ರೆಡ್ಡಿರವರು, ಶ್ರೀ ಉಮೇಶ್ ಬಾಪಟ್ ಶಿವಕುಮಾರ ಮತ್ತು ಮಾಜಿ ಸೈನಿಕರ ಸಂಘದ ಪದ ಧಿಕಾರಿಗಳು ಸೈನಿಕರ ಕಲ್ಯಾಣ ಇಲಾಖೆ ಯ ಸಿಬ್ಬಂದಿ ಗಳು ಹಾಗೂ ಮಾಜಿ ಸೈನಿಕರ ಕುಟುಂಬದವರು ಹಾಜರಿದ್ದರು ಇಂದು ಬೆಳಗ್ಗೆ ಶಿವಮೊಗ್ಗ ಸೈನಿಕ ಪಾರ್ಕ್ ನಲ್ಲಿನ ಯುದ್ಧ ಸ್ಮಾರಕಕ್ಕೆ ತೆರಳಿ ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.