ಭಾವಸಾರ್ ವಿಷನ್ ಇಂಡಿಯಾ ಶಿವಮೊಗ್ಗ ಸಂಸ್ಥೆಯು ನಗರದ ಜನತೆಗಾಗಿ 2023ರ ಮಾರ್ಚ್ 5 ರಂದು ವೆರಿಕೋಸ್ ವೆಯಿನ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಭಾವಸಾರ ವಿಷನ್ ಇಂಡಿಯಾ ಸಂಸ್ಥೆಯು ದೇಶಾದ್ಯಂತ ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಕಳೆದ 20 ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಸಮಾಜ ಸೇವೆ ನಡೆಸಿಕೊಂಡು ಬರಲಾಗುತ್ತಿದೆ ವೆರಿಕೋಸ್ ವೆಯಿನ್ಸ್ ರೋಗಕ್ಕೆ ಹಲವಾರು ಜನರು ತಾಗುತ್ತಿದ್ದು ನಿರಂತರವಾಗಿ ನಿಂತುಕೊಂಡು ಹಾಗೂ ಕುಳಿತುಕೊಂಡು ಕೆಲಸ ಮಾಡುವ ಜನರಿಗೆ ಈ ಕಾಯಿಲೆ ಪಿಡುಗಾಗಿ ಕಾಡುತ್ತಿದೆ
ಈ ತಪಾಸಣಾ ಶಿಬಿರವನ್ನು ಶೃಂಗೇರಿಯ ಹೆಸರಾಂತ ಆಯುರ್ವೇದಿಕ್ ವೈದ್ಯರಾದ ಡಾಕ್ಟರ್ ಎಂವಿ ಉರಾಳ್ ರವರು ನಡೆಸಿಕೊಡಲಿದ್ದಾರೆ ದಿನಾಂಕ 5.3.2023ರ ಭಾನುವಾರದಂದು ಬೆಳಿಗ್ಗೆ 9:00ಗೆ ನಗರದ ವಿನಾಯಕ ನಗರದ ನೂರು ಅಡಿ ರಸ್ತೆಯಲ್ಲಿರುವ ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ತಪಾಸಣಾ ಶಿಬಿರ ಪ್ರಾರಂಭವಾಗಲಿದೆ ಎಲ್ಲಾ ಹಂತದ ಸಮಸ್ಯೆಗೂ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯ ಸಲಹೆ ನೀಡಲಿದ್ದಾರೆ
ಈ ಸಮಸ್ಯೆಯಿಂದ ಬಳಲುತ್ತಿರುವ ನಗರದ ನಾಗರಿಕರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ
ಪ್ರಭಾಕರ್ ವಂಡಕರ್: 94493 29122 ಸಚಿನ್ ಬೇದ್ರೆ: 9481466 666 ಪ್ರತಾಪ್ ಮಹೇಂದ್ರ ಕರ್: 9964587821 ವಿನಯ್ ಕುಂಟೆ : 916464480