ಸ್ಕೌಟ್ಸ್-ಗೈಡ್ಸ್ ಸಂಸ್ಥೆಯು ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ ಅಲ್ಲದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ಈ ಸಂಸ್ಥೆಯ ಮುಖ್ಯ ಪಾತ್ರವಾಗಿದೆ ಅಲ್ಲದೆ ರಾಜ್ಯ ಪಾಲರಿಂದ ಪ್ರಶಸ್ತಿ ಪಡೆಯುವುದು ಒಂದು ವಿಶೇಷವೆ ಸರಿ ತಾವೆಲ್ಲರೂ ರಾಜ್ಯ ಪಾಲರ ಪ್ರಶಸ್ತಿಯನ್ನು ಪಡೆದುಕೋಳ್ಳಲು ಈ ಪೂರ್ವಸಿದ್ದತಾ ಪರೀಕ್ಷಾ ಶಿಬಿರಕ್ಕೆ ಬಂದಿದ್ದಿರಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತಾ ನಾನು ಸಹ ಶಿವಮೊಗ್ಗದಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿರುತ್ತೇನೆ ಈ ಸಂಸ್ಥೆಯಲ್ಲಿ ಕೊಂಡಜ್ಜಿ ಬಸಪ್ಪ ರವರ ಸೇವೆ ಅಮೂಲ್ಯವಾದದ್ದು, ಯಾವುದೆ ಕೆಲಸ ಕಾರ್ಯ ಸೇವೆ ಸಲ್ಲಿಸುವುದಿರಲಿ ಸ್ಕೌಟ್ ಗೈಡ್ ಗಳು ಅಲ್ಲಿದ್ದು ತಮ್ಮ ಸೇವೆಯನ್ನು ಕೊಡುತ್ತಾರಲ್ಲದೆ ಎಲ್ಲರೊಂದಿಗೆ ವಿನಯಪೂರ್ವಕವಾಗಿ ಯಾವುದೆ ಪ್ರತಿಫಲಾಕ್ಷೆಯನ್ನು ಬಯಸದೆ ಸೇವೆಯನ್ನು ಮಾಡುತ್ತಿದೆ. ಆದ್ದರಿಂದ ಸ್ಕೌಟ್ಸ್ ಗೈಡ್ಸ್ ರೋರ್ಸ್ ರೇಂರ್ಸ್ ಗಳಿಗೆ ಕಳೆದ ವರ್ಷ ಮಹಾನಗರ ಪಾಲಿಕೆಯಿಂದ ಸಮವಸ್ತçವನ್ನು ನೀಡಿದ್ದು ಅದು ಪ್ರತಿವರ್ಷವು ಜಾರಿಯಲ್ಲಿರುತ್ತದೆ ಈ ವರ್ಷವು ನಾವು ಸಮವಸ್ತçವನ್ನು ನೀಡುತ್ತೇವೆ ಅಲ್ಲದೆ ಹಳ್ಳಿ ಹಳ್ಳಿ ಮಕ್ಕಳಿಗೂ ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಆಶಿಸುತ್ತೇನೆ ಹಾಗೂ ನಮ್ಮ ಸಹಾಯ ಸಹಕಾರ ಯಾವತ್ತು ಸ್ಕೌಟ್ ಗೈಡ್ ಸಂಸ್ಥೆಗೆ ಇದೆ ಎಂದು ಜಿಲ್ಲಾ ಸ್ಕೌಟ್ ಭವನ, ಶಿವಮೊಗ್ಗದಲ್ಲಿ ನಡೆದ ಸ್ಕೌಟ್ಸ್, ಗೈಡ್ಸ್ಗಳ “ರಾಜ್ಯ ಪುರಸ್ಕಾರ” ಫೂರ್ವಸಿದ್ದತಾ ಪರೀಕ್ಷಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದು ಮಕ್ಕಳನ್ನುದ್ದೇಶಿಸಿ ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀಯುತ ಎಸ್.ಎನ್.ಚನ್ನಬಸಪ್ಪ ರವರು ಮಾತನಾಡಿದರು.
ಈ ಸಮರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ್ ರವರು ಮಾತನಾಡಿ ಮುಡಬಿದ್ರೆಯಲ್ಲಿ ನಡೆದ ಅಂತರಾಷ್ಟಿçÃಯ ಜಾಂಬೂರಿಗೆ ಜಿಲ್ಲೆಯ ೧೫೦೦ ಮಕ್ಕಳು ಭಾಗವಹಿಸಿದ್ದರು ಇದನ್ನು ತಮಗೆ ತಿಳಿಸಲು ಹೆಮ್ಮೆ ಅನಿಸುತ್ತಿದೆ ಯಾಕೆಂದರೆ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾವು ಮಹಾನಗರ ಪಾಲಿಕೆಯಿಂದ ನಿಡಿದ ಸಮವಸ್ತçವನ್ನು ಕೊಟ್ಟಿದ್ದೇವೆ. ಜಿಲ್ಲಾ ಮಟ್ಟದ ರ್ಯಾಲಿ ಮಾಡಬೇಕಾಗಿದೆ ಈ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸಿದೆ ಅಲ್ಲದೆ ೧೯೪೮ ಕ್ಕೆ ಈ ಕಟ್ಟದವು ನಿರ್ಮಾಣ ಗೊಂಡಿತು ಹಲವಾರು ಮಹಿನಿಯರು ಇಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸುತ್ತಾ, ನಮ್ಮ ಸಂಸ್ಥೆಗೆ ತಾವು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಸಹಕಾರ ನೀಡಬೇಕೆಂದು ತಿಳಿಸಿದರು.
ಕ್ಯಾಂಪಿನ ಉಸ್ತುವಾರಿ ವಹಿಸಿ ಕಾರ್ಯಕ್ರಮದ ನಿರೂಪಣೆ ಯನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ ರವರು ನಿರ್ವಹಿಸಿದರು, ಸ್ವಾಗತವನ್ನು ಜಿಲಾ ಕಾರ್ಯದರ್ಶಿ ಪರಮೇಶ್ವರ ನಿರ್ವಹಿಸಿದರೆ ವಂದನಾರ್ಪಣೆಯನ್ನು ಜಿಲ್ಲಾ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ ನಿರ್ವಹಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ್ ಪಿ.ಆರ್.ಒ ವಿಜಯಕುಮಾರ ಜಿ. ಶಿಬಿರದ ನಾಯಕರಾದ ಹೆಚ್.ಶಿವಶಂಕರ್, ಎ.ವಿ.ರಾಜೇಶ, ಜ್ಯೋತಿ, ಸಹಾಯಕರಾಗಿ ಸಿ.ಎಂ.ಪರಮೇಶ್ವರ್, ಗೀತಾ ಚಿಕ್ಕಮಠ, ಚಂದ್ರಶೇಖರಯ್ಯ, ಪ್ರಮೀಳಾ, ವಿನಯಬೂಷಣ್, ವಿಜಯಲಕ್ಷಿ÷್ಮ, ಸುಜಾತಾ, ಬಸವಣ್ಣಪ್ಪ, ಉಮೇಶ ಅಂಗಡಿ ಹಾಗೂ ಜಿಲ್ಲೆಯ ೨೦೦ ಸ್ಕೌಟ್ಸ್ ಗೈಡ್ಸ್ ರೋರ್ಸ್ ರೇಂರ್ಸ್ಗಳು ಉಪಸ್ಥಿತರಿದ್ದರು.