“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಶಿವಮೊಗ್ಗ, ಡಿಸೆಂಬರ್ 26 : ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಹರಿಹರಪುರದ ಪ್ರಭೋದಿನಿ ಗುರುಕುಲದ ಸಹಯೋಗದೊಂದಿಗೆ ಡಿಸೆಂಬರ್ 28ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ವಿವಿದೋದ್ಧೇಶ ಸಭಾಂಗಣದಲ್ಲಿ ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಕೃಷಿ ವಿಜ್ಞಾನ ಎಂಬ ವಿಷಯದ ಕುರಿತು 2ದಿನಗಳ ರಾಷ್ಟ್ರೀಯ ಸಂಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜುನಾಥ್ ಕೆ.ನಾಯ್ಕ್ ಅವರು ಹೇಳಿದರು.
ಅವರು ಇಂದು ಈ ಕಾರ್ಯಕ್ರಮದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಇದೊಂದು ವಿನೂತನ ಪ್ರಯತ್ನವಾಗಿದ್ದು, ಹಳೆ ಬೇರು-ಹೊಸ ಚಿಗುರು ಎಂಬ ನಾಣ್ಣುಡಿಯಂತೆ ಹಳೆಯ ಕಾಲದ ಕೃಷಿ ಪದ್ದತಿಗಳನ್ನು ಹೊಸಕಾಲದ ವ್ಯವಸ್ಥೆಯೊಂದಿಗೆ ಹೊಂದಿಸಿಕೊಂಡು ಸಾಹಿತ್ಯವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪೂರಕ ಸಾಹಿತ್ಯಾವಲೋಕನ ನಡೆಸಿ, ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ವಿಚಾರಗೋಷ್ಟಿಗೆ ಆಂದ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ 50ಕ್ಕೂ ಹೆಚ್ಚಿನ ವಿಜ್ಞಾನಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅಲ್ಲದೆ ಪ್ರಮುಖವಾಗಿ ಪ್ರಾಚೀನ ಸಾಹಿತ್ಯದಲ್ಲಿನ ಜ್ಞಾನ ಆಧರಿಸಿದ ಅಥವಾ ಪ್ರಾಚೀನ ಸಾಹಿತ್ಯದಲ್ಲಿನ ಜ್ಞಾನ ಹಾಗೂ ಅದಕ್ಕೆ ಪೂರಕವಾದ ಇಂದಿನ ಸಂಶೋಧನೆಗಳನ್ನು ತೌಲನಿಕವಾಗಿ ನೋಡುವ ಹಾಗೂ ಪ್ರಾಚೀನ ಸಾಹಿತ್ಯದಲ್ಲಿನ ಕೃಷಿ ವಸ್ತು ವಿವರ ಸಂಗ್ರಹಿಸುವ ರೀತಿಯ ಲೇಖನಗಳು ಮಂಡನೆಯಾಗಲಿವೆ ಎಂದವರು ತಿಳಿಸಿದ್ದಾರೆ.
ಈ ವಿಚಾರಗೋಷ್ಟಿಯನ್ನು ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿ ಅಧ್ಯಕ್ಷ ಡಾ.ಅಶೋಕ ದಳವಾಯಿ ಅವರು ಉದ್ಘಾಟಿಸುವರು.. ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಅವರು ಪ್ರಧಾನ ಭಾಷಣ ಮಾಡುವರು ಎಂದರು.
ಡಿಸೆಂಬರ್ 29ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿ ಕುಲಪತಿ ಡಾ.ಎಂ.ಕೆ.ನಾಯಕ್ ಅವರು ಅಧ್ಯಕ್ಷತೆ ವಹಿಸುವರು. ಮತ್ತೂರಿನ ಸಮಾಜ ಸೇವಾ ಕಾರ್ಯಕರ್ತ ಪಟ್ಟಾಭಿರಾಮ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಾಚೀನ ಕೃಷಿಯ ವೈಜ್ಞಾನಿಕ ನೆಲೆಗಳು ಎಂಬ ವಿಷಯದ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಡಿಸೆಂಬರ್ 28ರಂದು ಸಂಜೆ 6ಗಂಟೆಗೆ ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಡಾ|| ಶಶಿಧರ್, ರಿಜಿಸ್ಟ್ರಾರ್ ಡಾ||ಬಿ.ಹೇಮ್ಲಾನಾಯ್ಕ್, ಡಾ||ಎಸ್.ಪಿ.ನಟರಾಜ್, ಡಾ||ಬಿ.ಆರ್.ಗುರುಮೂರ್ತಿ, ಡಾ||ಮಂಜುನಾಥ್, ಡಾ||ಜಯಂತಿ, ಡಾ||ಅನೀಶ್, ಅರುಣ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!