ಮಾರ್ಚ್ 19 ರ ಭಾನುವಾರ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ‘ಶ್ರೀವಿಜಯ ಸಂಭ್ರಮ’ ಎಂಬ ಸಾಂಸ್ಕøತಿಕ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲಿ ್ಲಆಯೋಜಿಸಲಾಗಿದೆ.ಶ್ರೀವಿಜಯ ಕಲಾನಿಕೇತನ ಆಯೋಜಿಸಿರುವ ‘ಹಾಡು-ಆಡು-ಮಾತಾಡು’ ಎಂಬ ಹೆಸರಿನ ಈ ಮಾಲಿಕೆಯಲ್ಲಿ ಡೊಳ್ಳು ಕುಣಿತ, ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಪ್ರಾತ್ಯಕ್ಷಿಕೆ, ಹಾಸ್ಯೋಲ್ಲಾಸ, ನಟನೆ-ಜೀವನ, ಹಾಸ್ಯೋಲ್ಲಾಸ, ಕಗ್ಗ-ನೃತ್ಯ ಉಪನ್ಯಾಸ , ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ಮತ್ತು ನಾಟಕಗಳನ್ನು ಏರ್ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ 52 ಪರಿಣತ ಲೇಖಕರು ಮನಸ್ಸು ಮತ್ತು ಕಲೆ, ವಿಜ್ಞಾನಗಳ ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ‘ಮನದಂಗಳದಲ್ಲಿ ಸಾಹಿತ್ಯದರಳು’ ಎಂಬ ಡಾ.ಕೆ.ಎಸ್.ಪವಿತ್ರಾ ಸಂಪಾದಕತ್ವದ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.
ಪ್ರೊ.ಸಿ.ಆರ್.ಚಂದ್ರಶೇಖರ್, ಪ್ರೊ,ಬಿ,ಎನ್.ಗಂಗಾಧರ್, ಪ್ರೊ.ಹೆಚ್.ಎಸ್.ರಾಘವೇಂದ್ರರಾವ್, ಡಾ.ಗಜಾನನಶರ್ಮಾ, ವಿ.ಹೆಚ್.ಎಸ್.ನಾಗರಾಜ್, ವಿ.ಜಿ.ಎಸ್.ನಟೇಶ್, ಶ್ರೀ ಎಂ.ಎಸ್.ನರಸಿಂಹಮೂರ್ತಿ, ಶ್ರೀ ಡುಂಡಿರಾಜ್, ಡಾ.ವಸುಂಧರಾ ಭೂಪತಿ, ಪ್ರಜ್ಞಾ ಮತ್ತೀಹಳ್ಳಿ, ಶ್ರೀಧರ್ ಮೂರ್ತಿ, ದೀಪಾ ರವಿಶಂಕರ್, ವಸುಧಾ ಶರ್ಮಾ, ಸಾಸ್ವೆಹಳ್ಳಿ ಸತೀಶ್, ಡಾ.ಚೈತ್ರಾ, ಡಾ.ಶುಭ್ರತಾ ಮೊದಲಾದ ಖ್ಯಾತ ನಾಮರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಪಾಲ್ಗೊಳ್ಳುವಂತೆ ‘ಶ್ರೀವಿಜಯ’ಕೋರುತ್ತದೆ.