ಪ್ರೌಢ ತಿಗಣೆಗಳು ಮತ್ತು ಮರಿ ಕೀಟಗಳೆರಡು ಹಾನಿ ಮಾಡುತ್ತವೆ. ಮೊಟ್ಟೆಯೊಡೆದು ಹೊರಬಂದ 3 ರಿಂದ 4 ಗಂಟೆಗಳವರೆಗೆ ಅಪ್ಸರೆಗಳು ಎಲೆಗಳಿಂದ ರಸ ಹೀರಲು ಪ್ರಾರಂಭಿಸುತ್ತವೆ. ನಂತರ ಹಾನಿಗೊಳಗಾದ ಕಾಳುಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಾಣಿಸಿಕೊಳ್ಳುತ್ತದೆ. ಹಾಲಿನ ಹೀರುವಿಕೆಯಿಂದ ಕಾಳುಗಳು ಜಳ್ಳಾಗುತ್ತವೆ. ಬಹಳ ಸಂಖ್ಯೆಯಲ್ಲಿ ಹಾನಿಮಾಡಿ ಶೇ.50 ರಷ್ಟು ಇಳುವರಿ ಕಡಿತವಾಗಿರುವ ನಿದರ್ಶನಗಳಿವೆ. ಈ ಕೀಟಗಳು ತಮ್ಮ ಹೊಟ್ಟೆಯಿಂದ ಕೆಟ್ಟವಾಸನೆ ಬರುವ ರಾಸಾಯನಿಕವನ್ನು ಸ್ರವಿಸುತ್ತವೆ. ಗದ್ದೆಗಳಲ್ಲಿ ಇವುಗಳು ಇರುವಿಕೆಯನ್ನು ಅವು ಹೊರಸೂಸುವ ವಾಸನೆಯಿಂದ ಅರಿತುಕೊಳ್ಳಬಹುದು. ಒಣಹುಲ್ಲು ಸಹ ಕೆಟ್ಟ ವಾಸನೆ ಬರುವುದರಿಂದ ಜಾನುವಾರುಗಳಿಗೆ ಯೋಗ್ಯವಾಗಿರುವುದಿಲ್ಲ.
ಆರ್ಥಿಕ ಹಾನಿಯ ಸಂಖ್ಯೆ: 5 ಕೀಟಗಳು/ 100 ತೆನೆಗಳು – ಹೂಬಿಡುವ ಹಂತ
16 ಕೀಟಗಳು/ 100 ತೆನೆಗಳು – ಹಾಲ್ಗಾಳು ಹಂತ
ಜೀವನ ಚರಿತ್ರೆ: ಮೊಟ್ಟೆಗಳು ವೃತ್ತಾಕಾರದ ಕಂದುಬಣ್ಣದ ಬೀಜದಂತೆ 2 ಮಿ.ಮೀ. ಉದ್ದವಾಗಿದ್ದು ಗರಿಗಳ ಅಂಚಿನ ಮೇಲೆ ಮತ್ತು ನಡು ದಿಂಡಿನ ಮೇಲೆ ಉದ್ದಕ್ಕೂ ಎರಡು ಸಾಲುಗಳಲ್ಲಿ (10-25) ಜೋಡಿಸಿದಂತೆ ಇಡುತ್ತದೆ. ಪ್ರತಿ ಹೆಣ್ಣು ತಿಗಣೆಗಳು 200-300 ಮೊಟ್ಟೆಗಳನ್ನು ಇಡುತ್ತವೆ. ಅಪ್ಸರೆ ಕೀಟಗಳ ಮೊದಲ ಹಂತ ಚಿಕ್ಕದಾಗಿದ್ದು 2 ಮಿ.ಮೀ. ಉದ್ದ ಮಸುಕಾದ ಹಸಿರು ಬಣ್ಣದಲ್ಲಿರುತ್ತದೆ ಮತ್ತು ಹಂತ ಹಂತವಾಗಿ ಹಸಿರು ಬಣ್ಣವನ್ನು ಹೆಚ್ಚಿಸುತ್ತದೆ. ಪ್ರೌಢಹುಳುಗಳು ಹಸಿರು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು ತೆಳ್ಳಗೆ ಉದ್ದವಾಗಿರುತ್ತದೆ.
ನಿರ್ವಹಣಾ ಕ್ರಮಗಳು:
• ಮೊಟ್ಟೆಯ ಗುಂಪುಗಳು, ಅಪ್ಸರೆ ಮತ್ತು ಪ್ರೌಢ ಹುಳುಗಳನ್ನು ಕೈಯಿಂದ ಹಿಡಿದು ಅಥವಾ ಕೀಟ ಬಲೆಗಳನ್ನು (sತಿeeಠಿಟಿeಣ) ಬಳಸಿ ಹಿಡಿದು ನಾಶಪಡಿಸಬಹುದು.
• ಭತ್ತದ ಗದ್ದೆಗಳ ಬದುಗಳ ಮೇಲೆ ಮತ್ತು ಸುತ್ತ ಮುತ್ತ ಇತರ ಕಳೆಗಳನ್ನು ನಾಶಪಡಿಸಬಹುದು.
• ಮೆಲಾಥಿಯಾನ್ 5 ಡಿ ಎ 25 ಕೆ.ಜಿ. (ಹೆಕ್ಟೇರ್ ಗದ್ದೆಗಳ ಅಂಚುಗಳ ಮಧ್ಯಕ್ಕೆ ಪ್ರಾರಂಭಿಸಿ ವೃತ್ತಾಕಾರವಾಗಿ ಧೂಳೀಕರಿಸಿ, ತೀವ್ರವಾದ ಹಾನಿಯಿದ್ದರೆ ಕೀಟನಾಶಕವನ್ನು ಹತ್ತು ದಿನಗಳ ನಂತರ ಪುನರಾವರ್ತಿಸಿ.

ಈ ಮೇಲೆ ತಿಳಿಸಿದ ಕೀಟಗಳು ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಕಂಡುಬರುವ ಮುಖ್ಯ ಕೀಟಗಳು. ಇವುಗಳ ಜೊತೆಗೆ ಅಲ್ಲಲ್ಲಿ ಈ ಕೆಳಗೆ ತಿಳಿಸಿದ ಕೀಟಗಳು ಸಣ್ಣ ಪ್ರಮಾಣದಲ್ಲಿ ಹಾನಿ ಮಾಡಬಹುದು. ಇವುಗಳ ಹೆಸರನ್ನು ಮಾತ್ರ ಇಲ್ಲಿ ಕೊಡಲಾಗಿದೆ.

  1. ಬಿಳಿಬೆನ್ನಿನ ಜಿಗಿಹುಳು, ಸೊಗಾಟೆಲ್ಲಾ ಫರ್ಸಿಪೆರಾ (sogಚಿಣeಟಟಚಿ ಜಿuಡಿಛಿiಜಿeಡಿಚಿ), ಡೆಲ್ಸಾಸಿಡೆ, ಹೆಮಿಪ್ಟೆರಾ
  2. ತೆನೆಸ್ಟಿಂಕ್ ಬಗ್/ ಕೆಂಪುಮಚ್ಚೆಯ ಹುಳು, ಮೆನಿಡಾ ಹಿಸ್ಟ್ರಿಯೋ, ಪೆಂಟಲೋಮಿಡೆ, ಹೆಮಿಪೈರಾ
  3. ಬಿಳಿ ಜಿಗಿಹುಳು, ಕೋಫಾನಾ ಸ್ಟ್ರೆಕ್ಟ್ರಾ, ಸಿಕಾಡೆಲ್ಲಿಡೆ, ಹೆಮಿಪ್ಟೆರಾ
  4. ಭತ್ತದ ಬಿಳಿ ಉಣ್ಣೆ: ಬೈವಿನಿಯೊರೆಹಿ, ಸೂಡೊಕಾಕ್ಸಿಡೆ, ಹೆಮಿಪ್ಟೆರಾ
error: Content is protected !!