ಪುರುಷೋತ್ತಮ ಸಾವಯವ ಕೃಷಿ ಪರಿವಾರ ತೀಥ೯ಹಳ್ಳಿ, ಹೇಮಾದ್ರಿ ವಿವಿದುದ್ದೇಶ ಸೌಹಾದ೯ ಸಹಕಾರಿ ತೀಥ೯ಹಳ್ಳಿ,ರಾಮೇಶ್ವರ ಬಹು ಉದ್ದೇಶಿಸೌಹಾದ೯ ಸಹಕಾರಿ, ತೀಥ೯ಹಳ್ಳಿ.ಸರಸ್ವತಿ ಸೌಹಾದ೯ ಸಹಕಾರಿ ತೀಥ೯ಹಳ್ಳಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಭತ್ತ ಉಳಿಸಿ –ಬೆಳಸಿ ಅಭಯಾನ “ಅರಿಯೋಣ ನಮ್ಮನ್ನ-ನಮ್ಮ ಅನ್ನ” ಕೃಷಿಕರ ಹಾಗೂ ಗ್ರಾಹಕರ ಸಮ್ಮಿಲನ ಕಾಯ೯ಕ್ರಮವನ್ನು ಪುರುಷೋತ್ತಮ ಸಾವಯವ ಕೃಷಿ ಪರಿವಾರ ತೀಥ೯ಹಳ್ಳಿ,ಯಲ್ಲಿ ಆಯೋಜನೆ ಮಾಡಲಾಗಿತ್ತು.
ಪುರುಷೋತ್ತಮ ಸಾವಯವ ಕೃಷಿ ಪರಿವಾರ ತೀಥ೯ಹಳ್ಳಿಯ ಮುಖ್ಯಸ್ತರಾದ ಅರುಣ ರವರು ಮಾತನಾಡಿ ವಿಷೇಷವಾಗಿ ನಮ್ಮ ಊರಿನಲ್ಲಿರುವ ಹಾಗು ನಮ್ಮ ಮನೆಯಲ್ಲಿರುವ ಅಕ್ಕಿ ಕುರಿತು ಮಾಡತಕ್ಕಂತಹ ಅನ್ನದ ಬಗ್ಗೆ ಕುರಿತು ಬತ್ತವನ್ನು ಬೆಳೆಯುವ ರೈತನ ಕುರಿತು ಮಾಹಿತಯನ್ನು ಕಲೆಹಾಕಬೇಕು.ಈ ಹಿನ್ನಲೆಯಲ್ಲಿ ಗ್ರಾಹಕನಿಗೆ ಕೃಷಿಕನ ಬಗ್ಗೆ ಗೊತ್ತಾಗಬೇಕು. ನಮ್ಮ ಅನ್ನ ಎಂದರೆ ಅದನ್ನು ಬೆಳೆಯುವ ಹಿನ್ನಲೆಯಲ್ಲಿ ರೈತ ಯಾವ ರೀತಿಯ ಪರಿಶ್ರಮವನ್ನು ಹಾಕುತ್ತಾನೆ ಯಾವ ರೀತಿಯ ಕೃಷಿಯನ್ನು ಮಾಡುತ್ತಾನೆ, ಎನ್ನುವುದರ ಕುರಿತು ನಮ್ಮ ಅನ್ನ ಎನ್ನುವ ಕಾಯ೯ಕ್ರಮವನ್ನು ನೆಡಸಲಾಗುತ್ತಿದೆ. ಎಂದು ತಿಳಿಸಿದರು
ಕಾಯ೯ಕ್ರಮದಲ್ಲಿ ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷರಾದ ಸುಬ್ಬರಾವ್ ಎಂ.ಎಸ್. ಮುಖ್ಯ ಅತಿಥಿಗಳಾಗಿ ರಾಜೇಶ ನಾಯ್ಕ. ಯು ಹಾಗು ಸಂಪನ್ಮೂಲ ವ್ಯಕ್ತಿಗಳಾಗಿ ಆನಂದ್ ಅ.ಶ್ರೀ ವಿಶ್ವಸ್ತರು ಕೃಷಿ ಪ್ರಯೋಗ ಪರಿವಾರ, ಶ್ರೀ ಕೆ.ಸಿ ರಘು,ಅಂಕಣಕಾರರು ಆಹಾರ ತಞರು ಬೆಂಗಳೂರು,ಡಾ/ ದುಷ್ಯಂತ್ ಕುಮಾರ್ ತಳಿ ವಿಞಾನಿ, ಕೃಷಿ ಮತ್ತು ತೋಟಗಾರಿಕಾ ಮಹಾ ವಿದ್ಯಾಲಯ, ಶಿವಮೊಗ್ಗ. ಬಾಗವಹಿಸಿದ್ದರು.