ಶೇ.1 ರ ಬೋರ್ಡೋ ದ್ರಾವಣ ತಯಾರಿಸುವ ವಿಧಾನ:
*ಒಂದು ಪಾತ್ರೆಯಲ್ಲಿ ಒಂದು ಕ.ಜಿ. ಮೈಲುತುತ್ತ ನ್ನು 10 ಲಿಟರ್ ಶುದ್ಧ ನೀರಿನಲ್ಲಿ ಕರಗಿಸಬೇಕು.
*ಮತ್ತೊಂದು ಪಾತ್ರೆಯಲ್ಲಿ 1ಕೆ.ಜಿ. ಸುಣ್ಣದ ಹರಳನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು.
*ಮೈಲುತುತ್ತ ಹಾಗೂ ಸುಣ್ಣದ ತಿಳಿ ನೀರಿನ ದ್ರಾವಣಗಳನ್ನು 80 ಲೀಟರ್ ನೀರು ಇರುವ ಪಾತ್ರೆಗೆ ಜೊತೆಯಾಗಿ ಮಿಶ್ರಣ ಮಾಡಬೇಕು.
*ದ್ರಾವಣ ಸಮತೋಲನ ವಾಗಿರುವುದನ್ನು ನೀಲಿ ಲಿಟ್ಮಸ್ ಕಾಗದ ಬಳಕೆ ಮಾಡಿ ಖಾತ್ರಿ ಮಾಡಿಕೊಳ್ಳಬೇಕು.
*ಈ ಮಿಶ್ರಣವು ಆಕಾಶ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣವನ್ನು ನೀಲಿ ಲಿಟ್ಮಸ್ ಪೇಪರ್ ನಿಂದ ಪರೀಕ್ಷಿಸಿ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಈ ದ್ರಾವಣಕ್ಕೆ ಮಿಶ್ರಣ ಮಾಡಬೇಕು.
*ನೀಲಿ ಲಿಟ್ಮಸ್ ಕಾಗದ ಬದಲಾಗಿ ಸ್ವಚ್ಛವಾದ ಸ್ಟೀಲಿನ ಚಾಕು ಅಥವಾ ಬ್ಲೇಡ್ ಅನ್ನು ಬಳಸಿಯೂ ಸಹ ಪರೀಕ್ಷಿಸಬಹುದು.
*ಚಾಕು ಅಥವಾ ಬ್ಲೇಡನ್ನು ದ್ರಾವಣದಲ್ಲಿ ಅದ್ದಿದಾಗ ಕೆಂಪು ಬಣ್ಣದ ಲೇಪನ ಅದರ ಮೇಲೆ ಕಂಡುಬಂದರೆ ಇನ್ನು ಸ್ವಲ್ಪ ಸುಣ್ಣದ ತಿಳಿ ನೀರನ್ನು ಮಿಶ್ರಣ ಮಾಡಬೇಕು, ಮತ್ತೊಮ್ಮೆ ಚಾಕು ಅಥವಾ ಬ್ಲೇಡನ್ನು ಅದ್ದಿದಾಗ ಯಾವುದೇ ಬಣ್ಣ ಕಂಡು ಬರಬಾರದು.
ಈ ರೀತಿ ತಯಾರಿಸಿದ ದ್ರಾವಣವನ್ನು ಅಡಿಕೆ ಸುಳಿ ಹಾಗೂ ಕಾಯಿಗಳ ಗೊಂಚಲಿನ ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ಸಿಂಪರಣೆ ಮಾಡಬೇಕು.
*ಸೂಚನೆ: ಬೋರ್ಡೋ ಮಿಶ್ರಣ ತಯಾರಿಕೆಗೆ ಲೋಹದ ಪಾತ್ರೆಗಳನ್ನು ಕಡ್ಡಾಯವಾಗಿ ಬಳಕೆ ಮಾಡಬಾರದು .
*ಬೋರ್ಡೋ ದ್ರಾವಣವನ್ನು ತಯಾರಿಸಿದ 48 ಗಂಟೆಗಳ ಒಳಗಾಗಿ ಸಿಂಪರಣೆ ಮಾಡಬೇಕು.