ಸಹಸ್ರಾರು ವರುಷಗಳಿಂದ ನಮ್ಮ ಆರ್ಯುವೇದ ಔಷಧಿಯ ಪದ್ದತಿಯಲ್ಲಿ ಬಹು ಬೇಡಿಕೆ ಹೊಂದಿದ ಮರ ಬೇವು. ಬೇವಿನ ಮರದ ನೆರಳು ತಂಪಾದರೆ ಅದರ ಗಾಳಿಯ ಸೇವನೆಯಿಂದ ಹಲವಾರು ರೋಗಗಳು ನಿವಾರಣೆಯಗುತ್ತವೆ. ಬೇವಿನ ಮರದ ತೊಗಟೆ,ಎಲೆ, ಕಾಂಡ, ಬೀಜ ಹೀಗೆ ಪ್ರತೀ ಭಾಗವು ಉಪಯೋಗವಾಗಲಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಬೇವಿನ ಬೀಜದಿಂದ ತಯಾರಿಸಿದ ಕೀಟನಾಶಕಗಳು ಲಭ್ಯವಿದೆ. ಆದರೂ ರೈತರು ಸ್ವತ: ಬೇವಿನ ಬೀಜದ ಕಷಾಯ ತಯಾರಿಸಿ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹಾಗು ಶುದ್ದ ಕಷಾಯವನ್ನು ತಯಾರು ಮಾಡಿ ಕೀಟಗಳ ನಿರ್ವಹಣೆಯನ್ನು ಮಾಡಬಹುದಾಗಿದೆ.
ಬೇವಿನ ಮರದಲ್ಲಿ ಎಲ್ಲವೂ ಉಪಯೋಗಕ್ಕೆ ಬರುತ್ತದೆ.ಇದರಿಂದ ಬರತಕ್ಕಂತಹ ಎಣ್ಣೆ ಇಂಧನವಾಗಿ ಬಳಸುತ್ತೇವೆ. ಹಾಗು ಬೇವಿನ ಬೀಜದಿಂದ ಕಾಯವನ್ನು ತಯಾರು ಮಾಡುತ್ತೇವೆ, ಬೇವಿನನಿಂದ ಬರತಕ್ಕಂತಹ ಅಂಟು ದ್ರಾವಣವನ್ನು ಆರ್ಯುವೇದ ಹಾಗು ಯುನಾನಿ ಪದ್ದತಿಗಳಲ್ಲಿ ಬಳಸಲಾಗುತ್ತದೆ. ಹಿಂದಿನ ಕಾಲದಿಂದಲೂ ಬೇವನ್ನು ಹಲವಾರು ರೀತಿಳಲ್ಲಿ ಬಳಸುತ್ತಿರುವುದರಿಂದ ಇದನ್ನು ಹಳ್ಳಿ ಆಸ್ಪತ್ರೆ ಎಂದು ಸಹ ಕರೆಯಲಾಗುತ್ತದೆ.
ಈಗಾಗಲೇ ಸಿದ್ದಪಡಿಸಿದ ಬೇವಿನ ಕಷಾಯದ ಕೀಟನಾಷಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ರೈತರುಗಳು ತಮ್ಮ ಮನೆಗಳಲ್ಲಿ ಸ್ವತ: ತಾವೇ ಬೇವಿನ ಬೀಜದ ಕಷಾಯವನ್ನು ತಯಾರು ಮಾಡಿ ತಮ್ಮ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಸಿಗುವ ಕೀಟನಾಶಕಕ್ಕಿಂತ ಉತ್ತಮವಾಗಿರುತ್ತದೆ.ಹಾಗು ಉತ್ತವಾದ ಫಲಿತಾಂಸವೂ ಕೂಡ ಸಿಗಲಿದೆ.
ಬೇವಿನ ಮರ ಫೆಭ್ರವರಿ ಮತ್ತು ಮಾರ್ಚ ತಿಂಗಳಲ್ಲಿ ಹೂ ಬಿಟ್ಟು ಜುಲೈ ತಿಂಗಳಲ್ಲಿ ಹಣ್ಣನ್ನು ಕೊಡುತ್ತದೆ. ಒಂದು ಮರದಲ್ಲಿ ಸರಿ ಸುಮಾರು 50 ಕೆ.ಜಿ ಬೇವಿನ ಹಣ್ಣು ಸಿಗುತ್ತದೆ. 350 ಕೆ.ಜಿ ಬೇವಿನ ಎಲೆ ಸಿಗುತ್ತದೆ. ಬೇವಿನ ಮರದ ಬುಡದಲ್ಲಿ ಬಿದ್ದಿರುವಂತಹ ಬೀಜವನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು,
ತಯಾರಿಕಾ ವಿಧಾನ: ಬೀಜದ ಮೇಲಿರುವ ಸಿಪ್ಪಯನ್ನು ತೆಗೆದು ಶೇಕಡಾ 5ರ ಕಷಾಯವನ್ನು ತಯಾರು ಮಾಡಲು 1 ಕೆ.ಜಿ ಬೇವಿನ ಬೀಜವನ್ನು ಉಪಯೋಗಿಸಬೇಕಾಗುತ್ತದೆ. ನಂತರ ಬೇವಿನ ಬೀಜವನ್ನು ಪುಡಿ ಮಾಡಿಕೊಂಡು 5 ಲೀಟರ್ ನೀರಿನಲ್ಲಿ ಬೆರೆಸಿ 1 ರಾತ್ರಿ ನೆನೆಸಿಡಬೇಕು. ಅದರಲ್ಲಿರುವ ರಾಸಾಯಿನಿಕಗಳು ಬಿಡುಗಡೆಗೊಳ್ಳುತ್ತವೆ. ರಾತ್ರಿ ನೆನೆಸಿಟ್ಟ ಕಷಾಯವನ್ನು ಬಟ್ಟೆಯಿಂದ ಸೋಸಿಕೊಂಡು ದ್ರಾವಣಕ್ಕೆ 50 ಗ್ರಾಂ ನಷ್ಟು ಸೋಪಿನ ಪುಡಿಯನ್ನು ಬೆರಸಬೇಕು. ನಂತರ ತಯಾರಿಸಿಟ್ಟ ದ್ರಾವಣಕ್ಕೆ 15 ಲೀಟರ್ ನೀರು ಬೆರೆಸಿ ಕಷಾಯವನ್ನು ಎಲ್ಲಾ ಬೆಳೆಗಳಿಗೂ ಸಂಪಡಣೆ ಮಾಡಬಹುದು.
ಬೇವಿನ ಬೀಜದ ಕಷಾಯವನ್ನು ನಾವೇ ತಯಾರಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹಾಗು ಶುದ್ದ ಬೇವಿನ ಕಷಾಯ ಸಿಗುತ್ತದೆ. ಈ ರೀತಿಯಾಗಿ ರೈತರು ತಾವು ಬೆಳೆಸಿದ ಬೆಳೆಗಳಿಗೆ ಸಾವಯವ ಪದ್ದತಿಯಲ್ಲಿ ಕೀಟಗಳನ್ನು ನಿಯಂತ್ರಣ ಮಾಡುವುದರಲ್ಲಿ ಸಂದೇಹವಿಲ್ಲ