ಶಿವಮೊಗ್ಗ, ಮಾರ್ಚ್ 05 : ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಸುಮಾರು ರೂ. 1500ಕೋಟಿ ಗಳ ಬೃಹತ್ ಯೋಜನೆ ರೂಪಿಸಿ ಅನುμÁ್ಠನಗೊಳಿಸಿತ್ತಿರುವುದು ಐತಿಹಾಸಿಕ ಕಾರ್ಯವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಾನುμÁ್ಟನಗೊಳ್ಳಲಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
       ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ 110 ಗ್ರಾಮಗಳ 249 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸುಮಾರು 850 ಕೋಟಿ ರೂ.ಗಳ ಏತ ನೀರಾವರಿ ಯೋಜನೆಯ ಭಾಗವಾಗಿ ಅಡಗಂಟಿ ಗ್ರಾಮದ ಸಮೀಪ ನಿರ್ಮಿಸಿರುವ ಏರುಕೊಳವೆ ಮಾರ್ಗ ತೊಟ್ಟಿಗೆ ನೀರು ಹರಿಸುವ ಯೋಜನೆಗೆ ಅವರು ಬಾಗಿನ ಅರ್ಪಿಸಿ, ನಂತರ ಅಡಗಂಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
     ಈ ಯೋಜನೆಯ ಕರಾರುವಕ್ಕಾದ ಅನುμÁ್ಠನದಿಂದಾಗಿ ವರ್ಷಪೂರ್ತಿ ಬಿಸಿಲು ಬರದಿಂದ  ಕಂಗೆಟ್ಟಿದ್ದ ಈ ಪ್ರದೇಶದ ಜನರಲ್ಲಿ ಮಂದಹಾಸ ಮೂಡಿದೆ. ರೈತರು ಸ್ವಾಭಿಮಾನದಿಂದ ನೆಮ್ಮದಿಯ ಜೀವನ ನಡೆಸಲು, ಕೃಷಿ ಚಟುವಟಿಕೆ ನಡೆಸಲು, ಹಾಗೂ ಜನ-ಜಾನುವಾರುಗಳಿಗೆ ಶುದ್ದ ನೀರು ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯ ಅನುμÁ್ಠನಕ್ಕೆ ಸಹಕರಿಸಿದ ತಂತ್ರಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿನಂದನಾರ್ಹರು ಎಂದರು.
     ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಉತ್ಪನ್ನಗಳಿಗೆ ನ್ಯಾಯೋಚಿತವಾದ ಬೆಲೆ ದೊರೆಯುವಂತಾಗಬೇಕು. ಆಗ ಸಹಜವಾಗಿ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದಾಗಿದೆ ಎಂದರು.
     ಯೋಜನೆಯ ಆರಂಭದಲ್ಲಿ ಪ್ರಾಯೋಗಿಕವಾಗಿ ಭಾರೀ ಸಾಮಥ್ರ್ಯದ ಮೂರು ಯಂತ್ರಗಳಲ್ಲಿ ನೀರನ್ನು ಹರಿಸಲಾಗುತ್ತಿದೆ. ಈ ಯಂತ್ರಗಳ ಸಂಖ್ಯೆ 5 ಕ್ಕೆ ಹೆಚ್ಚಿಸಿದಲ್ಲಿ ಇನ್ನು ಪ್ರಮಾಣದ ನೀರು ವೇಗವಾಗಿ ಹರಿದು ಬರಲಿದೆ. ಪ್ರಸ್ತುತ ಈ ಯೋಜನೆಯಡಿ 1.5 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.  
     ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಳೇನಹಳ್ಳಿಯ ಶ್ರೀಗಳು ಮಾತನಾಡಿ, ಶಿಕಾರಿಪುರ ತಾಲೂಕಿನ ಸವಾರ್ಂಗೀಣ ವಿಕಾಸಕ್ಕಾಗಿ ಯಡಿಯೂರಪ್ಪನವರು ಹೊಂದಿದ್ದ ಅಮೂಲ್ಯ ಚಿಂತನೆಗಳು, ಕಂಡ ಕನಸುಗಳು ಹಾಗೂ ಅವರ ಸಂಕಲ್ಪ ಸಾಕಾರಗೊಂಡಿದೆ ಎಂದರು.
       ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ರುದ್ರೇಗೌಡರು, ಶ್ರೀಮತಿ ಭಾರತಿಶೆಟ್ಟಿ, ಯು.ಬಿ.ಬಣಕಾರ್, ಕೆ.ಎಸ್.ಗುರುಮೂರ್ತಿ, ಎಸ್.ದತ್ತಾತ್ರಿ ಸೇರಿದಂತೆ ಹಲವು ಮಠಾಧಿಪತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!