ಶಿವಮೊಗ್ಗ, ಮೇ.15 : ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೆಚ್.ಕೆ ಜಂಕ್ಷನ್ ಗ್ರಾಮದಲ್ಲಿ 14 ವರ್ಷದ ಏಳನೇ ತರಗತಿ ಬಾಲಕಿಗೆ ಬಾಲ್ಯವಿವಾಹ ನಡೆಸಿದ್ದು ಬೆಳಕಿಗೆ ಬಂದಿದ್ದು, ಸಾಶಿಇ ಉಪನಿರ್ದೇಶಕರ ಮಾಹಿತಿಯ ಮೇರೆಗೆ ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯನ್ನು ರಕ್ಷಿಸಿ ಬಾಲಮಂದಿರದಲ್ಲಿ ದಾಖಲಿಸಿದ್ದಾರೆ. ಬಾಲಕಿಯು ಗ್ರಾಮದ ಸರೋಜಮ್ಮ ಹಾಗೂ ಮಲ್ಲೇಶಪ್ಪರ ಮಗಳೆಂದು ತಿಳಿದು ಬಂದಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!