ಶಿವಮೊಗ್ಗ, ಫೆಬ್ರವರಿ 26 : ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಫೆಬ್ರವರಿ 29ರಂದು ಬೆಳಿಗ್ಗೆ 11ಗಂಟೆಗೆ ವಿವಿಯ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಐದನೇ ಘಟಿಕೋತ್ಸವ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಸ್ನಾತಕ ಪದವಿಯಲ್ಲಿ 245 ವಿದ್ಯಾರ್ಥಿಗಳಿಗೆ (ಬಿ.ಎಸ್ಸಿ. ಕೃಷಿ, ತೋಟಗಾರಿಕೆ ಮತ್ತು ಅರಣ್ಯ), ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ 86ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ಮತ್ತು 13ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 7ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 13ಚಿನ್ನದ ಪದಕಗಳನ್ನು, 8ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ 8 ಚಿನ್ನದ ಪದಕಗಳನ್ನು ಮತ್ತು 4 ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕಗಳಂತೆ ಒಟ್ಟಾರೆ 26ಚಿನ್ನದ ಪದಕಗಳನ್ನು 19ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ|| ಎಂ.ಕೆ.ನಾಯ್ಕ್ ಅವರು ಹೇಳಿದರು.
ಅವರು ಇಂದು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಐ.ಸಿ.ಎ.ಆರ್. ಜೆಆರ್‍ಎಫ್ ಸ್ಕಾಲರ್‍ಶಿಫ್‍ಗಳಲ್ಲಿ ಅಖಿಲಭಾರತ ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿರುವುದು ಹರ್ಷದ ಸಂಗತಿ ಎಂದ ಅವರು, ಅಖಿಲ ಭಾರತ ಐಸಿಎಆರ್-ರ್ಯಾಂಕಿಂಗ್ ಪಟ್ಟಿಯಲ್ಲಿ ರಾಷ್ಟ್ರಮಟ್ಟದಲ್ಲಿ 51ನೇ ರ್ಯಾಂಕಿನಿಂದ 21ನೇ ರ್ಯಾಂಕಿಗೆ ಮೇಲ್ದರ್ಜೆಗೆ ಏರಿರುವುದು ಹಾಗೂ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿರುವುದು ವಿಜ್ಞಾನಿಗಳಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ನೀಡಿದೆ ಅಲ್ಲದೇ ಏSUಖಈ ರೇಟಿಂಗ್‍ನಲ್ಲಿ 4ಸ್ಟಾರ್ ಪಡೆದಿದೆ ಎಂದವರು ನುಡಿದರು.
ಪ್ರಸಕ್ತ 2019-20ರ ಸಾಲಿನಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಒಟ್ಟು 433 ವಿದ್ಯಾರ್ಥಿಗಳು, ಸ್ನಾತಕೋತ್ತರ ಕಾರ್ಯಕ್ರಮಗಳಿಗೆ 107 ವಿದ್ಯಾರ್ಥಿಗಳು, ಡಿಪೆÇ್ಲಮಾ (ಕೃಷಿ)ಗೆ 74 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಶ್ವವಿದ್ಯಾಲಯವು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರಲ್ಲಿ 16 ಎಂ.ಎಸ್ಸಿ. ಹಾಗೂ 6 ಪಿಹೆಚ್.ಡಿ. ಪದವಿ ಕಾರ್ಯಕ್ರಮಗಳಿದ್ದು, ಈ ವರ್ಷದಲ್ಲಿ ಒಟ್ಟು 90 ಎಂ.ಎಸ್ಸಿ. ವಿದ್ಯಾರ್ಥಿಗಳು ಮತ್ತು 17 ಪಿಹೆಚ್.ಡಿ. ವಿದ್ಯಾರ್ಥಿಗಳು ವಿವಿಧ ಪದವಿ ಕಾರ್ಯಕ್ರಮಗಳಿಗೆ ದಾಖಲಾಗಿರುತ್ತಾರೆ. ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ 2019-20 ನೇ ಶೈಕ್ಷಣಿಕ ಸಾಲಿನಿಂದ ಎಂ.ಎಸ್ಸಿ ಅರಣ್ಯ ಶಾಸ್ತ್ರ (ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ) ಹಾಗೂ ಪಿ.ಹೆಚ್.ಡಿ. ಅರಣ್ಯ ಶಾಸ್ತ್ರ (ಮರಗಳ ವಿಜ್ಞಾನ ಮತ್ತು ಕೃಷಿ ಅರಣ್ಯ) ಎಂಬ ವಿಷಯದಲ್ಲಿ ಹೊಸ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದರು. ವಿವಿಯ ಎಲ್ಲಾ ಗ್ರಂಥಾಲಯಗಳಿಗೂ ವಿದ್ಯುನ್ಮಾನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಎಲ್ಲಾ ಗ್ರಂಥಾಲಯಗಳಿಗೂ ಅಂತರ್‍ಜಾಲದೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಾಗಿದೆ ಅಲ್ಲದೆ ಆರ್‍ಎಫ್‍ಐಡಿ ಮತ್ತು ಕೋಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದವರು ತಿಳಿಸಿದರು.
ಕರ್ನಾಟಕದ ಅಚ್ಚುಕಟ್ಟು ಮತ್ತು ಅರೆಮಲೆನಾಡು ಪ್ರದೇಶಕ್ಕೆ ಮುಂಗಾರು ಮತ್ತು ಬೇಸಿಗೆ ಬೆಳೆಯಾಗಿ ಬೆಳೆಯಲು ‘ಸಹ್ಯಾದ್ರಿ ಮೇಘಾ’ ತಳಿಯನ್ನು ಶಿಫಾರಸ್ಸು ಮಾಡಲಾಗಿದೆ. ಇದು ಹೆಕ್ಟೇರ್ ಒಂದಕ್ಕೆ 70 ಕ್ವಿಂಟಾಲ್ ಇಳುವರಿ ಕೊಡುತ್ತದೆ. ಈ ತಳಿಯು ಬೆಂಕಿ ಹಾಗೂ ಊದುಭತ್ತ ರೋಗಗಳಿಗೆ ಮಧ್ಯಮ ಪ್ರತಿರೋಧವನ್ನು ಹೊಂದಿರುತ್ತದೆ. ಕರಾವಳಿ ವಲಯದ ಬಯಲು ಗದ್ದೆಗಳಲ್ಲಿ ಬಹು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಮುಂಗಾರು ಬೆಳೆಯಾಗಿ ಬೆಳೆಯಲು ಸಹ್ಯಾದ್ರಿ ಪಂಚಮುಖಿ (Iಖಉಂ-318-11-6-9-2ಃ) ಕೆಂಪು ಅಕ್ಕಿಯ ಭತ್ತದ ತಳಿಯನ್ನು ಶಿಫಾರಸ್ಸು ಮಾಡಲಾಗಿದೆ. ಈ ತಳಿಯು ಉತ್ತಮ ಇಳುವರಿ ನೀಡಲಿದೆ ಅಲ್ಲದೆ ನೆರೆ ಹಾವಳಿಯನ್ನು ಹಾಗೂ ಕಣೆ ಕೀಟ ಬಾಧೆಯನ್ನು ತಡೆದು ಬೆಳೆಯುವಂತಹ ಸಾಮಥ್ರ್ಯವನ್ನು ಹೊಂದಿದೆ. ಇದು ಬೆಂಕಿ ಮತ್ತು ಕಂದು ಮಚ್ಚೆ ರೋಗಕ್ಕೆ ಶೀಘ್ರ ಪ್ರತಿರೋಧವನ್ನು ಹೊಂದಿರುತ್ತದೆ.
ಕರ್ನಾಟಕದ ಅರೆಮಲೆನಾಡು ಪ್ರದೇಶದ ತಡ ಮುಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಲು ಸಹ್ಯಾದ್ರಿ ಯುಕ್ತಿ ಆಲಸಂದೆ (ಯು.ಎ.ಹೆಚ್.ಎಸ್-28) ತಳಿಯನ್ನು ಶಿಫಾರಸ್ಸು ಮಾಡಲಾಗಿದೆ. ಸಹ್ಯಾದ್ರಿ ಟೋಬಿಯೋಸ್-6 ಶಾಖದಿಂದ ಹದಮಾಡುವ ವರ್ಜಿನೀಯ ಹೊಗೆಸೊಪ್ಪಿನ ತಳಿ. ಸಹ್ಯಾದ್ರಿ ಸುಹಾಸ್ (ಟೋಬಿಯೋಸ್-6) ತಂಬಾಕು ತಳಿ ಇದನ್ನು ಕರ್ನಾಟಕದ ನೀರು ಬಸಿಯುವ ಗೋಡು ವiತ್ತು ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಬೆಳೆಯಲು ಬಿಡುಗಡೆಗಾಗಿ ಶಿಫಾರಸ್ಸು ಮಾಡಲಾಗಿದೆ. ಈ ತಳಿಯು ಬರ ಸಹಿಷ್ಣುತೆಯನ್ನು ಹೊಂದಿದೆ, ಅಲ್ಲದೇ ಉತ್ತಮ ಗುಣಮಟ್ಟವನ್ನು ಹೊಂದಿದೆ. ಈ ತಳಿಯು ಕಪ್ಪು ಕೊಳೆರೋಗ, ಕಪ್ಪೆಕಣ್ಣಿನ ಚುಕ್ಕಿರೋಗ ಮತ್ತು ಬೇರುಗಂಟು ರೋಗಗಳನ್ನು ತಡೆದು ಬೆಳೆಯುತ್ತದೆ ಎಂದವರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು 2009ನೇ ಇಸವಿಯಲ್ಲಿ ಬಿಡುಗಡೆಗೊಳಿಸಿದ ಭತ್ತದ ತಳಿ ಕೆ.ಹೆಚ್.ಪಿ -10 (Iಇಖಿ – 7991) ಅನ್ನು ನವದೆಹಲಿಯಲ್ಲಿರುವ ಭಾರತ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಕಾಯಿದೆ 2001- 39 (2)ಅಡಿಯಲ್ಲಿ ಸಂರಕ್ಷಣೆಗಾಗಿ ನೋಂದಣಿ ಮಾಡಲಾಗಿದೆ. ಇದು ನಮ್ಮ ವಿಶ್ವವಿದ್ಯಾಲಯದಿಂದ ನವದೆಹಲಿಯಲ್ಲಿರುವ ಭಾರತ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಅಡಿಯಲ್ಲಿ ನೊಂದಣಿಗೊಂಡಿರುವ ಪ್ರಥಮ ತಳಿ ಎನ್ನುವುದು ಹರ್ಷದ ಸಂಗತಿಯಾಗಿದೆ ಎಂದರು.
ದಿನಾಂಕ 12.02.2020ರಂದು ಬೆಂಗಳೂರಿನಲ್ಲಿ ಜರುಗಿದ 38ನೇ ರಾಜ್ಯ ಬೀಜ ಉಪಸಮಿತಿಯ ಸಭೆಯಲ್ಲಿ ನಮ್ಮ ವಿಶ್ವವಿದ್ಯಾಲಯದಿಂದ ಬಿಡುಗಡೆಗೆ ಮಾಡಲು ಶಿಫಾರಸ್ಸು ಮಾಡಲಾಗಿರುವ ‘ಸಹ್ಯಾದ್ರಿ ಮೇಘಾ’ ಮತ್ತು ‘ಸಹ್ಯಾದ್ರಿ ಪಂಚಮುಖಿ’ ಭತ್ತದ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬೆಳೆಗಳ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಯಾಂತ್ರೀಕರಣ, ಮೌಲ್ಯವರ್ಧನೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ 16 ತಂತ್ರಜ್ಞಾನಗಳನ್ನು ಆಧಿಕ ಇಳುವರಿಗೆ ಸುಧಾರಿತ ಬೇಸಾಯ ಪದ್ಧತಿಗಳು (Pಚಿಛಿಞಚಿge oಜಿ Pಡಿಚಿಛಿಣiಛಿes) ಪುಸ್ತಕದಲ್ಲಿ ಸೇರಿಸಲಾಗಿದೆ. ಅಲ್ಲದೆ 14 ತಂತ್ರಜ್ಞಾನಗಳನ್ನು ರೈತರ ಕ್ಷೇತ್ರದಲ್ಲಿ ಪರೀಕ್ಷಿಸಲು ಫಾರ್ಮ್ ಟ್ರಯಲ್‍ಗೆ ಶಿಫಾರಸ್ಸು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮತ್ತು ಇತರ ಸರ್ಕಾರೇತರ ಸಂಸ್ಥೆಗಳಿಂದ ಸುಮಾರು 779.96ಲಕ್ಷಗಳ ಅನುದಾನ ದೂರೆತ್ತಿದ್ದು, 202 ಯೋಜನೆಗಳು ಅನುಷ್ಠಾನದಲ್ಲಿವೆ. ಇವುಗಳಲ್ಲಿ ಕರ್ನಾಟಕ ಸರ್ಕಾರ ಯೋಜನೆ ಮತ್ತು ತಾತ್ಕಾಲಿಕ ಯೋಜನೆಗಳು (ಸಂಶೋಧನೆ ಮತ್ತು ಅಭಿವೃದ್ದಿ ಕಾರ್ಯಕ್ರಮಗಳಾದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ, ಗೋಡಂಬಿ ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ, ಅಡಿಕೆ ಮತ್ತು ಸಾಂಬಾರು ಅಭಿವೃದ್ದಿ ನಿರ್ದೇಶನಾಲಯ) ಹಾಗೂ ಹೊಸ ಕಾರ್ಯಕ್ರಮಗಳು ಪ್ರಗತಿಯ ಹಂತದಲ್ಲಿವೆ. 2019-20 ನೇ ಸಾಲಿನ ಕರ್ನಾಟಕ ಸರ್ಕಾರದ ಯೋಜನೆ ಅನುದಾನ ಹೊಸ ಕಾರ್ಯಕ್ರಮದಡಿಯಲ್ಲಿ 46 ಹೊಸ ಯೋಜನೆಗಳು ( 233.00 ಲಕ್ಷಗಳು) ಮತ್ತು 19 ಮುಂದುವರಿದ ಯೋಜನೆಗಳು ( 93.00 ಲಕ್ಷಗಳು) ಚಾಲ್ತಿಯಲ್ಲಿವೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೂರು ಸಂಶೋಧನಾ ಯೋಜನೆಗಳಿಗೆ ( 155.00 ಲಕ್ಷಗಳು) ಅನುದಾನ ದೊರೆತಿರುತ್ತವೆ. ಪ್ರಸಕ್ತ ಸಾಲಿನಲ್ಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಶೋಧನಾ ಯೋಜನೆಯಡಿ (Sಣಚಿಜಿಜಿ ಖeseಚಿಡಿಛಿh Pಡಿoರಿeಛಿಣ) 66 ಯೋಜನೆಗಳಿದ್ದು, ಯುವ ವಿಜ್ಞಾನಿಗಳಿಗೆ ಸಂಶೋಧನೆಗೆ ಪ್ರೋತ್ಸಾಹಿಸಲು ಮತ್ತು ಅದರಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಸಂಶೋಧನಾ ಫೆಲೋಷಿಪ್‍ಅನ್ನು ಪ್ರತಿ ತಿಂಗಳಿಗೆ ತಲಾ 4,000 ಮತ್ತು 6,000 ರೂ.ಗಳವರೆಗೆ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ನಾಲ್ಕು ಉತ್ಕøಷ್ಟ ಕೇಂದ್ರಗಳ ಸ್ಥಾಪನೆ : ರಾಷ್ಟೀಯ ಕೃಷಿವಿಕಾಸ ಯೋಜನೆ ಮತ್ತು ಕರ್ನಾಟಕ ಸರ್ಕಾರದ ಯೋಜನಾ ಅನುದಾನಗಳಡಿಯಲ್ಲಿ ರೂ. 250.00 ಲಕ್ಷಗಳ ಹಣಕಾಸು ನೆರೆವಿನಿಂದ ಮಣ್ಣು, ನೀರು ಮತ್ತು ಆಹಾರದ ಗುಣಮಟ್ಟ ಮತ್ತು ನಿರ್ವಹಣೆಗಾಗಿ ಪೀಡೆನಾಶಕಗಳ ಶೇಷ ಪರೀಕ್ಷಾ ಪ್ರಯೋಗಾಲಯ, ರಾಷ್ಟೀಯ ಕೃಷಿವಿಕಾಸ ಯೋಜನೆಯಡಿಯಲ್ಲಿ ರೂ.80.00 ಲಕ್ಷಗಳ ವೆಚ್ಚದಲ್ಲಿ ಕೀಟಗಳು, ರೋಗಗಳು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಅಜೀವ ಒತ್ತಡಗಳ ಬಗ್ಗೆ ರೈತರಿಗೆ, ವಿಸ್ತರಣಾ ಕಾರ್ಯಕರ್ತರಿಗೆ, ಅಭಿವೃದ್ಧಿ ಇಲಾಖೆಗಳ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸಸ್ಯರೋಗಗಳು ಮತ್ತು ಪೀಡೆಗಳ ಉನ್ನತ ಚಿಕಿತ್ಸಾ ಶ್ರೇಷ್ಠತಾ ಕೇಂದ್ರ, ರಾಷ್ಟೀಯ ಕೃಷಿವಿಕಾಸ ಯೋಜನೆ ಮತ್ತು ಕರ್ನಾಟಕ ಸರ್ಕಾರದ ಯೋಜನಾ ಅನುದಾನಗಳಡಿಯಲ್ಲಿ ರೂ. 132.00 ಲಕ್ಷಗಳ ಬಜೆಟ್‍ನೊಂದಿಗೆ ಕೃಷಿಯಲ್ಲಿ ಹವಾಮಾನ ಚೇತರಿಕೆ ಕುರಿತ ಸಂಶೋಧನೆಯನ್ನು ಬಲಪಡಿಸುವ ಸಲುವಾಗಿ ಹವಾಮಾನಾಧಾರಿತ ಸ್ಮಾರ್ಟ್ ಕೃಷಿ ವಿಧಾನಗಳ ಪ್ರಾತ್ಯಕ್ಷಿಕೆಗಾಗಿ ಕೃಷಿ ಹವಮಾನ ವೈಪರೀತ್ಯ ಚೇತರಿಕಾ ತಂತ್ರಜ್ಞಾನ ಕೇಂದ್ರ ಮತ್ತು ಹಿರಿಯೂರಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಬಬ್ಬೂರ್ ಫಾರ್ಮ್‍ನ ಕೇಂದ್ರ ಒಣ ವಲಯದಲ್ಲಿ(ವಲಯ-4) ಕೃಷಿ ಯಂತ್ರೋಪಕರಣ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಭಾರತ ಸರ್ಕಾರದಿಂದ ಮಾನ್ಯತೆ ದೊರೆಯುವ ನಿರೀಕ್ಷೆ ಇದೆ. ಇದು ಕೃಷಿ ಯಂತ್ರೋಪಕರಣಗಳ ಬಳಕೆಗೆ ದೊಡ್ಡ ವರದಾನವಾಗಲಿದೆ ಎಂದವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕೃತಕ ಪೀಡೆನಾಶಕಗಳ ಮತ್ತು ಕೃತಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ರೈತರಿಗೆ ಕಡಿಮೆ ವೆಚ್ಚದ ಸ್ಥಳೀಯ ಮೂಲಗಳಿಂದ ದೊರೆಯುವ ಪರಿಕರಗಳು, ಹವಾಮಾನ ವೈಪರೀತ್ಯ ಚೇತರಿಕಾ ಕೃಷಿ, ಕಡಿಮೆ ವೆಚ್ಚದ ಪರಿಕರಗಳು ಇತ್ಯಾದಿಗಳ ಮೂಲಕ ರೈತರನ್ನು ಪ್ರೋತ್ಸಾಹಿಸಲು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ಆರಂಭಿಸಲಾಗಿದೆ. ರೂ. 416.69 ಲಕ್ಷಗಳ ಒಟ್ಟು ಬಜೆಟ್ ವೆಚ್ಚದೊಂದಿಗೆ ಕರ್ನಾಟಕದ ಮೂರು ವಲಯಗಳನ್ನು (ಕೇಂದ್ರ ಒಣವಲಯ, ದಕ್ಷಿಣ ಉಷ್ಣ ವಲಯ ಮತ್ತು ಕರಾವಳಿ ವಲಯ) ಒಳಗೊಂಡ 6000 ಹೆಕ್ಟೇರ್ (9659 ರೈತರು) ಕ್ಷೇತ್ರದಲ್ಲಿ ಈ ಯೋಜನೆಯನ್ನು ವಿಶ್ವವಿದ್ಯಾಲಯವು ನಿರ್ವಹಿಸುತ್ತಿದೆ ಎಂದರು.
ವಿಶ್ವವಿದ್ಯಾಲಯದ ಮೂರು ಸಂಶೋಧನಾ ಕೇಂದ್ರಗಳಾದ ಶಿವಮೊಗ್ಗ, ಹಿರಿಯೂರು ಮತ್ತು ಬ್ರಹ್ಮಾವರದಲ್ಲಿ ಹೈಡ್ರೋಪೋನಿಕ್ ಮೂಲಕ ಹಸಿರು ಮೇವಿನ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಲಾಗಿದೆ. ಮಿನಿ ಕೈಚಾಲಿತ ನೆಲೆಗಡಲೆ ಶೆಲ್ಲರ್ ಸಾಧನವನ್ನು ಅಭಿವೃದ್ಧಿಪಡಿಸಿದ್ದಕ್ಕೆ ವಿಶ್ವವಿದ್ಯಾಲಯಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಸಂಖ್ಯೆ ಲಭಿಸಿರುತ್ತದೆ. ಮೂಡಿಗೆರೆ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರಿಗೆ, ಕಾಫಿಸ್ಪ್ರೆಡ್ಡರ್ ಮತ್ತು ಕಾಫಿ ರೇಕರ್‍ಗಳನ್ನು ಅಭಿವೃದ್ಧಿಪಡಿಸಿ, ಜನಪ್ರಿಯಗೊಳಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮಡಿಕೇರಿಯಲ್ಲಿ ಬೀಜಘಟಕ ಹಾಗೂ ಪಾಲಿಹೌಸ್ÀಗಳÀನ್ನು ಸ್ಥಾಪಿಸಿ, ವಿದೇಶಿ ತರಕಾರಿ ಮತ್ತು ಹೂವಿನ ಬೆಳೆಗಳ ಸಂರಕ್ಷಿತ ಬೇಸಾಯದ ಬಗ್ಗೆ ಸಂಶೋಧನೆ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ಬೀಜ ಘಟಕವು, ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಕಾರ್ಯಕ್ರಮಗಳ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 10272.03 ಕ್ವಿಂಟಾಲ್‍ಗಳಷ್ಟು ಬೀಜೋತ್ಪಾದನೆ ಮಾಡಲಾಗಿದೆ. ಅವುಗಳಲ್ಲಿ ಧಾನ್ಯಗಳು (10,016.57), ದ್ವಿದಳ ಧಾನ್ಯಗಳು (86.96), ತೈಲ ಬೀಜಗಳ (168.50) ಉತ್ಪಾದನೆ ಒಳಗೊಂಡಿರುತ್ತದೆ ಹಾಗೂ 2019-20 ನೇ ಸಾಲಿನಲ್ಲಿ 16,325 ಕ್ವಿಂಟಾಲ್‍ಗಳಷ್ಟು ಬೀಜೋತ್ಪಾದನೆ ಮಾಡಲು ಗುರಿ ಹೊಂದಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 19 ಲಕ್ಷದ ಗುಣಮಟ್ಟದ ತೋಟಗಾರಿಕಾ ಬೆಳೆಗಳ ಸಸಿಗಳನ್ನು ಉತ್ಪಾದನೆ ಮಾಡಿದ್ದು, ಮುಂದಿನ ವರ್ಷದಲ್ಲಿ ಸುಮಾರು 16,61,500 ಮಾಡುವ ಗುರಿಯನ್ನು ಹೊಂದಲಾಗಿದೆ. ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಿಂದ 12 ಉತ್ಪನ್ನಗಳಿಂದ ಸುಮಾರು 14,564 ಕ್ವಿಂಟಾಲ್ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಏಜೆಂಟ್‍ಗಳನ್ನು ಉತ್ಪಾದಿಸಿ ರೈತರಿಗೆ ನೀಡಲಾಗಿದೆ. 1,270 ಕೆ.ಜಿ ಗಳಷ್ಟು ಜೇನು ತುಪ್ಪವನ್ನು ಉತ್ಪಾದಿಸಿ ಮಾರಾಟ ಮಾಡಲಾಗಿದೆ. ವಿಶ್ವವಿದ್ಯಾಲಯದ ಈ ಎಲ್ಲಾ ಉತ್ಪನ್ನಗಳನ್ನು ಸಹ್ಯಾದ್ರಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾಲಯದಡಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಸಂಸ್ಥೆಗಳ 20 ಹೊಸ ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಿ ಸುಮಾರು ರೂ. 38.00 ಲಕ್ಷ ರೂಗಳ ಆದಾಯ ಬಂದಿರುತ್ತದೆ. ಉಲ್ಲಾಳದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಗೇರು ನರ್ಸರಿಯು, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್, ಕೇರಳದಿಂದ ಂಛಿಛಿಡಿeಜiಣಚಿಣioಟಿ ಪಡೆದಿದ್ದು, 3 sಣಚಿಡಿ ಓuಡಿseಡಿಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದುವರೆದು, ಮೂಡಿಗೆರೆ ಮತ್ತು ಬಾವಿಕೆರೆ ಸಂಶೋಧನಾ ಕೇಂದ್ರದ ನರ್ಸರಿಗಳು 4 sಣಚಿಡಿ ಓuಡಿseಡಿಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದರು.
ಪಶ್ಚಿಮ ಘಟ್ಟಗಳ ಸ್ಥಳೀಯ ಮರ ಪ್ರಭೇದಗಳ ಕಾರ್ಯಕ್ಷಮತೆ ಮತ್ತು ಪುನರ್‍ನೆಡುವುದರ ಮೂಲಕ ಮರಗಳು ಬೆಳೆಯುವುದನ್ನು ನಿರ್ಣಯಿಸಲು ವಿಶ್ವವಿದ್ಯಾಲಯದ ಇರುವಕ್ಕಿಯ ಮುಖ್ಯ ಸಂಶೋಧನಾ ಕೇಂದ್ರದಲ್ಲಿ ಮರಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳಲಾಗಿದೆ. ತಜ್ಞರ ಸಹಾಯದಿಂದ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಿರಂತರ ಬೆಂಬಲದೊಂದಿಗೆ ವಿವಿಧ ಜಾತಿಯ 23 ಮರಗಳನ್ನು ಸ್ಥಳಾಂತರಿಸುವ ಪ್ರಯತ್ನ ಮಾಡಲಾಗಿದ್ದು, ರೈತರ ಮತ್ತು ಸರ್ಕಾರದ ಪ್ರಶಂಸೆಗೆ ಕಾರಣವಾಗಿದೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರಾಜ್ಯವು ಭೀಕರ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವು ಸಾಕಷ್ಟು ಬೆಳೆ ಹಾನಿ ಮತ್ತು ನಷ್ಟವನ್ನು ಅನುಭವಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಮ್ಮ ವಿಶ್ವವಿದ್ಯಾಲಯದಿಂದ ಕೃಷಿ ಮೇಳವನ್ನು ಆಯೋಜಿಸುವ ಬದಲು ಒಂದು ದಿನದ “ನೆರೆ ಮತ್ತು ಬರ ನಿರ್ವಹಣೆಯ” ವಿಚಾರ ಸಂಕಿರಣವನ್ನು ಏರ್ಪಡಿಸಿ ರೈತರಿಗೆ ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ತಂತ್ರಜ್ಞಾನಗಳ ತಿಳುವಳಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಉಪನ್ಯಾಸವನ್ನು ದಿನಾಂಕ 06 ನವೆಂಬರ್ 2019 ರಂದು ಹಮ್ಮ್ಮಿಕೊಳ್ಳಲಾಗಿತ್ತು. ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವ ಸಲುವಾಗಿ ಹಾಗೂ ರೈತರಿಗೆ ನೀರಿನ ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು “ಪ್ರತಿ ಹನಿಯಿಂದ ಅಧಿಕ ಬೆಳೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಹಿರಿಯೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 2,000 ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ವಿಜ್ಞಾನಿಗಳು ಭದ್ರಾವತಿ ಮತ್ತು ಚಿತ್ರದುರ್ಗ ಆಕಾಶವಾಣಿಯ ಮೂಲಕ ಪ್ರತಿನಿತ್ಯ “ನೇಗಿಲ ಮಿಡಿತ” ಮತ್ತು “ಕೃಷಿ ಸಂಪದ” ಎಂಬ ವಿಶೇಷ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ರೈತರಿಗೆ ವಿವಿಧ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ ಎಂದರು.
ಪ್ರಸ್ತುತ ವರ್ಷ 8134 ರೈತರಿಗೆ 8,277 ಮಣ್ಣಿನ ಮಾದರಿಗಳನ್ನು ತೆಗೆದು ಪರೀಕ್ಷೆ ಮಾಡಿಕೊಡಲಾಗಿದೆ. 1499 ರೈತರಿಗೆ 2129 ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿಕೊಡಲಾಗಿದೆ. ಒಟ್ಟಾರೆ 9633 ರೈತರು ಇದರ ಫಲಾನುಭವಿಗಳಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು ತಾಲ್ಲೂಕು ಮಟ್ಟದಲ್ಲಿ ರೈತರ ಹೊಲಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ಅನೇಕ ರೈತರಿಗೆ ತೋರಿಸಲಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರಗಳಿಂದ ವಿವಿಧ ತಾಂತ್ರಿಕತೆಯ 32 ಮಾಹಿತಿಗಳನ್ನು 11,420 ರೈತರಿಗೆ ಕಿರು ಸಂದೇಶಗಳ ಮೂಲಕ ಒದಗಿಸಲಾಗಿದೆ ಹಾಗೂ ರಿಲಯನ್ಸ್ ಕಂಪನಿಯ ಸಹಭಾಗಿತ್ವದಲ್ಲಿ ಒಟ್ಟಾರೆ 31,545 ರೈತರಿಗೆ ದ್ವನಿ ಮಾಹಿತಿಗಳನ್ನು ಒದಗಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳಿಗೆ ಮಣ್ಣು ಮತ್ತು ನೀರಿನ ಪರೀಕ್ಷೆಗಾಗಿ ಬರುವ, ತರಬೇತಿಗಳಲ್ಲಿ ಭಾಗವಹಿಸುವ ಹಾಗೂ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲಾ ರೈತರ ದೂರವಾಣಿ ಸಂಖ್ಯೆಗಳನ್ನು ದಾಖಲಿಸಿದ್ದು, ಒಟ್ಟು 5000 ರೈತರಿಗೆ ‘ಎಂ-ಕಿಸಾನ್ ಪೋರ್ಟಲ್’ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಕಿರು ಸಂದೇಶಗಳ ಮೂಲಕ ನೀಡಲಾಗುತ್ತಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನೂತನವಾಗಿ “ರೈತ ನಾಡಿ” ಕನ್ನಡ ಆಂಡ್ರಾಯ್ಡ್ ಆಪ್‍ಅನ್ನು ಬಿಡುಗಡೆ ಮಾಡಿರುತ್ತದೆ. ಇದು ರೈತರಿಗೆ, ವಿದ್ಯಾರ್ಥಿಗಳಿಗೆ, ಕೃಷಿ ಉದ್ದಿಮೆದಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಕೃಷಿ (ಮೆಕ್ಕೆಜೋಳ ಮತ್ತು ಭತ್ತ), ತೋಟಗಾರಿಕೆ (ಅಡಿಕೆ ಮತ್ತು ಗೋಡಂಬಿ), ಅರಣ್ಯ (ಶ್ರೀಗಂಧ ಮತ್ತು ಬ್ರಹ್ಮ ಬಿದಿರು), ಮೀನುಗಾರಿಕೆ ಮತ್ತು ಪಶುಸಂಗೋಪನೆ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಆಪ್‍ನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು, ಅರಣ್ಯ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಚಟುವಟಿಕೆಗಳ ವಿವರವನ್ನು ಮೆನುವಿನಲ್ಲಿ ಕ್ಲಿಕ್ ಮಾಡುವ ಮೂಲಕ ಸಮಗ್ರವಾದ, ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ. ರೈತರು ತಮ್ಮ ಬೆಳೆಗಳ ಮತ್ತು ಪಶುಸಂಗೋಪನೆ ಬಗ್ಗೆ ಪ್ರಶ್ನೆಗಳಿದ್ದರೆ ವಿಶ್ವವಿದ್ಯಾಲಯದ ತಜ್ಞರೊಂದಿಗೆ ಸಂಭಾಷಣೆ ಮಾಡುವ ಹಾಗೂ ಚಾಟಿಂಗ್ ಮಾಡುವ ಸೌಲಭ್ಯವನ್ನು ಸಹ ಆಪ್‍ನಲ್ಲಿ ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ಆಪ್‍ನಲ್ಲಿ ಹೆಚ್ಚಿನ ಬೆಳೆಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಉಪಕರಣಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ, ಹೊಸನಗರ ಹಾಗೂ ಸಾಗರ ತಾಲ್ಲೂಕುಗಳನ್ನು ಕೇಂದ್ರೀಕೃತವಾಗಿರಿಸಿ, ಸರ್ಕಾರಿ ಜಮೀನು ಲಭ್ಯವಿದ್ದ ಸಾಗರ ತಾಲ್ಲೂಕು ಆನಂದಪುರ ಹೋಬಳಿ ಇರುವಕ್ಕಿ ಗ್ರಾಮದಲ್ಲಿ ಸುಮಾರು 787.03 ಎಕರೆ ಜಮೀನನ್ನು ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರವು ಮಂಜೂರು ಮಾಡಿ ಆದೇಶ ಹೊರಡಿಸಿ ಕಾರ್ಯೋನ್ಮುಖವಾಗಲು ಕ್ರಮ ವಹಿಸಲಾಗಿರುತ್ತದೆ ಎಂದರು.
ವಿದ್ಯಾರ್ಥಿಗಳ ಶಿಕ್ಷಣ ಹಾಗೂ ರೈತರ ಏಳಿಗೆಗೆ ಕೂಡಲೇ ಸ್ಪಂದಿಸಬೇಕೆಂಬ ಹಿತದೃಷ್ಠಿಯ ಒತ್ತಾಸೆಯಿಂದ ಮೇಲ್ಕಂಡ ಸಮಗ್ರ ವಿಶ್ವ ವಿದ್ಯಾಲಯವನ್ನು ಪ್ರಾರಂಭಿಸಲು ಪೂರಕವಾಗಿ ಮೊದಲನೇ ಹಂತದಲ್ಲಿ ರೂ. 155.3377 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಸದರಿ ಅನುದಾನದಲ್ಲಿ ಆದ್ಯತೆ ಮೇರೆಗೆ ಒಂದು ಆಡಳಿತ ಮತ್ತು ನಾಲ್ಕು ವಿಭಾಗೀಯ ಕಟ್ಟಡಗಳು, ಒಂದು ಗ್ರಂಥಾಲಯ ಹಾಗೂ ಎರಡು ವಿದ್ಯಾರ್ಥಿಗಳ ವಸತಿ ನಿಲಯಗಳ ಕಟ್ಟಡಗಳನ್ನು ಬಹುತೇಕ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುತ್ತದೆ. ಪ್ರಸ್ತುತ, ಮುಂದಿನ ಶೈಕ್ಷಣಿಕ ವರ್ಷದಿಂದ ಇರುವಕ್ಕಿ ನೂತನ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಬೇಕಾಗಿದ್ದು, ಸದರಿ ಸ್ಥಳವು ಶಿವಮೊಗ್ಗ ನಗರದಿಂದ 45 ಕಿ.ಮೀ. ದೂರವಿರುವುದರಿಂದ ಮೊದಲನೇ ಹಂತದ ಅನುದಾನದಲ್ಲಿ ನಿರ್ಮಾಣ ಮಾಡಲಾಗದೆ ಇರುವ ಅತ್ಯಗತ್ಯವಿರುವ ಕಟ್ಟಡಗಳಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಸತಿ ಗೃಹಗಳು, ಆಡಿಟೋರಿಯಮ್, ಕ್ರೀಡಾಂಗಣ, ಆಸ್ಪತ್ರೆ, ಯು.ಜಿ ತರಗತಿಗಳು, ಹೆಚ್ಚುವರಿ ಪ್ರಾಯೋಗಾಲಯಗಳು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿ ನಿಲಯಗಳು, ಮಾನವ ಸಂಪನ್ಮೂಲ ವಿಭಾಗ ಕಟ್ಟಡ, ಅತಿಥಿ ಗೃಹ, ಉಪಹಾರ ಗೃಹ ಇತ್ಯಾದಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಎರಡನೇ ಹಂತದ ಅನುದಾನವನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯಂತೆ ರಾಜ್ಯ ಮಟ್ಟದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಜ್ಞಾನಗಳನ್ನೊಳಗೊಂಡ ಈ ವಿಶ್ವ ವಿದ್ಯಾಲಯವನ್ನು ಒಂದು ವಿಶಿಷ್ಟ ಮತ್ತು ಏಕೈಕ ಸಮಗ್ರ ವಿಶ್ವ ವಿದ್ಯಾಲಯವನ್ನಾಗಿ ಮಲೆನಾಡಿನ ವಿಶಿಷ್ಟ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಿ ಕಾರ್ಯೋನ್ಮುಖ ಮಾಡಲು ಕರ್ನಾಟಕ ಸರ್ಕಾರಕ್ಕೆ ಅಗತ್ಯವಾಗಿರುವ ಅನುದಾನ ರೂ.245.00 ಕೋಟಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲ ವಜುಭಾಯಿ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಸಹಕುಲಾಧಿಪತಿ ಹಾಗೂ ಕೃಷಿ ಸಚಿವ ಬಸವನಗೌಡ ಚನ್ನಬಸವನಗೌಡ ಪಾಟೀಲ್ ಅವರು ಉಪಸ್ಥಿತರಿರುವರು. ಭಾರತ ಸರ್ಕಾರದ 15ನೇ ಹಣಕಾಸು ಆಯೋಗ ಹಾಗೂ ರಾಷ್ಟ್ರೀಯ ನೀತಿ ಆಯೋಗಗಳ ಸದಸ್ಯ ಡಾ|| ರಮೇಶ್‍ಚಂದ್ ಅವರು ಘಟಿಕೋತ್ಸವ ಭಾಷಣ ಮಾಡುವರು. ಕುಲಪತಿ ಡಾ|| ಎಂ.ಕೆ.ನಾಯ್ಕ್, ಕುಲಸಚಿವರ ಡಾ|| ಎಂ.ದಿನೇಶ್‍ಕುಮಾರ್ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರು ಉಪಸ್ಥಿತರಿರುವರು.