ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 16 ಕಿ.ಮೀ ದೂರದಲ್ಲಿರುವ ಸಿರಿಮನೆ ಜಲಪಾತ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಈ ಜಲಪಾತ ಶೃಂಗೇರಿಯ ಶಾರದಾಂಬೆಯ ದೇವಸ್ತಾನದ ಹತ್ತಿರದಲ್ಲಿರುವುದರಿಂದ ದೇವಸ್ತಾನಕ್ಕೆ ಆಗಮಿಸುವ ರಾಜ್ಯದ ಹಾಗು ಹೊರ ರಾಜ್ಯದ ಪ್ರವಾಸಿಗರು ಸಿರಿಮನೆ ಜಲಪಾತವನ್ನು ನೋಡದೇ ಹೋಗುವುದಿಲ್ಲ.ಬಂದಂತಹ ಪ್ರವಾಸಿಗರು ಸಿರಿಮನೆಯ ಜಲಪಾತಕ್ಕೆ ಭೇಟಿ ನೀಡಿ ಜಲಪಾತದ ಸೊಬಗನ್ನು ನೋಡಿ ಆನಂದಿಸುತ್ತಾರೆ.
ಸಿರಿಮನೆ ಜಲಪಾತ ಸುಮಾರು 70 ರಿಂದ 80 ಅಡಿ ಮೇಲಿನಿಂದ ಹಾಲಿನ ನೊರೆಯಂತೆ ದುಮ್ಮಿಕ್ಕುವ ಜಲಪಾತ, ರಮಣೀಯವಾದದು. ಸಿರಿ ಮನೆಯ ಜಲಪಾತ ಚಿಕ್ಕದಾದರೂ ಜಲಪಾತದ ಸೊಬಗಿಗೆ ಮೈಮರೆಯುವುದಂತೂ ನಿಜ.ಇಲ್ಲಿ ಮಕ್ಕಳಿಂದ ಹಿಡಿದು ಯುವಕ ಯುವತಿಯರೂ ಹಾಗು ವಯೋ ವೃದ್ದರೂ ಕೂಡ ಜಲಪಾತದ ಸೊಬಗಿಗೆ ಮನ ಸೋತವರೇ.
ಇಷ್ಟೆಲ್ಲಾ ಪ್ರವಾಸಿಗರೂ ಬಂದು ಹೋಗುತ್ತಿದ್ದರೂ ಕೂಡ ಕಿಗ್ಗಾದಿಂದ ಸಿಂದೋಡಿವರೆಗೆ ಸುಮಾರು 6 ಕೀಮೀ ರಸ್ತೆ ಹಾಳಾಗಿದ್ದುರಸ್ತೆ ಸಂಚಾರ ದುಸ್ತರವಾಗಿದೆ. ಸಿಂದೋಡಿ ಗ್ರಾಮ ಅರಣ್ಯ ಸಮಿತಿ ಸಿರಿಮನೆ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಜಲಪಾತ ಪ್ರವೇಶ ಶುಲ್ಕವನ್ನು ವಯಸ್ಕರಿಗೆ 20ರೂ ಮಕ್ಕಳಿಗೆ 10 ರೂಗಳನ್ನು ವಿದಿಸುತ್ತದೆ. ಆದರೆ ಮೂಲ ಸೌಕರ್ಯ ಮತ್ತು ರಸ್ತೆ ಸಂಚಾರ ಸೌಲಭ್ಯ ಮಾತ್ರ ಸರಿಯಿಲ್ಲ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಆದರೂ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳು ಸಂಚರಿಸಲು ಪರದಾಡಬೇಕಾಗಿದೆ. ಅರಣ್ಯ ಇಲಾಖೆ ಹಾಗು ಗ್ರಾಮ ಅರಣ್ಯ ಸಮಿತಿ ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಿ ಸಂಚಾರಕ್ಕೆ ಗಮನ ಹರಿಸಬೇಕು ಎನ್ನುವುದು ಪ್ರವಾಸಿಗರ ಆಗ್ರಹ.
ವರದಿ. ಲೋಕೇಶ್ .ಜೆ

error: Content is protected !!