ಶಿವಮೊಗ್ಗ, ಜೂನ್‌ 26, :ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನು ಫಾರಂ, ಹ್ಯಾಚರಿ ಹಾಗೂ ಫೀಡ್‌ ಮಿಲ್‌ “ಸೆರ್ಟಿಫಿಕೇಷನ್‌, ಅಕ್ರಿಡಿಟೇಷನ್‌ ಅಂಡ್‌ ಟ್ರೇಸಬಿಲಿಟಿ ಅಂಡ್‌
ಲ್ಯಾಬೆಲಿಂಗ್‌” ಎನ್ನುವ ಪಲಾನುಭವಿ ಆಧಾರಿತ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರದಿಂದ
ರೂಪಿಸಲಾಗಿದೆ.
ಈ ಯೋಜನೆಯಡಿ ರಾಜ್ಯದಲ್ಲಿರುವ ಮೀನು ಫಾರಂ, ಹ್ಯಾಚರಿ ಹಾಗೂ ಫೀಡ್‌ ಮಿಲ್‌ಗಳ
ಕಾರ್ಯಚಟುವಟಿಕೆಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆಯುವುದು
ಅತ್ಯವಶ್ಯಕ. ಜಿಲ್ಲೆಯಲ್ಲಿ ಈಗಾಗಲೇ ಸಕ್ರಿಯವಾಗಿ ಮೀನುಫಾರಂ, ಹ್ಯಾಚರಿ ಹಾಗೂ ಫೀಡ್‌
ಮಿಲ್‌ಗಳನ್ನು ಪ್ರಾರಂಭಿಸಿ ಕಾರ್ಯಾರಂಭಿಸಿರುವ ಮೀನುಗಾರರು/ರೈತರು ಸಂಬಂಧಪಟ್ಟ
ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಿ, ಷರತ್ತು ಮತ್ತು ನಿಬಂಧನೆಗಳಿಗನುಸಾರ
ಸರ್ಕಾರದಿಂದ ನಿಗದಿಪಡಿಸಿದ ಸಂಸ್ಥೆಗಳಿಂದ “ಸೆರ್ಟಿಫಿಕೇಷನ್‌, ಅಕ್ರಿಡಿಟೇಷನ್‌ ಅಂಡ್‌ ಟ್ರೇಸಬಿಲಿಟಿ
ಅಂಡ್‌ ಲ್ಯಾಬೆಲಿಂಗ್‌” ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವಂತೆ ಮೀನುಗಾರಿಕೆ ಉಪನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!