ಯೋಗಿ ಮತ್ತು ಭೋಗಿಗಳನ್ನು ಮೆರೆವ ದಿನವೇ ಅಂತರಾಷ್ಟ್ರೀಯ ಯೋಗ ದಿನ
ಡಾ. ನಾಗರಾಜಾ. ಆರ್‌,
ಮುಖ್ಯ ಆಡಳಿತಾಧಿಕಾರಿಗಳು, ಪಿಇಎಸ್‌ ಸಂಸ್ಥೆ
ʼಮಾಡಿದರೇ ಯೋಗ, ಓಡುವುದು ರೋಗʼ ಎನ್ನುವಂತೆ ಪ್ರತಿನಿತ್ಯ ನಮ್ಮ ದೇಹ ಸ್ವಾಸ್ಥ್ಯ ಹಾಗೂ ಶುಚಿಯಾಗಿಡಲು ಯೋಗ ಅತಿಮುಖ್ಯ ಎಂದು ಅರ್ಥ ಪೂರ್ಣವಾಗಿ ತಿಳಿಸಿದರು. ಯೋಗ ಕಲಿಕೆಯು ಮಕ್ಕಳಲ್ಲಿ ವೈಚಾರಿಕ, ಭಾವನಾತ್ಮಕ ರಚನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ಸಾಧನ ಎಂದು ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದಂತಹ ಕಿವಿ ಮತ್ತು ಗಂಟಲು ತಜ್ಞರಾದ ಡಾ|| ಲೋಹಿತ್‌ ರವರು ತಿಳಿಸಿದರು

ಯೋಗವು ದೇಹವನ್ನು ಸ್ವಾಸ್ಥ್ಯವಾಗಿಸದರೆ ಸಂಗೀತವು ಮನಸ್ಸನ್ನು ಸಂತೋಷಗೊಳಿಸಲು ಮತ್ತು ಮನಸ್ಸನ್ನು ಏಕಿಕೃತಗೊಳಿಸಲು ಸಹಾಯಕವಾಗಿದೆ ಇವು ಒಂದೇ ನ್ಯಾಣದ ಎರಡು ಮುಖಗಳಿದ್ದಂತೆ. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯನ್ನು ಗಮನದಲ್ಲಿ ಇಟ್ಟುಕೊಂಡು ದೇಹಕ್ಕೆ ಸ್ವಾಸ್ಥ್ಯವೂ, ಮನಸ್ಸಿಗೆ ಏಕಾಗ್ರತೆ ಮುಖ್ಯವೆಂದು ಅರಿತು ಉತ್ತಮ ತರಬೇತಿಯೊಂದಿಗೆ ಮಕ್ಕಳಿಗೆ ಯೋಗ ಶಿಕ್ಷಣ ಹಾಗೂ ಸಂಗೀತ ಶಿಕ್ಷಣವನ್ನು ನೀಡುತಿರುವುದು ಪಿಇಎಸ್‌ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ.

ಶಾಲಾ ದೈಹಿಕ ಶಿಕ್ಷಕರುಗಳಾದ ಶ್ರೀಯುತ ನಾಗಾರಜ್‌, ಕಿರಣ್‌ ಕುಮಾರ್‌ ಮತ್ತು ಶ್ರೀಮತಿ ಶುಭಾರವರ ನೇತೃತ್ವದಲ್ಲಿ ಉತ್ತಮ ಮಾಗದರ್ಶನದೊಂದಿಗೆ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಯೋಗವನ್ನು ಪ್ರದರ್ಶಿಸಿದರು. ಯೋಗನೃತ್ಯವನ್ನು ಎಲ್ಲರ ಕಣ್ಮನ ಸೆಳೆಯುವಂತೆ ಚಿನ್ಮಯಿ ಹಾಗೂ ತಂಡದವರು ನಡೆಸಿಕೊಟ್ಟರು. ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಪಿಇಎಸ್‌ ಸಮೂಹ ಸಂಸ್ಥೆಗಳ ಶಾಲಾ ಸಂಯೋಜಕರು , ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು, ಕಾರ್ಯಕ್ರಮ ಕುರಿತು ಸ್ವಾಗತ ಕುಮಾರಿ ಪ್ರಾರ್ಥನ, ವಂದನಾರ್ಪಣೆ ಕುಮಾರಿ ಮಾನ್ಸಿ ಎನ್‌ ಗೌಡ್‌ ಹಾಗೂ ಕಾರ್ಯಕ್ರಮದ ನಿರೂಪಣೆ ಮಾನ್ಯ ಹಾಗೂ ಸಿರಿಷಾ ನೆರೆವೇರಿಸಿಕೊಟ್ಟರು.

error: Content is protected !!