News Next

ಶಿವಮೊಗ್ಗ, ಸೆಪ್ಟೆಂಬರ್ 15:
ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ 2021-22 ನೇ ಸಾಲಿನ ಡಿಪ್ಲೊಮಾ ಕೋರ್ಸ್‍ಗಳಿಗೆ(ಅನುದಾನಿತ) ಆಫ್‍ಲೈನ್‍ನಲ್ಲಿ ಪ್ರವೇಶ ನೀಡಲು ಸೆಪ್ಟೆಂಬರ್ 20 ರವರೆಗೆ ಅವಕಾಶ ನೀಡಲಾಗಿದೆ.
ಮೊದಲನೇ ವರ್ಷದ ಡಿಪ್ಲೊಮಾ ಕೋಸ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, 2ನೇ ವರ್ಷದ ಡಿಪ್ಲೊಮಾ ಲ್ಯಾಟರಲ್ ಎಂಟ್ರಿ ಕೋರ್ಸ್‍ಗಳಾದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳು ಸೆ.20 ರವರೆಗೆ ಆಫ್‍ಲೈನ್ ಪ್ರವೇಶಾತಿ ಪಡೆಯಬಹುದು ಎಂದು ಡಿವಿಎಸ್ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: Content is protected !!