News Next

ಶಿವಮೊಗ್ಗ, ಮಾರ್ಚ್ 26 : ರಾಜ್ಯದಲ್ಲಿ ಕೋವಿದ್-19 ನಿಂದಾಗಿ ಲಾಕ್‍ಡೌನ್ ಆದ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯದ ಸಂಪಾದನೆ ಇಲ್ಲದೇ ತೊಂದರೆಗೊಳಗಾಗಿರುವ ಕಾರ್ಮಿಕ ವರ್ಗ ಹಾಗೂ ಅವರ ಕುಟುಂಬಗಳ ಮತ್ತು ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಪಾಲಿಕೆಯಲ್ಲಿ ಆಹಾರ ಸಾಮಗ್ರಿಗಳ ಸ್ವೀಕೃತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದಾನಿಗಳು/ಸಾರ್ವಜನಿಕರು/ಸಂಘ-ಸಂಸ್ಥೆಗಳು ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ, ಟಿ/ಕಾಫಿ ಪೌಡರ್, ಸಕ್ಕರೆ, ಗೋದಿ, ಜೋಳ, ಬೆಲ್ಲ, ರಾಗಿ, ಅಡುಗೆ ಎಣ್ಣೆ ಇತ್ಯಾದಿ (ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಹೊರತುಪಡಿಸಿ) ಗಳನ್ನು ದಾನ ರೂಪದಲ್ಲಿ ನೀಡಿ ಸ್ವೀಕೃತಿಯನ್ನು ಪಡೆಯುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು- 8073659642, ಸ್ಟೋರ್ ವಿಭಾಗ-9448525350 ಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿರುತ್ತಾರೆ.

error: Content is protected !!