ಗ್ರಾಮೀಣ ಪ್ರದೇಶದ ರೈತರು/ರೈತ ಮಹಿಳೆಯರು/ನಿರುದ್ಯೋಗ ಯುವಕ ಯುವತಿಯರಿಗೆ, ದಿನಾಂಕ: 17.07.2019 ಮತ್ತು 18.07.2019 ರಂದು “ವೈಜ್ಞಾನಿಕ ಹೈನುಗಾರಿಕೆ” ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜಿತ 2 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ವಿವಿಧ ತಳಿಗಳು, ವಸತಿ, ಆಹಾರ, ಹಾಲು ಉತ್ಪಾದನೆ, ಪಾಲನೆ, ರೋಗಗಳಿಂದ ರಕ್ಷಣೆ, ನಿರ್ವಹಣೆ ಮುಂತಾದ ವಿಷಯಗಳನ್ನೊಳಗೊಂಡು ಸಮಗ್ರ ಮಾಹಿತಿ ಮತ್ತು ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತಿಯುಳ್ಳವರು ತಮ್ಮ ಹೆಸರನ್ನು ದಿನಾಂಕ: 15.07.2019 ರೊಳಗೆ ನೋಂದಾಯಿಸಿಕೊಳ್ಳತಕ್ಕದ್ದು. ತರಬೇತಿಯನ್ನು 30 ಶಿಬಿರಾರ್ಥಿಗಳಿಗೆ ಸೀಮಿತ ಗೊಳಿಸಿದ್ದು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಹಾಗೂ ಮೊದಲು ಹೆಸರು ನೊಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಸಂಪರ್ಕ ವಿಳಾಸ: ಡಾ. ವೆಂಕಟೇಶ್.ಎಮ್.ಎಮ್, ತರಬೇತಿ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರು,
ಡಾ. ಸತೀಶ್.ಜಿ.ಎಮ್, ಸಹಾಯಕ ಪ್ರಾಧ್ಯಾಪಕರು,
ಪಶುವೈದ್ಯಕೀಯ ಮಹಾ ವಿದ್ಯಾಲಯ,
ವಿನೋಬನಗರ, ಶಿವಮೊಗ್ಗ- 577204.
ಮೊಬೈಲ್:9113938922, 9448224595.