ಶಿವಮೊಗ್ಗ ಡಿಸೆಂಬರ್ 08 : ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.92(ಕಿ.ಮೀ: 103/900-104/100) ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಡಿಸೆಂಬರ್ 9 ರ ಸಂಜೆ 7 ಗಂಟೆಯಿಂದ ಡಿಸೆಂಬರ್ 10 ರ ಬೆಳಿಗ್ಗೆ 7 ಗಂಟೆವರೆಗೆ ಗೇಟ್‍ನ್ನು ಮುಚ್ಚುವುದರಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ಡಿ.9 ರ ಸಂಜೆ 7 ಗಂಟೆಯಿಂದ ಡಿ.10 ರ ಬೆಳಿಗ್ಗೆ 7 ಗಂಟೆವರೆಗೆ ರಿಪ್ಪನಪೇಟೆ, ಗರ್ತಿಕೆರೆ, ಮೂಗುಡ್ತಿ, 5ನೇ ಮೈಲಿಕಲ್ಲು ಹಾಗೂ ಹಾರನಹಳ್ಳಿ, ಗುಳು ಗುಳಿ ಶಂಕರ, ಬೆಳ್ಳೂರು, ಮೂಗುಡ್ತಿ, ರಿಪ್ಪನಪೇಟೆ ಈ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದೆಂದು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೊರಡಿಸಿದ್ದಾರೆ.

error: Content is protected !!