ನಾವುಗಳು ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಮರಗಳು ಬೆಳೆಸಬೇಕಾದ ಜವಾಬ್ಬಾರಿ ನಮ್ಮ ಮೇಲಿದೆ. ವಾತವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು, ಅರಣ್ಯದ ವಿಸ್ತೀರ್ಣ ಹೆಚ್ಚುಸುವುದು ಪ್ರಸ್ತುತ ದಿನಗಳಲ್ಲಿ ಆಗದ ವಿಷಯವಾಗಿದೆ. ಆದ್ದರಿಂದ ಜನರು ಈ ವಿಷಯವನ್ನು ಗಣನೆಯಲ್ಲಿ ಇಟ್ಟುಕೊಂಡು ನಮ್ಮ ಗ್ರಾಮ / ನಗರ ಪ್ರದೇಶದಲ್ಲಿ ( ಸಸ್ಯದ ಬೆಳವಣಿಗೆಗೆ ಅವಶ್ಯ ಇರುವ ಸ್ಥಳದ ಅಂದಾಜಿನ್ನು ಅನುಸರಿಸಿ) ಮನೆಯ ಸುತಮುತ್ತ ಮತ್ತು ಮನೆಯ ಒಳಬಾಗದಲ್ಲಿ ಬೆಳೆಸಬಹುದಾದಂತಹ ಸಸ್ಯಗಳನ್ನು ಬೆಳಸಿದರೆ ನಾವು ಜೀವಿಸಲು ಅವಶ್ಯ ಇರುವ ಆಮ್ಲಜನಕವನ್ನು ಪಡೆಯಬಹುದಾಗಿದೆ.ಇದರಿಂದ ನಮ್ಮಗಳ ಆರೋಗ್ಯ ಕೂಡ ವೃದ್ದಿಸುತ್ತದೆ.
ಹೀಗೆ ಬೆಳಸುವಂತಹ ಸಸ್ಯಗಳು ನಮಗೆ ಅವಶ್ಯ ಇರುವ ಆಮ್ಲಜನಕ ಮತ್ತು ಉಸಿರಾಟಕ್ಕೆ ತೊಂದರೆ ಉಂಟುಮಾಡುವ ವಿಷಪೂರಿತ ಇಂಗಾಲದ ಡೈ ಆಕ್ಷೈಡನ್ನು ಸಮತೋಲನದಲ್ಲಿ ಇಡಲು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸಹಕರಿಸುತ್ತವೆ. ಮನೆಯ ಒಳಬಾಗದಲ್ಲಿ ಉತ್ಪತ್ತಿ ಆಗುವಂತಹ ಬೆಂಜೀನ್, ಕ್ಷೈಲೀನ್ , ಅಮೋನಿಯ, ಟ್ರೈ ಕ್ಲೋರೋ ಇಥಿಲೀನ್, ಫಾರ್ಮಾಡಿಹೈಡ್ ನಂತಹ ವಿಷಪೂರಿತ ರಾಸಯನಿಕಗಳು ತಲೆನೋವು, ಕಣ್ಣಿನ ಉರಿ, ತಲೆತಿರುಗುವಿಕೆ, ವಾಂತಿ ಮುಂತಾದ ಅನಾರೋಗ್ಯಕ್ಕೆ ಕಾರಣವಾದ ಮಾಲಿನ್ಯಕಾರಕಗಳು ಸಸ್ಯಗಳ ಎಲೆಗಳ ರಂದ್ರದ ಮತ್ತು ಬೇರಿನ ಮೂಲಕ ಮಣ್ಣಿನಲ್ಲಿ ಸೇರಿ ಸೂಕ್ಷ್ಮಾಣು ಜೀವಿಗಳಿಂದ ವಿಭಜಿಸಲ್ಪಡುತ್ತವೆ ಹಾಗೂ ಕೆಲವು ಮಾಲಿನ್ಯಕಾರಕಗಳು ಸಸ್ಯಗಳಿಂದ ವಿಭಜಿಸಲ್ಪಡುತ್ತವೆ.
ವಾತವರಣವು ಹಲವಾರು ಅನಿಲಗಳ ಮಿಶ್ರಣವಾಗಿದ್ದು ಅದರಲ್ಲಿ ಸಾರಜನಕ 78.08 %, ಆಮ್ಲಜನಕ 20.94 %, ಆರ್ಗಾನ್ 0.93 %, ನೀರಾವಿ 0-4 %, ಇಂಗಾಲದ ಡೈಆಕ್ಷೈಡ್ 0.03 % , ಹಾಗೂ ಉದಾತ್ತ ಅನಿಲಗಳಾದ ಹೀಲಿಯಂ 0.0005 %, ನಿಯಾನ್ 0.0018 % ಕ್ರಿಪ್ಟಾನ್ 0.0001 %, ಸಾರಜನಕದ ಆಕ್ಷೈಡ್, ಓಝೋನ್, ಕ್ಷೆನಾನ್, ಅಮೋನಿಯ, ಕಾರ್ಬನ್ಮೋನಾಕ್ಷೈಡ್, ಮುಂತಾದ ಅನಿಲಗಳು ಇವೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಜನರಿಗೆ ಉದ್ಯೋಗ ನೀಡಲು ಮತ್ತು ರಾಷ್ಟ್ರದ ಅಭಿವೃದ್ದಿಗೆ ಕೈಗಾರಿಕೆಗಳ ಸಂಖ್ಯೆ ಹೆಚ್ಚುಸುತ್ತಿರುವುದು, ವಾಹನಗಳ ದಟ್ಟಣೆ ಮತ್ತು ಅರಣ್ಯದ ನಾಶದಿಂದ ಜೀವಿಗಳಿಗಿಂತ ಸಸ್ಯಗಳ ಅನುಪಾತ ಕ್ಷೀಣಿಸುತ್ತಿರುವುದು, ಈ ಎಲ್ಲಾ ಕಾರಣಗಳಿಂದ ವಾತವರಣದಲ್ಲಿ ಆಮ್ಲಜನಕದ ಪ್ರಮಾಣ ಕುಂಠಿತಗೊಂಡಿದೆ.ಆದ ಕಾರಣ ನಾವುಗಳು ಅತೀ ಅವಶ್ಯವಾಗಿ ಪ್ರತಿಯೊಬ್ಬರೂ ಕೂಡ ಪರಿಸರ ಸ್ವೇಹಿಯಾದಂತಹ ಗಿಡ ಮರಗಳನ್ನು ಬೆಳೆಸಲೇ ಬೇಕಾಗಿದೆ.ಇದು ನಮ್ಮೆಲ್ಲರ ಜವಾಬ್ದರಿ ಕೂಡ ಆಗಿದೆ.
ಪರಿಸರ ಸ್ನೇಹಿ ಸಸ್ಯಗಳಾದಂತಹ ಬೇವು , ಅರಳಿ , ಆಲ , ಅತ್ತಿ , ಮಾವು , ಹೊಂಗೆ, ಕರಿಭೇವು , ಮಹೋಗನಿ , ಗುಲಮೊಹರ್ , ತಪಸಿ , ಪಿಳಲೆ , ಕದಂಬ , ಬಾಗೆ , ಕಕ್ಕೆ , ಅರ್ಜುನ , ಬಿಲ್ವ ಪತ್ರೆ , ಬನ್ನಿ , ತೆಂಗು , ರಬ್ಬರ್ ಪ್ಲಾಂಟ್ , ಸ್ನೇಕ್ ಪ್ಲಾಂಟ್ , ಫಿಲೋಡೆಂಡ್ರಾನ್ , ಮನಿಪ್ಲಾಂಟ್ , ಲೋಳೆಸರ , ಸೈಡರ್ ಪ್ಲಾಂಟ್ , ಚೈನೀಸ್ಎವರ್ಗ್ರೀನ್ , ಡುಂಬ್ ಕೇನ್ , ಸೇವಂತಿಗೆ, ಪೀಸ್ ಲಿಲ್ಲಿ , ತು:ಳಸಿ , ದಾಸವಾಳ , ಬಿಳಿ ಎಕ್ಕೆ , ಬಸವನಪಾದ , ಮತ್ತು , ಇನ್ನಿತರ ಸಸ್ಯಗಳನ್ನು ಬೆಳೆಸಬಹುದಾಗಿದೆ.
ಸಸ್ಯಗಳನ್ನು ಬೆಳೆಸುವುದರಿಂದ ಮೂಲಕ ವಿಷಪೂರಿತ ಇಂಗಾಲದ ಡೈ ಆಕ್ಷೈಡ್ ಪ್ರಮಾಣ ಕುಗ್ಗುವುದು ಹಾಗೂ ಶುದ್ದವಾದ ಆಮ್ಲಜನಕ ದೊರೆಯುವುದು, ಬೇಡವಾದ ವಿಷಪೂರಿತ ಮಾಲಿನ್ಯಕಾರಕಗಳು ಸಸ್ಯಗಳಿಂದ ನಿಷ್ಕ್ರೀಯ ಗೊಳ್ಳತ್ತವೆ. ನಮ್ಮ ಸುತ್ತಮುತ್ತ ತಂಪಾದ ವಾತವರಣ ಪಡೆಯುದರ ಜೊತೆಗೆ ಪರಿಸರದ ಸೌಂದರ್ಯವನ್ನು ಹೆಚ್ಚಿಸಬಹುದು. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬೇಕಾದ ಬಹು ದೊಡ್ಡ ಆಸ್ತಿಗಳೆಂದರೆ ಉತ್ತಮ ಪರಿಸರ, ಶುದ್ದ ನೀರು, ಶುದ್ದ ಗಾಳಿ, ಪಲವತ್ತಾದ ಮಣ್ಣು, ಶ್ರೀಮಂತ ಜೈವಿಕ ವೈವಿದ್ಯತೆ ಹಾಗೂ ಇವುಗಳ ಕುರಿತಾದ ಜಾಗೃತಿ. ಆದ್ದರಿಂದ ನಮ್ಮ ಈ ಎಲ್ಲಾ ಬೇಡಿಕೆಗಳು ಈಡೇರಬೇಕಾದರೆ ಗಿಡ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು.
ಲೇಖನ: ಶಶಿಕಲಾ ಎಂ.ಜಿ, ಉಪನ್ಯಾಸಕರು, ಪ್ರಥಮದಜೆ೯ ಕಾಲೇಜು, ಶಿಕಾರಿಪುರ, ಮೊಬೈಲ್ ಸಂಖ್ಯೆ: 98803 38392