ಶಿವಮೊಗ್ಗ: ಜನವರಿ-3 : ಮಳೆ ಪ್ರಮಾಣ ಇಳಿಮುಖ, ನೀರಿನ ಸಮಸ್ಯೆ, ಕಲುಷಿತ ವಾತಾವರಣ, ಭೂಮಿಯ ಫಲವತ್ತತೆ ನಾಶದ ಜತೆಗೆ ಪರಿಸರ ನಾಶಕ್ಕೂ ಅರಣ್ಯ ನಾಶ ಕಾರಣವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಬದ್ಧರಾಗಿ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಕರೆ ನೀಡಿದರು.
ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಪರಿಸರ ಅಧ್ಯಯನ ಕೇಂದ್ರ, ಕಿಡ್ಸ್ ಮತ್ತು ಜ್ಞಾನಸಾಗರ ನಾವೆ ಟ್ರಸ್ಟ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಾಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲೆ, ಧನ್ವಂತರಿ ಶಾಲೆ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಅರಣ್ಯ ನಾಶವಾಗುತ್ತಿದ್ದು, ಇದರಿಂದ ಭೂಮಿಯ ತಾಪಮಾನ ಹೆಚ್ಚಾಗಿ ವಾತಾವರಣದಲ್ಲಿ ಅಸಮತೋಲನದಿಂದ ಅತೀವೃಷ್ಠಿ- ಅನಾವೃಷ್ಠಿ ಸಂಭವಿಸಲು ಕಾರಣವಾಗಿದೆ. ಪರಿಸರ ಕಾಪಾಡುವಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಹಿಂದೆÉ ನಮ್ಮ ಜೀವನಕ್ಕೆ ಅನುಸಾರವಾಗಿ ಪರಿಸರ ಹೊಂದಿಕೊಂಡಿತ್ತು. ಆದರೆ ಪ್ರಸುತ್ತ ದಿನಗಳಲ್ಲಿ ಪರಿಸರ ಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, 15 ವರ್ಷದೊಳಗಿನ ಮಕ್ಕಳಿಗೂ ಕೂಡ ಡಯಾಬಿಟಿಸ್‍ನಂತಹ ಕಾಯಿಲೆಗಳಿಗೆ ತುತ್ತಾಗುತ್ತುರುವುದು ಬೇಸರದ ಸಂಗತಿ ಎಂದರು.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಗಾಳಿ ಮುಖ್ಯ. ಹೆಚ್ಚು ಹೆಚ್ಚು ಮರ-ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆÀಸಿ ಸಂರಕ್ಷಿಸೋಣ. ಇದರ ಜೊತೆ ವಿದ್ಯಾರ್ಥಿಗಳು ಸುತ್ತಮುತ್ತಲಿನ ಇತರರಿಗೆ, ಪೋಷಕರಿಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ಹಸಿರು ಕನಸು-ನನಸು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಕೆ.ಎನ್. ಸರಸ್ವತಿಯವರು ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಪರಿಸರದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ತರುವಂತಹ ಸಂಗತಿಯೆಂದು ಹೇಳಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅರಿತು ಪರಿಸರದ ರಕ್ಷಣೆ ಮಾಡಬೇಕು ಹಾಗೂ ಪರಿಸರದ ಕಾಳಜಿಯನ್ನು ಪ್ರತಿಯೊಬ್ಬರು ವಹಿಸಬೇಕÉಂದು ಮೂಲಭೂತ ಕರ್ತವ್ಯಗಳು ಸೂಚಿಸುವುದು. ಇದಕ್ಕೆ ನಮ್ಮ ಪ್ರಾಧಿಕಾರಗಳಿಂದ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಪೋಷಕರು ಹಾಗೂ ಅವರನ್ನು ಸಾಧನೆಯ ಕಡೆ ಕರೆದುಕೊಂಡು ಹೋಗುತ್ತಿರುವ ಶಿಕಕ್ಷರಿಗೆ ಅಭಿನಂದನೆಯನ್ನು ಹೇಳಿದರು. ಪರಿಸರವನ್ನು ಸಂರಕ್ಷಿಸುವ ಜಾಗೃತಿಯ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ಹೆಚ್ಚು ಮಾಡಬೇಕು ಮತ್ತು ಪರಿಸರದ ರಕ್ಷಣೆಗೆ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ ಎಂದು ಮಕ್ಕಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸೊರಬದ ಚಂದ್ರಗುತ್ತಿ ಬೆನ್ನೂರು ಸ.ಹಿ.ಪ್ರಾ.ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ, ಹಸಿರು ಶಾಲೆ ಪ್ರಶಸ್ತಿಗಳನ್ನು 10 ಶಾಲೆಗಳಿಗೆ, ಹಳದಿ ಶಾಲೆ ಪ್ರಶಸ್ತಿಗಳನ್ನು 10 ಶಾಲೆಗಳಿಗೆ ಹಾಗೂ ಧನ್ವಂತರಿ ಶಾಲೆ ಪ್ರಶಸ್ತಿಗಳನ್ನು 2 ಶಾಲೆಗಳಿಗೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಪರಿಸರ ಅಧ್ಯಯನ ಕೇಂದ್ರ ನಿರ್ದೇಶಕ ಜಿ.ಎಲ್. ಜನಾರ್ಧನ ಪ್ರಾಸ್ತವಿಕ ನುಡಿ ಮಾತನಾಡಿದರು. ಪ್ರಶಸ್ತಿ ಪಡೆದ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಹಿರಿಯ ಪರಿಸರ ಅಧಿಕಾರಿ ಸಿ.ಡಿ. ಕುಮಾರ್, ಕಿಡ್ಸ್ ಮತ್ತು ಜ್ಞಾನಸಾಗರ ನಾವೆ ಟ್ರಸ್ಟ್ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಶಿಕ್ಷಣ ಮತ್ತು ಸಾಂಸ್ಕøತಿಕ ಅಕಾಡೆಮಿ ಪಿ.ಕೆ. ಸಂಜೀತ್ ರಾವ್, ಪರಿಸರ ಅಧ್ಯಯನ ಕೇಂದ್ರ ಪ್ರೋ.ಎ.ಎಸ್. ಚಂದ್ರಶೇಖರ್, ಸರ್ವ ಶಿಕ್ಷಣ ಅಭಿಯಾನ ಉಪನಿರ್ದೇಶಕ ಹೆಚ್.ಮುಂಜನಾಥ, ಮುಂತಾದ ಗಣ್ಯರು ಮತ್ತು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.