ಶಿವಮೊಗ್ಗ, ಜೂನ್. 01 : ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ‘ಎ’ಯಿಂದ ‘ಹೆಚ್’ ಬ್ಲಾಕ್ ವರೆಗೂ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ರೀತಿ ಹಂಚಿಕೆಯಾದ ಕೆಲ ಫಲಾನುಭವಿಗಳು ಮನೆ ಕಟ್ಟದೆ ಖಾಲಿ ಬಿಟ್ಟಿದ್ದು ಹಾಗೂ ಇನ್ನು ಕೆಲವರು ಮಾರಾಟ ಮಾಡಿದ್ದು ತಿಳಿದು ಬಂದಿದೆ. ಮದ್ಯವರ್ತಿಗಳು ನಕಲಿ ದಾಖಲೆಗಳನ್ನ ಸೃಷ್ಠಿಸಿ ಜನರಿಂದ ಹಣ ಪಡೆದು ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದು,್ದ ಇಂತಹ ಪ್ರಕರಣಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಜನರು ಆಮೀಷಗಳಿಗೆ ಒಳಗಾಗಬಾರದು ಆದಲ್ಲಿ ಮಹಾನಗರ ಪಾಲಿಕೆಯಾಗಲಿ ಅಥವಾ ಆಶ್ರಯ ಸಮಿತಿಯಾಗಲಿ ಜವಬ್ದಾರರಾಗಿರುವುದಿಲ್ಲ. ಇಂತಹ ವಂಚನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಮಹಾನಗರ ಪಾಲಿಕೆ ಆಯುಕ್ತರು ಅಥವಾ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುವಂತೆ ಆಯುಕ್ತೆ ಚಾರುಲತ ಸೋಮಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.