News Next

ಶಿವಮೊಗ್ಗ, ನವಂಬರ್ 07 : ಶಿವಮೊಗ್ಗ ಮಹಾನಗರಪಾಲಿಕೆಯ ನೈರ್ಮಲ್ಯೀಕರಣ ಹಾಗೂ ಘನತ್ಯಾಜ್ಯ ವಸ್ತುಗಳ ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರವು ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯನ್ವಯ ಶಿವಮೊಗ್ಗದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನ ಹೊಂದಿರುವ ಮಾಲೀಕರು ನಿವೇಶನಗಳಲ್ಲಿ ತ್ಯಾಜ್ಯ, ಗಿಡಗಂಟೆಗಳು ಬೆಳೆದು ನೆರೆಹೊರೆಯ ನಿವಾಸಿಗಳಿಗೆ, ಸಾರ್ವಜನಿಕರಿಗೆ ತೀವ್ರತರಹದ ಕಿರಿಕಿರಿಯಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಆದ್ದರಿಂದ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನದಲ್ಲಿರುವ ತ್ಯಾಜ್ಯ ಹಾಗೂ ಗಿಡಗಂಟೆಗಳನನು ತೆರವುಗೊಳಿಸಿ ಸ್ವಚ್ಚವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ತಪ್ಪಿದಲ್ಲಿ ಪಾಲಿಕೆ ವತಿಯಿಂದ ದಂಡವಿಧಿಸಿ, ಕಾನೂನು ರೀತ್ಯ ಸೂಕ್ತ ಕ್ರಮವಹಿಸಲಾಗುವುದು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!