• ಅತ್ಯುತ್ತಮ ಬಜೆಟ್ ನೀಡಿದ ಹಣಕಾಸು ಸಚಿವರಿಗೆ ಮತ್ತು ಪ್ರೇರಕ ಶಕ್ತಿಯಾದ ಪ್ರಧಾನ ಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

• ಮೊದಲನೇ ಬಾರಿಗೆ ದೇಶದ ಇತಿಹಾಸದಲ್ಲಿ ರೈತರಿಗೆ, ಬಡವರಿಗೆ ಮತ್ತು ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಆಯವ್ಯಯ ಎಂದೂ ಬಂದಿಲ್ಲ.

• 2022ರಲ್ಲಿ ರೈತರ ಆದಾಯ ದ್ವಿಗುಣ ಮಾಡುವ ಗುರಿ ಹೊಂದಿದ್ದು ಎಲ್ಲ ಕ್ರಮ ಕೈಗೊಳ್ಳಲಾಗಿದೆ.

• 100 ಜಲಕ್ಷಾಮ ಜಿಲ್ಲೆಗಳಲ್ಲಿ ವಿಶೇಷ ಯೋಜನೆ ಜಾರಿಗೆ ತಂದಿರುವುದು ಇದರಿಂದ ರೈತರಿಗೆ ಅನುಕೂಲವಾಗಲಿದೆ.

• ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಅವರ ಕಾಲ ಮೇಲೆ ಅವರು ನಿಲ್ಲುವ ಯೋಜನೆ ರೈತರ ವಿದ್ಯುತ್ ಪ್ರಸರಣದ ಮೇಲೆ ಅವಲಂಬನೆ ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.

• ಈ ಯೋಜನೆ 20 ಲಕ್ಷ ರೈತರಿಗೆ ಸೌರ ಪಂಪ್‍ಸೆಟ್‍ಗಳನ್ನು ಒದಗಿಸಲು ಸಹಾಯವಾಗುತ್ತದೆ.

• ಜಮೀನುಗಳಲ್ಲಿ ರೈತರು ರಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವುದು.

• ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಕಿಸಾನ್ ರೈಲ್, ಕಿಸಾನ್ ಉಡಾನ್ ಯೋಜನೆ ರೈತರ ಉತ್ಪಾದನೆ ಸಾಗಿಸಲು ಮತ್ತು ರಫ್ತು ಮಾಡಲು ಸಹಾಯವಾಗಲಿದೆ.

• 2.83 ಲಕ್ಷ ಕೋಟಿ ಕೃಷಿಗೆ ಕಾಯ್ದಿರಿಸಿರುವುದು ಕೃಷಿಗೆ ಆದ್ಯತೆಯನ್ನು ಎತ್ತಿ ತೋರಿಸುತ್ತದೆ.

• ಜನರ ಆರೋಗ್ಯದ ಕಡೆ ಗಮನ ಹರಿಸಲಾಗಿದೆ. 3.6 ಲಕ್ಷ ಕೋಟಿ ಪೈಪ್ ಮುಖಾಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಅನುದಾನ ಒದಗಿಸಲಾಗಿದೆ.

• ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಹಳ ಅನುಕೂಲವಾಗಲಿದೆ. ಇದರಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗುತ್ತದೆ.

• ಬಡವರಿಗೆ ಆನ್‍ಲೈನು ಮುಖಾಂತರ ಪದವಿ ಯೋಜನೆ ವಿದ್ಯಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ. “ಬಡವರಿಗೆ ಅವರ ವಾಸವಿರುವಲ್ಲಿಯೇ ವಿದ್ಯೆ “ ಎನ್ನುವಂತಿದೆ.

• ದೇಶಿ ಉದ್ಯೋಗಶೀಲತೆಗೆ ಆದ್ಯತೆ ನಮ್ಮ ದೇಶ ಜಾಗತಿಕ ಮಟ್ಟಕ್ಕೆ ಏರಿಸುವಲ್ಲಿ ಉದ್ಯೋಗ ಕ್ಷೇತ್ರಕ್ಕೆ ದೊಡ್ಡ ಚಾಲನೆ ಸಿಗಲಿದೆ. 3000 ಸಾವಿರ ಕೋಟಿ ಅನುದಾನ.

• ರಫ್ತಿಗೆ ಆದ್ಯತೆ. ದೇಶದ ಜಿಡಿಪಿಗೆ ದೊಡ್ಡ ಗಾತ್ರದ ಬೆಳವಣಿಗೆಗೆ ಕಾರಣವಾಗಲಿದೆ. ಪ್ರತಿ ಜಿಲ್ಲೆ “ಎಕ್ಸ್‍ಪೋರ್ಟ್ ಹಬ್” ಮಾಡಲು ವ್ಯವಸ್ಥೆ. ಅಭಿವೃದ್ಧಿಗೆ ಎಲ್ಲಾ ಎಂ.ಎಸ್.ಎಂ.ಇ.ಗೆ ದೊಡ್ಡ ಚಾಲನೆ ಸಿಗಲಿದೆ.

• “Tax Payers Charter ” ಆದಾಯ ತೆರಿಗೆದಾರರಿಗೆ ಅಡಚಣೆಯನ್ನು ತೆಗೆಯುವಲ್ಲಿ ಒಂದು ದೊಡ್ಡ ಹೆಜ್ಜೆ. ಇದರಿಂದ ದೇಶದ ಹೆಚ್ಚಿನ ಆದಾಯ ಹರಿದುಬರಲಿದೆ. ಇದರಿಂದ ತೆರಿಗೆ ಕೊಡುವವರಿಗೆ ಕಿರುಕುಳದಿಂದ ಮುಕ್ತಗೊಳಿಸಲಾಗುವುದು.

• ರಾಷ್ಟ್ರೀಯ ನೇಮಕಾತಿ ಆಯೋಗ ಯುವಕರಿಗೆ ಸುಲಭದಲ್ಲಿ ಕೆಲಸ ಪಡೆಯುವಲ್ಲಿ ಸಹಾಯವಾಗಲಿದೆ.

• ಒಟ್ಟಾರೆಯಾಗಿ ಈ ಬಜೆಟ್ ರೈತರಿಗೆ, ಮಹಿಳೆಯರಿಗೆ, ಯುವಕರಿಗೆ, ಕೈಗಾರಿಕೋದ್ಯಮಿಗಳಿಗೆ, ಎಲ್ಲರಿಗೂ ಅನುಕೂಲವಾಗಲಿದ್ದು, ಸರ್ವರನ್ನು ಒಳಗೊಂಡ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಬಜೆಟ್ ಆಗಿದೆ.

  • ಬಿ.ವೈ. ರಾಘವೇಂದ್ರ
error: Content is protected !!