ಶಿವಮೊಗ್ಗ, ಜೂನ್ 01 : ಕೋವಿಡ್ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳ ಸಹಕಾರದಿಂದ ಈ ಮಹತ್ತರವಾದ ಅವಕಾಶ ಲಭಿಸಿದ್ದು, ಸಮಾಜದ ಕಡು ಬಡವರು, ನಿರಾಶ್ರಿತರು, ದುಡಿಮೆ ಇಲ್ಲದ ಶ್ರಮಿಕರು, ಹಸಿವಿನಿಂದ ವೃದ್ದರು ಮತ್ತು ಮಕ್ಕಳು ಉಪವಾಸದಿಂದ ಇರಬಾರದೆಂದು ಒಂದು ತಿಂಗಳಿಗಾಗುವಷ್ಷು ದಿನಸಿ ಪದಾರ್ಥಗಳ ಕಿಟ್ ಗಳನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ. ಇದಕ್ಕೆ ಕಾರಣರಾದ ರೈನ್ ಬೋ ಸಂಸ್ಥೆಯ ಮುಖ್ಯಸ್ಥೆ ವಿದ್ಯಾ ಸುದರ್ಶನ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಅಭ್ಯಾಸ ಮಾಡುತ್ತಿರುವ ಯುವಕರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಶಿವಮೊಗ್ಗ ರೋಟರಿ ಪೂರ್ವ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಮಂಜುನಾಥ ಕದಂ ಹೇಳಿದರು.
ಅವರು ಇಂದು ಬೆಳಗ್ಗೆ ಸಹ್ಯಾದ್ರಿ ಕಾಲೇಜಿನ ಪಕ್ಕ ಬೈಪಾಸ್ ಬಳಿ ಇರುವ ಟಿಂಟ್ ಗಳಲ್ಲಿ ವಾಸಿಸುತ್ತಿರುವ ಎಲ್ಲಾ 56 ಅಲೆಮಾರಿ ಕುಟುಂಬದವರಿಗೆ ಉಚಿತವಾಗಿ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಿ ಮಾತನಾಡಿ, ರೋಟರಿ ಸಂಸ್ಥೆಯು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗ ನಗರ ಮತ್ತು ಹಳ್ಳಿಗಳಲ್ಲಿ ದಿನಗೂಲಿ ಶ್ರಮಿಕ ಅಶಕ್ತ ಹಾಗೂ ನಿರಾಶ್ರಿತರ ಕುಟುಂಬಗಳಿಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ದಿನಸಿ ಪದಾರ್ಥಗಳ ಕಿಟ್, ಮಾಸ್ಕ್, ಮತ್ತು ಸ್ಯಾನಿಟೆಸರ್ ವಿತರಿಸಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗೌರ್ನರ್ ರೋ ಜಿ. ವಿಜಯಕುಮಾರ್ ಅವರು ಟೆಂಟ್ ನಿವಾಸಿಗಳಿಗೆ ಎನ್ 95 ಮಾಸ್ಕ್ ಮತ್ತು ಸ್ಯಾನಿಟೆಸರ್ ವಿತರಿಸುವ ಮೂಲಕ ಇದುವರೆಗೂ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಅನೇಕ ಸಂಸ್ಥೆಗಳ ಜೊತೆಗೂಡಿ ಈ ಸಹಾಯ ಮಾಡಲಾಗಿದೆ. ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಎಸ್ ಎನ್ ಎಂಟರ್ಪ್ರೈಸಸ್ ಮಾಲೀಕರು ಹಾಗೂ ರೋಟರಿ ಶಿವಮೊಗ್ಗ ಪೂರ್ವ ನಿಯೋಜಿತ ಕಾರ್ಯದರ್ಶಿ ರೋ ಸತೀಶ್ಚಂದ್ರ , ಅಧ್ಯಕ್ಷರಾದ ಮಂಜುನಾಥ ಕದಂ , ಎಸ್. ಕೆ. ಡೆವಲಪರ್ಸ್ ನ ಕುಮಾರಸ್ವಾಮಿ, ಹಾಗೂ ಬೆಂಗಳೂರು ರೈನ್ ಬೋ ಸಂಸ್ಥೆಯ ಮುಖ್ಯಸ್ಥೆ ವಿದ್ಯಾ ಸುದರ್ಶನ್ ಸಹಾಯ ಹಸ್ತ ನೀಡಿದ್ದು ಶ್ಲಾಘನೀಯ ಎಂದರು. ಇದರ ಸದುಪಯೋಗ ಪಡೆದುಕೊಂಡ ಎಲ್ಲಾ ಕುಟುಂಬದವರು ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮಾಸ್ಕ್ ಧರಿಸಿ, ಸ್ಯಾನಿಟೆಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಮ್ಮ ಮನೆಯ ಸುತ್ತಲೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನೀವು ಮತ್ತು ನಿಮ್ಮ ಕುಟುಂಬದವರನ್ನು ಆರೋಗ್ಯವಾಗಿರಿಸಲು ಕಾರಣವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸಮಾಜಕ್ಕೆ ಎಲ್ಲರೂ ನೀಡುವ ಕೊಡುಗೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ ಎನ್ ಆರ್ ತರಕಾರಿ ಮಂಡಿಯ ಸುದರ್ಶನ್, ನೆಪ್ಚೂನ್, ಕೀಶೋರ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.