ಶಿವಮೊಗ್ಗ, ಸೆಪ್ಟೆಂಬರ್ 19 ಸಮಾಜ ಕಲ್ಯಾಣ ಇಲಾಖೆಯು 2022-23ನೇ ಸಾಲಿಗೆ ಪರಿಶಿಷ್ಟ ಜಾತಿಗೆ ಸೇರಿದ ಡಾ|| ಬಿ.ಆರ್. ಅಂಬೇಡ್ಕರ್ ಅನುಯಾಯಿಗಳು ರಾಜ್ಯದಿಂದ 3 ರಿಂದ 5ನೇ ಅಕ್ಟೋಬರ್ 2022 ರವರೆಗೆ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿ:26/09/2022 ರೊಳಗಾಗಿ ವೆಬ್‍ಸೈಟ್ www.sw.kar.nic.in ಇಲ್ಲಿ ಸಲ್ಲಿಸುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಕೆ, ಪೃಥ್ವಿ ಮ್ಯಾನ್ಷನ್, ವಿನೋಬನಗರ, 100 ಅಡಿ ರಸ್ತೆ, ಶಿವಮೊಗ್ಗ. ದೂ.ಸಂ.: 08182-249241 ನ್ನು ಸಂಪರ್ಕಿಸುವುದು.