News Next

ಶಿವಮೊಗ್ಗ :ಸೆಪ್ಟಂಬರ್ 29: ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ದಿ: 30/09/2021 ರಂದು ಬೆಳಗ್ಗೆ 10.30ಕ್ಕೆ ಪಾಲಿಕೆ ವ್ಯಾಪ್ತಿಯ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಗಾಗಿ ಖರೀದಿಸಲಾಗಿರುವ ಕಸದ ಬುಟ್ಟಿಗಳನ್ನು ನಗರವಾಸಿಗಳಿಗೆ ಸಾಂಕೇತಿಕ ವಿತರಣೆ ಹಾಗೂ ಪಾಲಿಕೆಯ ಪೌರ ಕಾರ್ಮಿಕರುಗಳಿಗೆ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಶಿವಮೊಗ್ಗ :ಸೆಪ್ಟಂಬರ್ 29: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿ 2021-22ನೇ ಸಾಲಿನ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಕಲೆ, ಸಾಂಸ್ಕøತಿಕ ಸಂಗೀತ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲು ಅರ್ಹ ಮಕ್ಕಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಮಕ್ಕಳು ಯಾವ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಸಾಧಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಜಿಯಲ್ಲಿ ನಮೂದಿಸುವುದು. ರಾಷ್ಟ್ರ/ರಾಜ್ಯ/ಜಿಲ್ಲಾ ಮಟ್ಟದಲ್ಲಿ ಗುರುತಿಸಲಾಗಿರುವ ಸಾಧನೆಯನ್ನು ನಿಖರವಾಗಿರಬೇಕು. ಮಕ್ಕಳು 05 ವರ್ಷದಿಂದ 18 ವರ್ಷ ವಯೋಮಿತಿಯುಳ್ಳವರಾಗಿರಬೇಕು. ಮಗುವಿನ ಜನನ ಪ್ರಮಾಣ ಪತ್ರ ಮತ್ತು ಸಾಧಿಸಿರುವ ಪ್ರತಿಭೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ನೀಡುವುದು ಪತ್ರಿಕಾ ಪ್ರಕಟಣೆಯ ತುಣುಕು/ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿಗಳನ್ನು ಲಗತ್ತಿಸಬೇಕು.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇವರಿಂದ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅಕ್ಟೋಬರ್ 13 ರೊಳಗಾಗಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-250041 ನ್ನು ಸಂಪರ್ಕಿಸಬಹುದಾಗಿದೆ.

ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರಾಯೋಜನೆಗಾಗಿ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಶಿವಮೊಗ್ಗ :ಸೆಪ್ಟಂಬರ್ 29: ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿಯಲ್ಲಿ ಕಲಾವಿದರುಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ನೋಂದಾಯಿತ ಸಂಘ ಸಂಸ್ಥೆಗಳ ಮೂಲಕ ಅರ್ಜಿ ಆಹ್ವಾನಿಸಿದೆ.
ಇಲಾಖೆಯಿಂದ ಕಾರ್ಯಕ್ರಮ ಪಡೆಯಬೇಕಾದಲ್ಲಿ ಸಕಾಲದಲ್ಲಿ 15 ದಿನಗಳ ಮುಂಚೆ ಸಂಘ ಸಂಸ್ಥೆಗಳವರು ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಿದ ನಂತರ ಇಲಾಖೆಗೆ ಭೇಟಿ ನೀಡಿ ಮಾಹಿತಿ ತುಂಬಿಸಿ, ಕಲಾ ತಂಡ ಆ್ಯಪ್ ಮೂಲಕ ಇನ್‍ಸ್ಟಲ್ ಮಾಡಿಸಿಕೊಂಡು, ಕಾರ್ಯಕ್ರಮದ ದಿನಾಂಕವನ್ನು ಛಾಯಾಚಿತ್ರವನ್ನು ಕಲಾತಂಡ ಆ್ಯಪ್ ಮೂಲಕ ಜಿ.ಪಿ.ಎಸ್. ಮಾಡಬೇಕಾಗುತ್ತದೆ. ಜಿಲ್ಲೆಯ ಎಲ್ಲಾ ನೋಂದಾಯಿತ ಸಂಘ ಸಂಸ್ಥೆಯವರು ಇದರ ಸದುಪಯೋಗ ಪಡೆಯುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆ ದೂ.ಸಂ.: 08182-223354ನ್ನು ಸಂಪರ್ಕಿಸುವುದು.

ಬೀದಿನಾಟಕ ಪ್ರದರ್ಶನ ನೀಡಲು ಕಲಾತಂಡಗಳಿಂದ ಅರ್ಜಿ ಆಹ್ವಾನ
ಶಿವಮೊಗ್ಗ :ಸೆಪ್ಟಂಬರ್ 29: ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿಯಲ್ಲಿ ಸಾಮಾಜಿಕ ಅರಿವು ಸಾಂಸ್ಕøತಿಕ ಕಾರ್ಯಕ್ರಮದ ಅನುಸೂಚಿ ಜಾತಿ ಮತ್ತು ಪಂಗಡದ ದೌರ್ಜನ್ಯ ಅಧಿನಿಯಮದಲ್ಲಿರುವ ಅಸ್ಪøಶ್ಯತೆ ನಿವಾರಣೆ ವಿಷಯವನ್ನು ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಬೀದಿ ನಾಟಕಗಳ ಮೂಲಕ ತಿಳಿಯಪಡಿಸಲು ಅರ್ಹ ಆಸಕ್ತ ಪ.ಜಾ ಹಾಗೂ ಪ.ಪಂ.ಗಳ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ಆಸಕ್ತ ಪ.ಜಾ ಮತ್ತು ಪ.ಪಂ.ದ ಬೀದಿ ನಾಟಕ ತಂಡಗಳು ದಿ: 12/10/2021 ರೊಳಗಾಗಿ ಸ್ವವಿವರಗಳೊಂದಿಗೆ ಜಾತಿಪ್ರಮಾಣ ಪತ್ರ, ಈ ಹಿಂದೆ ಮಾಡಿರುವ ಬೀದಿ ನಾಟಕಗಳ ಛಾಯಾಚಿತ್ರಗಳನ್ನು ಲಗತ್ತಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆ ದೂ.ಸಂ.: 08182-223354ನ್ನು ಸಂಪರ್ಕಿಸುವುದು.

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಪ್ರವೇಶ ಶುಲ್ಕ ಪರಿಷ್ಕರಣೆ
ಶಿವಮೊಗ್ಗ: ಸೆಪ್ಟಂಬರ್ 29: ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಪ್ರವೇಶ ಶುಲ್ಕವನ್ನು ದಿನಾಂಕ: 01/10/2021 ರಿಂದ ಜಾರಿಗೆ ಬರುವಂತೆ ವಯಸ್ಕರಿಗೆ ರೂ. 60/- ಹಾಗೂ ಮಕ್ಕಳಿಗೆ ರೂ. 30/- ಗಳಿಗೆ ಹೆಚ್ಚಿಸಿ ಪರಿಷ್ಕರಿಸಲಾಗಿದ್ದು, ಪ್ರವಾಸಿಗರು ಸಹಕರಿಸುವಂತೆ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!