ಶಿವಮೊಗ್ಗದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ”ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು” ಕುರಿತು ತರಬೇತಿ ಕಾರ್ಯಕ್ರಮವನ್ನು 6/1/2021 ರಿಂದ 8/1/2021 ವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ: 6/1/2021 ರಿಂದ 8/1/2021 ವರೆಗೆ (ಮೂರು ದಿನಗಳ ಕಾಲ)
ಸ್ಥಳ: ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ
ತರಬೇತಿ ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ
1. ಈ ತರಬೇತಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು.2. ಕಡ್ಡಾಯವಾಗಿ ಶಿವಮೊಗ್ಗ ಜಿಲ್ಲೆಯವರಾಗಿರಬೇಕು.3. ಈ ತರಬೇತಿ ಕಾರ್ಯಕ್ರಮವು 15 ಜನರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಕರೆ ಮಾಡಿ ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ (8147224517).4. ಈ ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿರುತ್ತದೆ (ಊಟ ಮತ್ತು ವಸತಿ).5. ಆಸಕ್ತ ಯುವಕ-ಯುವತಿಯರಿಗೆ ಮಾತ್ರ ಅವಕಾಶ.6. ತರಬೇತಿಯ ನಂತರ ಪ್ರಮಾಣಪತ್ರವನ್ನು ವಿತರಿಸಲಾಗುವುದು.7. ತರಬೇತಿ ಕಾರ್ಯಕ್ರಮವು ಬೋಧನೆ, ಪ್ರಾಯೋಗಿಕ ಕಲಿಕೆ ಮತ್ತು ಅಧ್ಯಯನ ಪ್ರವಾಸ ಗಳನ್ನು ಒಳಗೊಂಡಿರುತ್ತದೆ.8. ತರಬೇತಿಯಲ್ಲಿ ಭಾಗವಹಿಸ ಬಯಸುವವರು ಕಡ್ಡಾಯವಾಗಿ ಆಧಾರ್ ಪ್ರತಿಯನ್ನು ತರಬೇಕು.