ನಂಜಾಣುಗಳಿಂದ ಉಂಟಾಗುವ ತೊಗರಿಯ ಗೊಡ್ಡು ರೋಗವು ಅಂತವ್ರ್ಯಾಪಿಯಾಗಿದ್ದು ಅಸೆರಿಯಾ ಕಜಾನಿ ಎನ್ನುವ ರಸ ಹೀರುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಶಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆ ರೋಗದ ಸ್ಥಳದಿಂದ ಸುಮಾರು 3 ಕಿ. ಮಿ. ವರೆಗೂ ಪ್ರಸಾರವಾಗುವವು. ರೋಗಾÀಣು ಮತ್ತು ರೋಗಾಣುವಾಹಕ ಮೈಟ್ ನುಶಿಗಳು ಬಂಜರು ಭೂಮಿ ಮತ್ತು ಹೊಲದ ಒಡ್ಡಿನ ಮೇಲೆ ಬೆಳೆದ ತೊಗರಿ ಮತ್ತು ಕಾಡು ತೊಗರಿ ಮಾತ್ರ ಮೀಸಲಾಗಿದ್ದು ಬೇರೆ ಬೆಳೆಯ ಮೇಲೆ ಬರುವುದಿಲ್ಲ. ಬಹು ವಾರ್ಷಿಕ ತೊಗರಿ, ತಾನಾಗಿಯೇ ಬೆಳೆದ ತೊಗರಿ ಗಿಡಗಳು ಮತ್ತು ಕೂಳೆ ತೊಗರಿಯು ರೋಗಾಣುವಿಗೆ ಮತ್ತು ವಾಹಕ ಮೈಟ್ ನುಶಿಗಳಿಗೆ ಆಸರೆ ನೀಡಿ ರೋಗಾಣುವಿನ ಸಂತತಿ ಮುಂದುವರೆಸಲು ಸಹಾಯವಾಗುವವು. ತೊಗರಿಯನ್ನು ಹೆಚ್ಚು ಎತ್ತರದ ಬೆಳೆಗಳಾದ ಜೋಳ ಮತ್ತು ಸೆಜ್ಜೆಯ ಜೊತೆ ಅಂತರ ಬೆಳೆಯಾಗಿ ಬೆಳೆದಾಗ ರೋಗದ ತೀವ್ರತೆ ಹೆಚ್ಚಾಗುವುದು. ಸಾಮಾನ್ಯವಾಗಿ ರೋಗದ ಲಕ್ಷಣಗಳು ಬೇಸಿಗೆಯ ಬಿಸಿಲಿನಲ್ಲಿ ಕಡಿಮೆಯಾಗಿ ಮುಂಗಾರಿನಲ್ಲಿ ಪುನಃ ಮರುಕಳಿಸುವವು. ಬೇಸಿಗೆಯ ನೆರಳು ಮತ್ತು ಆದ್ರ್ರತೆ ಮೈಟ್ ನುಶಿಗಳ ಅಭಿವೃದ್ಧಿಗೆ ಸಹಕಾರಿಯಾಗುವವು. ರೋಗ ಬಂದ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿನ ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುವುದುಂಟು. ಇಂತಹ ಗಿಡದ ಎಲೆಗಳು ಸಣ್ಣದಾಗಿದ್ದು ಮೇಲ್ಬಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೊಸಾಯಿಕ್ ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುತ್ತವೆ. ರೋಗದ ಪ್ರಾರಂಬಿತ ಹಂತದಲ್ಲಿ - ಮೊಸಾಯಿಕ್À ತರಹದ ತಿಳಿ ಹಳದಿ ಬಣ್ಣವು ಎಲೆಯ ನರಗಳಗುಂಟ ಪ್ರಸರಿಸಿ ನರಗಳು ಎದ್ದು ಕಾಣಿಸುವುವು. ರೋಗದ ತೀವ್ರತೆ ಕಡಿಮೆ ಇದ್ದಾಗ ಎಲೆಗಳು, ತಿಳಿ ಹಳದಿ ಬಣ್ಣವಾಗಿದ್ದು ಮೊಸಾಯಿಕ್À ಲP್ಪ್ಷಣಗಳನ್ನು ಹೊಂದಿರುವುವು.
ಸಮಗ್ರ ನಿರ್ವಹಣಾ ಕ್ರಮಗಳು: ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ರೋಗಾಣುವಿನ ಮತ್ತು ರೋಗವಾಹಕ ಮೈಟ್ ನುಸಿಗಳ ಪ್ರಮಾಣ ಕಡಿಮೆ ಮಾಡಲು ಪರ್ಯಾಯ ಬೆಳೆಯಿಂದ ಬೆಳೆಯ ಪರಿವರ್ತನೆ ಮಾಡಬೇಕು. ಈ ರೋಗವನ್ನು ತಡೆದುಕೊಳ್ಳುವ ಅಥವಾ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಬಿ. ಎಸ್. ಎಂ. ಆರ್-736 , ತಳಿ- 811 , ತಳಿ-152 ಎಂಬ ತಳಿಗಳನ್ನು ಉಪಯೋಗಿಸಬೇಕು., ಬೆಳೆಯ ಪ್ರಾರಂಭಿಕ ಹಂತದಲ್ಲಿ ಬೇವಿನ ನುಶಿ ನಾಶಕ 1 ಮಿಲೀ ಪ್ತತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.
ಜಹೀರ್ ಅಹಮದ್ ಬಿ., ಮತ್ತು ರಾಜು ಜಿ. ತೆಗ್ಗೆಳಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ