ಬೇಳೆಕಾಳು ಬೆಳೆಗಳಲ್ಲಿ ತೊಗರಿಯು ಪ್ರಮುಖವಾಗಿರುತ್ತದೆ. ಕೃಷಿ ಇಲಾಖೆಯ ಮಾಹಿತಿಯಂv Éಪ್ರಧಾನ ಬೆಳೆಯಾದ ತೊಗರಿಯು ಪ್ರಸಕ್ತ ಸಾಲಿನಬಿತ್ತನೆಯಾದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲಿ ಲಕ್ಷಹೆಕ್ಷೇರ್ ಬಿತ್ತನೆಯಾಗಿದ್ದು, ರಾಜ್ಯದಲ್ಲಿ 11.6 ಲಕ್ಷಹೆಕ್ಷೇರ್ನಲ್ಲಿ ಬೆಳೆಯಲಾಗುತ್ತಿದೆ. ರೈತ ಬಾಂಧವರು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ಕಳೆದ ವರ್ಷಕ್ಕಿಂತಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿರೈತರುಸದ್ಯದ ದಿನಗಳಲ್ಲಿ ತೊಗರಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಪೋಷಕಾಂಶಗಳ ನಿರ್ವಹಣೆಯ ಜೊತೆಗೆ ಅಧಿಕ ಇಳುವರಿಯನ್ನು ಪಡೆಯಬಹುದು. ಸಾಮಾನ್ಯವಾಗಿ ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಲ್ಲಿ ಬೀಜ ಬಿತ್ತನೆ ಮಾಡಿದ 45-50 ದಿನಗಳ ನಂತರ ಮತ್ತು ದೀರ್ಘಾವಧಿ ತಳಿಗಳಲ್ಲಿ 55-60 ದಿನಗಳಲ್ಲಿ ಮೇಲಿನಿಂದ ಬೆಳೆಯುವ ಕುಡಿಯನ್ನು 5-6 ಸೆಂ.ಮೀ. ಕುಡಿಚಿವುಟುವುದರಿಂದ ಗಿಡಗಳು ಅತಿಎತ್ತರ ಬೆಳೆಯುವುದನ್ನು ತಡೆದು ಹೆಚ್ಚಿನ ಸಂಖ್ಯೆಯಲ್ಲಿಕವಲೊಡೆಯಲು ಮತ್ತುಎರಡನೆಯ ಹಾಗೂ ನಂತರದ ಕವಲುಗಳ ಸಂಖ್ಯೆಯೂ ಹೆಚ್ಚಾಗುವುದರಿಂದ ಪೋಷಕಾಂಶಗಳನ್ನು ಸದುಪಯೋಗಪಡಿಸಿಕೊಂಡುಕಾಳುಗಳ ಗಾತ್ರ ಮತ್ತು ಸಂಖ್ಯೆಯುಹೆಚ್ಚಾಗಿ ಪ್ರತಿಗಿಡದ ಇಳುವರಿಯು ಹೆಚ್ಚಾಗುತ್ತದೆ.
- ತೊಗರಿಯಲ್ಲಿ ಮೊಗ್ಗು ಮತ್ತು ಹೂವು ಉದುರುವುದಕ್ಕೆ ಕಾರಣ ಮತ್ತು ಪರಿಹಾರ: ತೊಗರಿಯು ಬಿತ್ತನೆಯಾದ 45-50 ದಿನಗಳಲ್ಲಿ ಮೊಗ್ಗು ಮತ್ತು ಹೂವು ಉದುರುವುದು ಸ್ವಾಭಾವಿP,Àಕಾಯಿಕೊರಕ ಮತ್ತು ಬಲೆ ಕಟ್ಟುವ ಕೀಡೆಗಳು ಮೊಗ್ಗು ಹಾಗೂ ಹೂಗಳನ್ನು ಹಾನಿ ಮಾಡುವುದರಿಂದ, ಬೆಳೆಯು ಹೂವಾಡುವ ಹಂತದಲ್ಲಿದ್ದಾಗ ಸತತವಾಗಿ ಮೋಡಕವಿದ ವಾತಾವರಣ, 4-5 ದಿವಸ ಮಂಜು ಬಿದ್ದರೆ ಮತ್ತು ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಬೇರುಗಳು ನಿಷ್ಕ್ರಿಯವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಡಿಮೆಯಿಂದ ಗಿಡಗಳು ಬಲಹೀನವಾಗಿ ಹಾಗೂ ಪೋಷಕಾಂಶಗಳ ಕೊರತೆಯಿಂದ ಗಿಡಗಳು ರೋಗಕ್ಕೆತುತ್ತಾಗಿ ಹೂವುಗಳು ಉದುರಿ ಇಳುವರಿ ಕಡಿಮೆಯಾಗುತ್ತದೆ. ಪರಿಹಾರ :ತೊಗರಿಯನ್ನುದಟ್ಟವಾಗಿ ಬಿತ್ತದೆ ಶಿಫಾರಸ್ಸು ಮಾಡಿದಅಂತರವನ್ನು ಅನುಸರಿಸಿ ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದಾಗ ಮಣ್ಣಿನಲ್ಲಿತೇವಾಂಶಕಾಪಾಡಲು ಸರಿಯಾಗಿಎಡೆಕುಂಟೆ ಹೊಡೆದು ಪಲ್ಸ್ ಮ್ಯಾಜಿಕ್ನ್ನು ಬಳಸಬೇಕು.
- ಪೋಷಕಾಂಶಗಳ ನಿರ್ವಹಣೆಗೆ‘ಪಲ್ಸ್ ಮ್ಯಾಜಿಕ್’ ಬಳಕೆ :
ಪಲ್ಸ್ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯವರ್ಧಕಗಳನ್ನು ಹೊಂದಿದೆ. ಪಲ್ಸ್ ಮ್ಯಾಜಿಕ್ಇದರಲ್ಲಿ ಶೇ. 10ರಷ್ಟು ಸಾರಜನಕ, ಶೇ. 40ರಷ್ಟು, ರಂಜಕ, ಶೇ. 3ರಷ್ಟು ಲಘು ಪೋಷಕಾಂಶಗಳು ಮತ್ತು 20 ಪಿಪಿಎಂನಷ್ಟು ಸಸ್ಯ ಪ್ರಚೋದಕಗಳು ಇರುವುದರಿಂದ ದ್ವಿದಳ ಧಾನ್ಯದ ಬೆಳೆಗಳು ದಷ್ಟ-ಪುಷ್ಟವಾಗಿ ಬೆಳೆದು ಹೂ ಮತ್ತು ಕಾಯಿಗಳ ಉದುರುವಿಕೆಯನ್ನುತಡೆಗಟ್ಟಿ ಕಾಯಿ ಕಟ್ಟುವಿಕೆ ಹೆಚ್ಚಾಗಿ ಮತ್ತು ಪ್ರತಿಗಿಡದಲ್ಲಿ ಕಾಯಿಗಳ ಮಾಗುವಿಕೆ ಸಮನಾಗಿರುತ್ತದೆ. ಪಲ್ಸ್ ಮ್ಯಾಜಿಕ್ನ್ನು ಶೇ. 50ರಷ್ಟು ಹೂ ಬಿಟ್ಟಿÁಗ ಮತ್ತು15 ದಿನಗಳ ನಂತರಎಕರೆಗೆ 2 ಕಿ.ಗ್ರಾಂ.ನಂತೆ 200 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು. ಇದರ ಸಿಂಪರಣೆಯಿಂದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕದಲ್ಲಿಗಣನೀಯವಾಗಿ ಹೆಚ್ಚಳವಾಗುತ್ತದೆ. ಇದರಿಂದ ಶೇ. 17-20ರಷ್ಟು ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದು.ಇದು ಕೃಷಿ ಸಂಶೋಧನಾಕೇಂದ್ರ, ಕಲಬುರಗಿಯಲ್ಲಿ ದೊರೆಯುತ್ತದೆ. - ಸಮಗ್ರಕೀಟ ಮತ್ತು ರೋಗ ನಿರ್ವಹಣೆ :
ತೊಗರಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ಬೆಳೆಯ ಪ್ರಾರಂಭಿಕ ಹಂತದಿಂದ ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಬೆಳೆಗಳಿಗೆ ಬಾಧಿಸುವಕೀಟ ಹಾಗೂ ರೋಗಗಳ ಹತೋಟಿಗಾಗಿ ಸಮಗ್ರ ಪೀಡೆ ನಿರ್ವಹಣೆ ವಿಧಾನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಗಳ ಶಿಫಾರಸ್ಸಿನಂತೆ ಅನುಸರಿಸಬೇಕು.
1) ತೊಗರಿಯ ತುದಿ ಜೀಡಿಗಟ್ಟುವ ಬಾದೆ ಹೆಚ್ಚು ಕಂಡಲ್ಲಿ ರೈತರು ಈ ಕೆಳಗೆ ತಿಳಿಸಿದ ಕೀಟ ನಾಶಕಗಳಾದ ಪೆÇ್ರಪೆನೋಫಾಸ್ 50 ಇ.ಸಿ. 2.0ಮಿ.ಲಿ. ಜೊತೆಗೆ 0.5 ಮಿ.ಲಿ. ಡಿ.ಡಿ.ವಿ.ಪಿ (ನುವಾನ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
2) ಎರಡನೇ ಸಿಂಪರಣೆಯಾಗಿ : ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ) ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು.
ಕಷಾಯ ತಯಾರಿಸುವ ವಿದಾನ : 5 ಕಿಲೋ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ 100 ಲೀ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಟು ದ್ರಾವಣ ತೆಗೆಯಿರಿ. ಈ ದ್ರಾವಣಕ್ಕೆ 25 ಗ್ರಾಂ ಸೋಪಿನಪುಡಿಯನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೇವಿನ ಬೀಜ ಸಿಗದಿದ್ದಲ್ಲಿ ಬೇವಿನ ಬೀಜ ಮೂಲದ ಕೀಟನಾಶಕವನ್ನು (1500ಪಿಪಿಎಮ್) 3 ಮಿ.ಲೀ./ಲೀ ನೀರಿಗೆ ಬೆರೆಸಿ ಸಿಂಪಡಿಸಿ.
3) ತೊಗರಿಯಲ್ಲಿ ಎಲೆ ಚುಕೆ ರೋಗದ ನಿರ್ವಹಣೆ ; ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕರ ಕಂದು ಬಣ್ಣದ ಚುಕ್ಕೆ ಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹು ಉದುರುವು. ಉಷ್ಣಾಂಶ 25 ಸಿ. ಕ್ಕಿಂತ ಕಡಿಮೆ ಹಾಗೂ ಮೊಡಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ 3-4 ತಾಸು ಮಂಜು ಇದ್ದಾಗ ರೋಗದ ಬಾದೆಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು.
4) ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು – ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು.
ಜಹೀರ್ಅಹಮ್ಮದ್, ಡಾ.ಯಂಜೀರಪ್ಪ ಎಸ್.ಟಿ., ಡಾ. ರಾಜು ಜಿ. ತೆಗ್ಗೆಳ್ಳಿ
ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು