ತೊಗರಿಯು ಕರ್ನಾಟಕದ ಪ್ರಮುಖ ದ್ವಿದಳ ಬೆಳೆಕಾಳು ಬೆಳೆಯಾಗಿದೆ. ತೊಗರಿಯಲ್ಲಿ ಶೇ. 22.3 ರಷ್ಟು ಪ್ರೋಟಿನ್ ಮತ್ತು ಶೇ. 1.7 ರಷ್ಟು ಕೊಬ್ಬಿನಾಂಶ ಹೊಂದಿದೆ. ಮನುಷ್ಯನಿಗೆ ಉತ್ತಮ ಆಹಾರವಾಗಿದೆ. ಇದರ ಜೊತೆಯಲ್ಲಿ ವಾತವರಣದಲ್ಲಿರುವ ಸಾರಜನಕವನ್ನು ತೊಗರಿ ಗಿಡದ ಬೇರಿನಲ್ಲಿ ಸ್ಥಿತಿ ಕರಿಸಿ ಮಣ್ಣಿನ ಫಲವತ್ತತ್ತೆಯನ್ನು ಸಹ ವೃದಿಸಿಸುತ್ತದೆ. ಇವತ್ತಿನ ಮಾರುಕಟ್ಟೆಯಲ್ಲಿ ಕೀಟ, ರೋಗ ಮತ್ತು ಕಳೆಗಳ ನಿರ್ವಹಣೆಗಾಗಿ ಅನೇಕ ಸಿದ್ದಪಡಿಸಿದ ರಾಸಾಯನಿಕಗಳು ಲಭ್ಯವಿದೆ. ಆದರೆ ಹೂ ಮತ್ತು ಕಾಯಿ ಉದುರುವ ಸಮಸ್ಯೆಯು ಅಧಿಕವಾಗಿದ್ದು. ಇದನ್ನು ತಡೆಗಟ್ಟಲು ಮಾರುಕಟ್ಟೆಯಲ್ಲಿ ರಾಸಾಯನಿಕಗಳ ಕೊರತೆಯು ಅಧಿಕವಾಗಿದೆ. ಹೂ ಮತ್ತು ಕಾಯಿಯನ್ನು ಉದುರುವಿಕೆಯನ್ನು ತಡೆಗಟ್ಟಲು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಅಡಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನ ಕೇಂದ್ರ, ಕಲಬುರಗಿಯಿಂದ ಪಲ್ಸ್ ಮ್ಯಾಜಿಕ್ ಎಂಬ ಉತ್ಪನ್ನವನ್ನು ಹೊರ ತಂದಿದ್ದಾರೆ. ಪಲ್ಸ್ ಮ್ಯಾಜಿಕ್ ಬೆಳೆಕಾಳುಗಳಾದ ತೊಗರಿ, ಹೆಸರು, ಉದ್ದು ಮತ್ತು ಇತರೆ ದ್ವಿದಳ ಧಾನ್ಯಗಳಲ್ಲಿ ಹೂ ಮತ್ತು ಕಾಯಿ ಉದುರುವಿಕೆಯನ್ನು ತಡೆಗಟ್ಟಿ ಇಳುವರಿಯಲ್ಲಿ ಶೇ. 18-20 ರ ವರೆಗೆ ಇಳುವರಿಯನ್ನು ಹೆಚ್ಚಿಸುತ್ತದೆ.
ಪಲ್ಸ್ ಮ್ಯಾಜಿಕ್ ಒಂದು ಮುಖ್ಯ ಮತ್ತು ಲಘು ಪೋಷಕಾಂಶಗಳು ಹಾಗೂ ಸಸ್ಯ ವರ್ಧಕಗಳನ್ನು ಹೊಂದಿದ್ದು ಬೆಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಟ್ಟಿ ತೊಗರಿ ಹಾಗೂ ದ್ವಿದಳ ಧಾನ್ಯದ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸುತ್ತದೆ.
ಪಲ್ಸ್ ಮ್ಯಾಜಿಕ್‍ನಲ್ಲಿರುವ ಪೋಷಕಾಂಶಗಳ ಪ್ರಮಾಣ :
1) ಪೋಷಕಾಂಶಗಳು ಶೇಕದ ಪ್ರಮಾಣ
2) ಸಾರಜನಕ – 10%
3) ರಂಜಕ – 40%
4) ಸಸ್ಯ ಪ್ರಚೋದಕಗಳ – 20 ಪಿ.ಪಿ.ಎಮ್
5) ಲಘುಪೋಷಕಾಂಶಗಳು- 03%
ಪಲ್ಸ್ ಮ್ಯಾಜೀಕ್ ಸಿಂಪಡಿಸುವ ಸಮಯ :
ಬೆಳೆಗಳಲ್ಲಿ ಹೂ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ಪೋಷಕಾಂಶಗಳ ಕೊರತೆಯು ಹೆಚ್ಚಾಗುತ್ತದೆ. ಎಕೆಂದರೆ ರಾಸಾಯನಿಕ ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕದೆ ಇರುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯು ಹೆಚ್ಚಾಗುತ್ತದೆ. ಇದರಿಂದ ಬೆಳೆಗಳ ದೇಹದಲ್ಲಿ ಹಾರ್ಮೊನ್ ಮತ್ತು ಪೋಷಕಾಂಶಗಳ ಅಸಮತೊಲನದಿಂದ ಹೆಚ್ಚಿನ ಹೂ ಮತ್ತು ಕಾಯಿ ಉದುರುತ್ತದೆ. ಆದ್ದರಿಂದ ಪಲ್ಸ್ ಮ್ಯಾಜಿಕನ್ನು ತೊಗರಿಯಲ್ಲಿ ಎರಡು ಬಾರಿ ಸಿಂಪಡಿಸಬೇಕು. ಹೆಸರು ಮತ್ತು ಉದ್ದು ಬೆಳೆಗಳಲ್ಲಿ ಶೇ. 50ರ ಹೂವಾಡುವ ಹಂತದಲ್ಲಿ ಪಲ್ಸ್ ಮ್ಯಾಜಿಕನ್ನು ಒಂದು ಬಾರಿ ಸಿಂಪಡಿಸಬೇಕು. ಪಲ್ಸ್ ಮ್ಯಾಜಿಕ್ 10 ಗ್ರಾಂ. ಪುಡಿ 1 ಲೀಟರ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸಿಂಪಡಿಸಬೇಕು

ಪಲ್ಸ್ ಮ್ಯಾಜಿಕ್‍ನ ಉಪಯೋಗಗಳು :
 ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ತೊಗರಿ ಮತ್ತು ಇತರ ದ್ವಿದಳ ಧಾನ್ಯದ ಬೆಳೆಗಳು ದಷ್ಟ-ಪುಷ್ಟವಾಗಿ ಬೆಳೆಯುತ್ತವೆÉ.
 ಹೂ ಮತ್ತು ಕಾಯಿಗಳ ಉದುರುವಿಕೆಯನ್ನು ತಡೆಗಟ್ಟುತ್ತದೆ.
 ಪಲ್ಸ್ ಮ್ಯಾಜಿಕ್ ಸಿಂಪರಣೆಯಿಂದ ಕಾಯಿ ಕಟ್ಟುವಿಕೆ ಹೆಚ್ಚಾಗುತ್ತದೆ.
 ಪ್ರತಿ ಗಿಡದಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಾಗಿ ಮಾಗುವಿಕೆ ಸಮನಾಗಿರುತ್ತದೆ.
 ಇದರ ಸಿಂಪರಣೆಯಿಂದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕದಲ್ಲಿ ಗಣನೀಯವಾಗಿ ತೂಕ ಹೆಚ್ಚುತ್ತದೆ.
 ಇದರಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
 ಪಲ್ಸ್ ಮ್ಯಾಜಿಕನ್ನು ಯಾವುದೇ ಕೀಟ ಮತ್ತು ಶಿಲೀಂಧ್ರ ನಾಶಕUಳೊಂದಿಗೆ ಸುಲಭವಾಗಿ ಮತ್ತು ಉತ್ತಮವಾಗಿ ಬೆಳೆಗಳಿಗೆ ಸಿಂಪಡಿಸಬಹುದು.

ಆದ್ದರಿಂದ ರೈತರು ಈ ಉತ್ತಮವಾದ ಪೋಷಕಾಂಶಗಳ ಮಿಶ್ರಣವಿರುವ ಪಲ್ಸ್ ಮ್ಯಾಜಿಕ್‍ನ್ನು ದ್ವಿದಳ ಬೆಳೆಗಳಿಗೆ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. 

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ. …ಜಹೀರ ಅಹೆಮದ್‌ ಮೊಬೈಲ್‌ ಸಂಖ್ಯೆ: 9845300326

error: Content is protected !!