ಶಿವಮೊಗ್ಗ: ತೃತಿಯ ಲಿಂಗ ಸಮುದಾಯದ ಮೇಲೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕವಾಗಿ ಆಗುತ್ತಿರುವ ದೌರ್ಜನ್ಯ, ಕಿರುಕುಳ ಖಂಡನೀಯ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಘಟಕದ ಅಧ್ಯಕ್ಷ ಎಸ್.ಬಿ.ಅಶೋಕ್‌ಕುಮಾರ್ ಹೇಳಿದರು.


ಶಿವಮೊಗ್ಗ ನಗರದಲ್ಲಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಘಟಕದಲ್ಲಿ ಆಯೋಜಿಸಿದ್ದ ತೃತಿಯಲಿಂಗಿಗಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 2014ರಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು ತೃತಿಯಲಿಂಗಿಗಳಿಗೂ ಕಾನೂನು ಬದ್ದವಾದ ಹಕ್ಕುಗಳನ್ನು ಸಾಮಾನ್ಯರಿಗೆ ಇರುವಂತೆ ಉದ್ಯೋಗ, ವಿದ್ಯಾಭ್ಯಾಸ, ವ್ಯವಹಾರದಲ್ಲಿ ಸಮಾನ ಹಕ್ಕು ನೀಡಿದೆ. ಅದರೆ ಈ ಕಾಯಿದೆ ಇನ್ನು ಅನುಷ್ಟಾನ ಜಾರಿಗೆ ಬಂದಿಲ್ಲದಿರುವುದು ವಿಷಾದನೀಯ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಅವರು ಗಣೇಶ ಅಂಗಡಿ ಫಾರ್ಮ್ದವರು ಸಮುದಾಯದ ಜನರಿಗೆ ಕೊಟ್ಟಂತ ಪೌಷ್ಟಿಕ ಆಹಾರ ಮತ್ತು ಮಾತ್ರೆಗಳನ್ನು ವಿತರಿಸಿದರು.
ತೃತೀಯ ಲಿಂಗ ಸಮುದಾಯದ ಮೇಲೆ ಮಾನಸಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯ ಆಗುವುದನ್ನು ತಡೆಗಟ್ಟಬೇಕು. ಇವರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ರಕ್ಷ ಸಮುದಾಯ ಸಂಘದ ಯೋಜನೆ ನಿರ್ದೇಶಕ ಮಹಮದ್ ಸೈಫ್ ವುಲ್ಲಾ ಸಭೆಯಲ್ಲಿ ಉಪಸ್ಥಿತರಿದ್ದರು. ಅನಿಲ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ಅಬ್ದುಲ್ ಪ್ರಾರ್ಥಿಸಿದರು. ಸೌಜನ್ಯ ವಂದನಾರ್ಪಣೆ ನಡೆಸಿಕೊಟ್ಟರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!