ಶಿವಮೊಗ್ಗ, ಜುಲೈ 07 : ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿಗೆ ದಿನಾಂಕ: 06-07-2023 ರಿಂದ ನೀರು ಹರಿಸಲಾಗುವುದು.
ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜನ, ಜಾನುವಾರುಗಳೊಂದಿಗೆ ಮುಖ್ಯನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತರಳುವಂತೆ ಹಾಗೂ ಮುನ್ನೆಚ್ಚರಿಕೆಯಿಂದ ಇರುವಂತೆ ಕ.ನೀ.ನಿ.ನಿ ತುಂಗಾ ಮೇಲ್ದಂಡೆ ಯೋಜನೆಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.